ಸೆಕ್ಸ್ ಮಾಡದೇ ಬಿಗ್​ಬಾಸ್​ ಮನೆಯಲ್ಲಿ 100 ದಿನ ಇರಲಾಗಲ್ಲ ಎಂಬ ಶಾಕಿಂಗ್​​​ ಹೇಳಿಕೆ ನೀಡಿದ ನಟಿ..!

Date:

ರಿಯಾಲಿಟಿ ಶೋಗಳ ಪೈಕಿ ಜನಪ್ರಿಯವಾಗಿರುವ ಶೋಗಳಲ್ಲೊಂದು ಬಿಗ್​ಬಾಸ್. ಈ ಶೋ ನ ಬಗ್ಗೆ ನಟಿಯೊಬ್ಬರು ಶಾಕಿಂಗ್​​​ ಹೇಳಿಕೆ ನೀಡಿದ್ದಾರೆ.
ಜುಲೈ 21ರಿಂದ ತೆಲುಗು ಬಿಗ್ ಬಾಸ್ ಶುರುವಾಗುತ್ತಿದೆ. ನಟ ನಾನಿ ಬದಲಾಗಿ ಈ ಬಾರಿ ಅಕ್ಕಿನೇನಿ ನಾಗಾರ್ಜುನ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಈ ನಡುವೆ ಫಿದಾ ಸಿನಿಮಾ ಖ್ಯಾತಿಯ ನಟಿ ಗಾಯತ್ರಿ ಗುಪ್ತಾ ಅಚ್ಚರಿ ಹಾಗೂ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಗಾಯತ್ರಿ ಗುಪ್ತಾ 3ನೇ ಆವೃತ್ತಿಯ ಬಿಗ್​ಬಾಸ್​ನಲ್ಲಿ ಪಾಲ್ಗೊಳ್ಳಲು ನನಗೆ ಆಫರ್ ಬಂದಿತ್ತು. 100 ದಿನಗಳ ಕಾಲ ಬಿಗ್​ ಬಾಸ್ ಮನೆಯಲ್ಲಿರಲು ಸೆಕ್ಸ್ ಮಾಡಬೇಕು ಎಂದು ಮಂಚಕ್ಕೆ ಆಹ್ವಾನಿಸಿದ್ದರು ಎಂಬ ಹೇಳಿಕೆ ನೀಡಿದ್ದಾರೆ.


ಅಂತಿಮ ಆಡಿಷನ್​ಗೆ ಆಯೋಜಕರು ಕರೆದಿದ್ದರು. ಸೆಕ್ಸ್ ಮಾಡದೇ ಮನೆಯಲ್ಲಿ 100 ದಿನಗಳ ಕಾಲ ಇರಲು ಸಾಧ್ಯವೇ ಎಂದು ಪ್ರಶ್ನಿಸಿದ್ದರು. ಅಷ್ಟೇ ಅಲ್ಲದೆ ಕಾರ್ಯಕ್ರಮದಲ್ಲಿ ಆಯ್ಕೆ ಆಗ್ಬೇಕಂದ್ರೆ ಮಂಚಕ್ಕೆ ಬರಬೇಕು ಎಂದು ಕಂಡಿಷನ್ ಹಾಕಿದ್ದರು ಎಂದು ಗಾಯತ್ರಿ ಗುಪ್ತಾ ಹೇಳಿದ್ದಾರೆ.
ಬಿಗ್​ ಬಾಸ್​ ಆರಂಭಕ್ಕೆ ಕೆಲವೇ ಕೆಲವು ದಿನಗಳು ಬಾಕಿ ಇದ್ದು, ನಟಿಯ ಹೇಳಿಕೆ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಸಿನಿಮಾ ಕ್ಷೇತ್ರದಲ್ಲಿ ಈ ಆರೋಪ ಬಲವಾಗಿ ಕೇಳಿಬಂದಿತ್ತು. ನಟಿಯರು ಅವಕಾಶಕ್ಕಾಗಿ ಪಲ್ಲಂಗ ಏರಬೇಕು ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಇದೀಗ ಕಿರುತೆರೆ ಮೇಲೂ ಈ ಆರೋಪ ಕೇಳಿ ಬಂದಿರುವುದು ನಿಜಕ್ಕೂ ಬೇಸರದ ಸಂಗತಿ.

Share post:

Subscribe

spot_imgspot_img

Popular

More like this
Related

ಶ್ರೀರಾಮನವಮಿ ಅಂಗವಾಗಿ ಮಾಂಸ ಮಾರಾಟ ನಿಷೇಧ: ಮಾರ್ಚ್ 27ರಂದು ಕಟ್ಟುನಿಟ್ಟಿನ ಆದೇಶ

ಶ್ರೀರಾಮನವಮಿ ಅಂಗವಾಗಿ ಮಾಂಸ ಮಾರಾಟ ನಿಷೇಧ: ಮಾರ್ಚ್ 27ರಂದು ಕಟ್ಟುನಿಟ್ಟಿನ ಆದೇಶ ಬೆಂಗಳೂರು:...

ಕಾಂಗ್ರೆಸ್ ಮುಖಂಡನ ಮೇಲೆ ಕೊಲೆ ಯತ್ನ: ಚಾಕು ಇರಿದು ದುಷ್ಕರ್ಮಿಗಳು ಪರಾರಿ

ಕಾಂಗ್ರೆಸ್ ಮುಖಂಡನ ಮೇಲೆ ಕೊಲೆ ಯತ್ನ: ಚಾಕು ಇರಿದು ದುಷ್ಕರ್ಮಿಗಳು ಪರಾರಿ ಕಾರವಾರ:...

ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಏರಿಕೆ; ಇಂದಿನ ರೇಟ್ ಇಷ್ಟಿದೆ ನೋಡಿ!

ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಏರಿಕೆ; ಇಂದಿನ ರೇಟ್ ಇಷ್ಟಿದೆ ನೋಡಿ! ಬೆಂಗಳೂರು:...

ಇರಾನ್–ಇಸ್ರೇಲ್ ಯುದ್ಧ: ಬೆಳಗಾವಿಯಲ್ಲಿ ಪೆಟ್ರೋಲ್ ಪಂಪ್ʼಗಳ ಮುಂದೆ ಜನಸಾಗರ

ಇರಾನ್–ಇಸ್ರೇಲ್ ಯುದ್ಧ: ಬೆಳಗಾವಿಯಲ್ಲಿ ಪೆಟ್ರೋಲ್ ಪಂಪ್ʼಗಳ ಮುಂದೆ ಜನಸಾಗರಬೆಳಗಾವಿ: ಇರಾನ್ ಮತ್ತು...