ಬಾಲಿವುಡ್‌ನ ಸ್ಟಾರ್ ನಟ ಸುಶಾಂತ್ ಸಿಂಗ್ ರಜಪುತ್ ಆತ್ಮಹತ್ಯೆ ವಿಷಯ ಮಾಸುವ ಮುನ್ನ ಇದೀಗ ಅವರ ಗೆಳೆಯ ಸಂದೀಪ್ ನಹರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಪ್ರತಿಭಾವಂತ ನಟ ಸಾವಿಗೆ ಶರಣಾಗಿದ್ದಾರೆ. ಕೆಲವು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ಸಂದೀಪ್ ನಹರ್ ರ ಮೃತದೇಹ ಮುಂಬೈ ನ ತಮ್ಮ ಮನೆಯಲ್ಲಿ ಪತ್ತೆಯಾಗಿದ್ದು. ಸಂದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಕಾರಣದ ಬಗ್ಗೆ ಸಂದೀಪ್ ಫೇಸ್‌ಬುಕ್‌ನಲ್ಲಿ ಸುದೀರ್ಘವಾದ ಪೋಸ್ಟ್ ಹಾಕಿದ್ದಾರೆ. ಮುಂಬೈನಲ್ಲಿ ಓರ್ವ ನಟನಾಗಲು ತಾವು ಪಟ್ಟ ಪರಿಶ್ರಮ, ಬಾಲಿವುಡ್‌ನ ರಾಜಕೀಯದಿಂದಾಗಿ ತಾವು ಅವಕಾಶ ವಂಚಿತರಾಗುತ್ತಿರುವುದನ್ನು ವಿವರಿಸಿ ಪೋಸ್ಟ್ ಬರೆದು, ಜೊತೆಗೆ ವಿಡಿಯೋವೊಂದನ್ನ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ,
‘ನನ್ನ ಸಾವಿಗೆ ಯಾರೂ ಕಾರಣರಲ್ಲ ನನ್ನ ಕುಟುಂಬದ ಯಾರೊಬ್ಬರನ್ನೂ ಇದಕ್ಕೆ ಜವಾಬ್ದಾರರನ್ನಾಗಿ ಮಾಡಬಾರದು. ನನ್ನ ವೈಯಕ್ತಿಕ ಮತ್ತು ವೃತ್ತಿಜೀವನದ ಕೆಲವು ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಹೇಳಿರುವ ಸಂದೀಪ್, ತಾವು ಪತ್ನಿಯ ಜೊತೆ ಜಗಳ ಮಾಡಿಕೊಂಡಿರುವುದಾಗಿಯೂ ತಿಳಿಸಿದ್ದಾರೆ.
ಅಕ್ಷಯ್ ಕುಮಾರ್ ಅಭಿನಯದ ‘ಕೇಸರಿ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿರುವ ನಟ ಸಂದೀಪ್ ನಹಾರ್ ಮುಂಬೈನ ತಮ್ಮ ನಿವಾಸದಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈನ ಗೊರೆಗಾಂವ್ ವೆಸ್ಟ್ ಎಸ್‌ಆರ್ವಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.