ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರ ಬಗ್ಗೆ ವಿನಯ್ ಗುರೂಜಿ ಅವರು ಅಪಹಾಸ್ಯ ಮಾಡಿದ್ದಾರೆ ಎನ್ನಲಾಗುತ್ತಿದ್ದು ಆ ಕುರಿತಾದ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ ಎನ್ನಲಾಗಿದೆ. ಇನ್ನು ಈ ವಿಡಿಯೋದಲ್ಲಿ ವಿನಯ್ ಗುರೂಜಿ ಅವರು ಸುದೀಪ್ ಅಭಿಮಾನಿಗಳು ಮತ್ತು ಸುದೀಪ್ ಬಗ್ಗೆ ಅಪಹಾಸ್ಯವನ್ನು ಮಾಡಿದ್ದು ಕಾಲನ್ನು ಎಳೆದಿದ್ದಾರೆ.
ಸುದೀಪ್ ಅಭಿಮಾನಿಗಳು ಹೇಳ್ತಾರೆ ನಮ್ಮಣ್ಣ ಹೆಬ್ಬುಲಿ, ಅವರನ್ನು ನೋಡಿದರೆ ರೋಮ ನಿಲ್ಲುತ್ತೆ ,ನಮ್ಮಣ್ಣ ಮಾಣಿಕ್ಯ ಎಂದೆಲ್ಲಾ ಹೇಳುತ್ತಾರೆ.. ಆದರೆ ನಿಜವಾದ ಹುಲಿ ಬಂದರೆ ಕಿಚ್ಚ ಸುದೀಪ್ ಅವರು ನಿಲ್ಲದೆ ಓಡಿ ಹೋಗುತ್ತಾರೆ ಎಂದು ಅಪಹಾಸ್ಯ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ ಎನ್ನಲಾಗುತ್ತಿದೆ. ಇನ್ನು ವಿನಯ್ ಗುರೂಜಿ ಮಾಡಿರುವ ಈ ಅಪಹಾಸ್ಯ ಇದೀಗ ಕಿಚ್ಚ ಸುದೀಪ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು ವಿನಯ್ ಗುರೂಜಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.