ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಸಿನಿಮಾ ರಿಲೀಸ್ ಆಗುವ ಒಂದು ವಾರ ಮೊದಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾ ರಿಲೀಸ್ ಆಗುತ್ತಿದೆ.
ಶತಕೋಟಿ ಸರದಾರ ದರ್ಶನ್ ಅಭಿನಯದ ಕನ್ನಡದ ಒಡೆಯ ಸಿನಿಮಾ ರಿಲೀಸ್ ಡೇಟ್ ಬಹಿರಂಗವಾಗಿದೆ. ಡಿಸೆಂಬರ್ 12ರಂದು ಒಡೆಯ ಸಿನಿಮಾ ತೆರೆಗೆ ಬರ್ತಿದೆ. ಡಿ ಬಾಸ್ ಹಾಗೂ ರಾಘವಿ ಸೂರ್ಯ ಮುಖ್ಯಭೂಮಿಯಲ್ಲಿ ನಟಿಸಿರುವ ಒಡೆಯಗೆ ಎಂ ಡಿ ಶ್ರೀಧರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸಂದೇಶ್ ನಾಗರಾಜ್ ಬಂಡವಾಳ ಹಾಕಿರುವ ಈ ಸಿನಿಮಾದಲ್ಲಿ ದೇವರಾಜ್, ಸಾಧುಕೋಕಿಲಾ ಸೇರಿದಂತೆ ಬಹು ದೊಡ್ಡ ತಾರಾಗಣವಿದೆ.
ಡಿಸೆಂಬರ್ 20ರಂದು ಅಭಿನಯ ಚಕ್ರವರ್ತಿ ಸುದೀಪ್ ಮತ್ತು ಸಲ್ಮಾನ್ ಖಾನ್ ಅಭಿನಯದ ದಬಾಂಗ್ 3 ರಿಲೀಸ್ ಆಗುತ್ತಿದ್ದು, ಈ ಸಿನಿಮಾಕ್ಕೂ ಒಂದು ವಾರ ಮೊದಲೇ ಒಡೆಯ ತೆರೆಕಾಣುತ್ತಿದೆ.
ಈ ವರ್ಷದ ದರ್ಶನ್ ಅಭಿನಯದ ಮೂರನೇ ಸಿನಿಮಾವಿದು. ವರ್ಷದ ಆರಂಭದಲ್ಲಿ ಯಜಮಾನ ರಿಲೀಸ್ ಆಗಿತ್ತು. ಮಧ್ಯದಲ್ಲಿ ಕುರುಕ್ಷೇತ್ರ ಬಂತು. ಈಗ ಒಡೆಯನ ಅವತಾರದಲ್ಲಿ ದರ್ಶನ ನೀಡಲಿದ್ದಾರೆ.