ನಾಮ ನಿರ್ದೇಶನ ಆಧಾರದ ಮೇಲೆ ಸಚಿವ ಸ್ಥಾನ ಅಲಂರಿಸುವುದು ಸಾಧ್ಯವಿಲ್ಲ ಎಂಬ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ವಿಶ್ವನಾಥ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆದರೆ ವಿಚಾರಣೆ ನಡೆಸಿದ ನ್ಯಾಯಾಲಯ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿಯುವ ಮೂಲಕ ವಿಶ್ವನಾಥ್ ಸಚಿವರಾಗುವ ಕನಸಿಗೆ ತಣ್ಣೀರು ಎರಚಿತು.
ವಿಶ್ವನಾಥ್ ವಿರುದ್ಧ ಸುಪ್ರೀಂ ತೀರ್ಪು ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಹೆಚ್.ವಿಶ್ವನಾಥ್ ಸುಪ್ರೀಂ ತೀರ್ಪನ್ನು ಸ್ವಾಗತಿಸುತ್ತೇನೆ ಮುಂದೆ ವಕೀಲರ ಬಳಿ ಚರ್ಚಿಸುವೆ ನಂತರ ಏನು ಮಾಡಬೇಕೆಂದು ಯೋಚಿಸುತ್ತೇನೆ.
ವಿಧಾನಸಭೆಯಿಂದ ಆಯ್ಕೆಯಾಗಿದ್ದರೆ ಸಮಸ್ಯೆ ಇರಲಿಲ್ಲ ಈಗ ನಾಮನಿರ್ದೇಶಿತ ಸದಸ್ಯನಾಗಿರೋದು ಸಮಸ್ಯೆ
ಕೋರ್ ಕಮಿಟಿಸಭೆಯಲ್ಲಿ ಮೊದಲು ಚರ್ಚೆಯಾಗಿತ್ತು ಆದರೆ ವಿಧಾನಸಭೆಯಿಂದ ಆಯ್ಕೆ ಬಗ್ಗೆ ಚರ್ಚೆಯಾಗಿತ್ತು ಕೊನೆ ಘಳಿಗೆಯಲ್ಲಿ ಅದು ಬದಲಾಯಿತು ದೆಹಲಿ ಮಟ್ಟದಲ್ಲಿ ಬದಲಾಯಿತು ಎಂದ್ರು ಆದ್ರೆ ಕೊನೆ ಕ್ಷಣದಲ್ಲಿ ಏನಾಯ್ತು ಗೊತ್ತಿಲ್ಲ
ಇಲ್ಲಿ ಯಾರೂ ಏಕಾಂಗಿಗಳಲ್ಲ ವಕೀಲರ ಜೊತೆ ಚರ್ಚಿಸಿ ಮುಂದುವರಿಯುತ್ತೇನೆ ಎಂದು ಎಂಎಲ್ ಸಿ ಹೆಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.