ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ

Date:

ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ

ದಿನೇ ದಿನೇ ಮೀಟರ್ ಬಡ್ಡಿ ದಂಧೆಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಎಲ್ಲರನ್ನು ಬಲಿ ಪಡೆದುಕೊಳ್ಳುತ್ತಿರುವ ಬಡ್ಡಿ ದಂಧೆ ಇದೀಗ ದೇವರಿಗೆ ಪೂಜೆ ಮಾಡುವ ದೇವಸ್ಥಾನದ ಅರ್ಚಕನ ಪ್ರಾಣವನ್ನು ಬಲಿ ತೆಗೆದುಕೊಂಡಿದೆ.
ಒಂದಲ್ಲ ಅಂತ ಮೂರು ದೇವಸ್ಥಾನಗಳಲ್ಲಿ ದೇವರಿಗೆ ಪೂಜೆ ಮಾಡುವುದರ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದ ಯುವ ಅರ್ಚಕನೋರ್ವ ಸಾಲಗಾರರ ಕಿರುಕುಳ ತಾಳಲಾರದೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಸುಲ್ತಾನಪೇಟೆ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಮಾಡಿಕೊಂಡ ಆರ್ಚಕ ಕೆ.ವಿ.ರಾಘವೇಂದ್ರ(30) ಎಂದು ಗುರುತಿಸಲಾಗಿದೆ. ಸುಲ್ತಾನಪೇಟೆ ಗ್ರಾಮದ ಸಪ್ಪಲಮ್ಮ ದೇವಸ್ಥಾನ ಹಾಗೂ ನಂದಿಗ್ರಾಮದ ಮಾರಮ್ಮ ದೇವಸ್ಥಾನ ಸೇರಿದಂತೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅರ್ಚಕನಾಗಿದ್ದ ರಾಘವೇಂದ್ರ, ಅಕ್ಷತಾ ಕೋ ಆಪರೇಟಿವ್ ಸಂಘದಲ್ಲಿ ಏಜೆಂಟ್ ಆಗಿ ನಷ್ಟವಾದಾಗ ನಂದಿ ಗ್ರಾಮದ ಜೆ.ಸಿ.ಬಿ ಮಂಜುನಾಥ್, ಗುರುಮೂರ್ತಿ, ಅಜಯೇಂದ್ರ ಬಾಬು, ಪ್ರಾಧ್ಯಾಪಕ ರಾಮಚಂದ್ರಪ್ಪ, ಎನ್.ಎಂ.ಮುನಿರಾಜು, ಎನ್.ಎಲ್ ನರೇಂದ್ರ ಬಾಬು ಬಳಿ ಸಾಲ ಪಡೆದಿದ್ದಾರೆ.
ಆದ್ರೆ ಇತ್ತೀಚೆಗೆ ಸಾಲಗಾರರು ಮೀಟರ್ ಬಡ್ಡಿ ವಿಧಿಸಿ ಹಣ ಕೊಡುವಂತೆ ಬೆದರಿಕೆ ಹಾಕಿ ಕಿರುಕುಳ ನೀಡುತ್ತಿದ್ಧಾರೆ. ಹೀಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ರಾಘವೇಂದ್ರ ಡೆತ್ ನೋಟ್ ಬರೆದು, ಸೆಲ್ಫಿ ವೀಡಿಯೋನಲ್ಲಿ ಹೇಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರಿಂದ ಮೃತನ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ನ್ಯಾಯಕ್ಕಾಗಿ ನಂದಿಗಿರಿಧಾಮದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆತ್ಮಹತ್ಯೆಗೆ ಶರಣಾಗಿದ್ದ ರಾಘವೇಂದ್ರನನ್ನು ಮಂಗಳವಾರ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಿದರು. ಆದ್ರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿರಲಿಲ್ಲ. ಈ ಮಧ್ಯೆ ಮನೆ ಕ್ಲೀನ್ ಮಾಡುವ ವೇಳೆ ಸಿಕ್ಕ ಡೆತ್ ನೋಟ್ ಹಾಗೂ ಡೆತ್ ನೋಟ್‍ನಲ್ಲಿ ಮೊಬೈಲ್‍ನಲ್ಲಿ ವೀಡಿಯೋ ಮಾಡಿರುವ ಬಗ್ಗೆ ರಾಘವೇಂದ್ರ ಬರೆದಿದ್ದು, ಫೋನ್ ಆನ್‍ಲಾಕ್ ಹೇಗೆ ಮಾಡಬೇಕೆಂಬುವುದನ್ನು ಸಹ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಬಳಿಕ ರಾಘವೇಂದ್ರ ಮೊಬೈಲ್ ಫೋನ್ ಪರಿಶೀಲಿಸಿದಾಗ ಸಾವಿನ ಸತ್ಯ ಬಹಿರಂಗಗೊಂಡಿದೆ.

ಲವ್ , ಇದು ಪ್ರತಿಯೊಬ್ಬರ ಜೀವನದಲ್ಲೂ ಮಾಮೂಲಿ. ಲವ್ ಆಗುವುದು, ಬ್ರೇಕಪ್ ಆಗುವುದು ಎಲ್ಲಾ ಕಾಮನ್.

ಪ್ರೀತಿ ಹೇಗೆ ಹುಟ್ಟುತ್ತೆ ಎಂದು ಗೊತ್ತಾಗುವುದಿಲ್ಲವೋ? ಅದೇರೀತಿ ಹೇಗೆ ಬ್ರೇಕಪ್ ಆಗುತ್ತದೆ ಎಂದೂ ಕೂಡ ಹೇಳಲಾಗಲ್ಲ.
ಎಲ್ಲರೂ ಲವ್ವರನ್ನೇ ಮದ್ವೆ ಆಗ್ತೀವಿ ಅನ್ನೋದು ಸುಳ್ಳು. ಕೆಲವರು ಮಾತ್ರ ಪ್ರೀತಿಸಿದವರನ್ನೇ ಮದ್ವೆ ಆಗೋ ಯೋಗ ಹೊಂದಿರ್ತಾರೆ.‌
ಲವ್ ಯಕ್ಕುಟ್ಟು ಹೋಗಿ ಮನೆಯಲ್ಲಿ ತೋರಿಸಿದ ಹುಡ್ಗಿಯನ್ನೋ ಅಥವಾ ತಮಗಾದ ಎರಡನೇ ,‌ಮೂರನೇ ಲವ್ವರನ್ನೋ ಕಟ್ಟಿಕೊಳ್ಳಲು ಮುಂದಾದಾಗ ಎಲ್ಲಿ ಹಳೇ ಲವ್ ಗೊತ್ತಾದಾಗ ತೊಂದ್ರೆ ಆಗುತ್ತಾ ಎಂದು‌ ಮುಚ್ಚಿಡೋರು ತುಂಬಾ ಜನ.
ಆದರೆ, ಯಾವುದೇ ಕಾರಣಕ್ಕೂ ಮದುವೆ ಆಗುವ ಹುಡುಗಿ/ ಹುಡಗನಲ್ಲಿ ನಿಮ್ಮ ಎಕ್ಸ್ ಲವ್ ಸ್ಟೋರಿ‌ ಮುಚ್ಚಿಡಲೇ ಬೇಡಿ. ನೀವು ಮೊದಲೇ ಹೇಳಿ ಕೊಂಡರೆ ಒಳ್ಳೆಯದು‌ . ಆಮೇಲೆ ಹೇಗೋ ನಿಮ್ಮವರಿಗೆ ತಿಳಿಯಿತೆಂದರೆ ಕಷ್ಟ. ಇದು ಹುಡುಗ , ಹುಡುಗಿ ಇಬ್ಬರಿಗೂ ಅನ್ವಯ ಆಗುತ್ತದೆ.

ಕೋಲ್ಕತ್ತಾ: ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇಂದು ಡಿಸ್ಚಾರ್ಜ್ ಆಗಿದ್ದಾರೆ.
ವುಡ್ ಲ್ಯಾಂಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ದಾದಾ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ ಆಸ್ಪತ್ರೆಯ ವೈದ್ಯರಿಗೆ ಧನ್ಯವಾದ ತಿಳಿಸಿದರು. ಅಲ್ಲದೆ ಈವಾಗ ನಾನು ಆರಾಮಾಗಿದ್ದೇನೆ ಎಂದು ಹೇಳಿದರು.
ಮನೆಯಲ್ಲಿ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ದಾದ ತಲೆ ತಿರುಗಿ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೂಡಲೇ ಅವರ ಹೃದಯದ ರಕ್ತನಾಳದಲ್ಲಿರುವ ಬ್ಲಾಕ್‍ಗಳನ್ನು ತೆರವುಗೊಳಿಸಲಾಗಿತ್ತು. ಒಂದು ಸ್ಟೆಂಟ್ ಕೂಡ ಅಳವಡಿಸಲಾಗಿತ್ತು.
ಸೌರವ್ ಗಂಗೂಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಗಣ್ಯರು, ಅಭಿಮಾನಿಗಳು ಶೀಘ್ರ ಚೇತರಿಸಿಕೊಂಡು ವಾಪಸ್ ಬರುವಂತೆ ಹಾರೈಸಿದ್ದರು. ಪ್ರಧಾನಿ ನರೇಂದ್ರ ಮೋದಿ ಕೂಡ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು. ಗಂಗೂಲಿ ಪತ್ನಿ ಜೊತೆ ಮಾತಾನಾಡಿದ ಮೋದಿ ಬಳಿ ಗಂಗೂಲಿ ಜೊತೆ ಮಾತಾಡಿ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ ಶೀಘ್ರವೇ ಗುಣಮುಖರಾಗುವಂತೆ ಸೂಚಿಸಿದ್ದರು.

—+

ಬಹುನಿರೀಕ್ಷಿತ ಕೋವಿಡ್‌ ಲಸಿಕೆ ವಿತರಣೆ ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಅದರ ಪುರ್ವಾಭ್ಯಾಸಕ್ಕೆ ಶುಕ್ರವಾರ ರಾಜ್ಯದಲ್ಲೂ ಚಾಲನೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸಿದ್ದತೆಗಳನ್ನು ಆರೋಗ್ಯ ಇಲಾಖೆ ನಡೆಸುತ್ತಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಡ್ರೈ ರನ್‌ ನಡೆಯಲಿದ್ದು ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಆರೋಗ್ಯ ಕೇಂದ್ರ, ಜಿಲ್ಲಾ ಆರೋಗ್ಯ ಕೇಂದ್ರಗಳು ತಾಲೀಮು ನಡೆಸಲು ಸಜ್ಜಾಗುತ್ತಿವೆ. ಆರಂಭಿಕ ಹಂತದಲ್ಲಿ ಬೆಂಗಳೂರು, ಬೆಳಗಾವಿ, ಮೈಸೂರು, ಕಲಬುರ್ಗಿ ಹಾಗೂ ಶಿವಮೊಗ್ಗದಲ್ಲಿ ಲಸಿಕೆ ವಿತರಣೆ ಡ್ರೈರನ್ ನಡೆಸಲಾಗಿತ್ತು.
ಕೇಂದ್ರದ ಸೂಚನೆಯಂತೆ ನಡೆದ ಈ ತಾಲೀಮು ಯಶಸ್ವಿಯಾಗಿತ್ತು. ಪ್ರತಿ ಕೇಂದ್ರದಲ್ಲಿ ಡ್ರೈರನ್‌ಗಾಗಿ 25 ಮಂದಿ ಆರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿತ್ತು. ಲಸಿಕೆ ಪಡೆಯಲು ಬಂದವರ ದಾಖಲೆ ಪರಿಶೀಲನೆ ನಡೆಸಿ ಬಳಿಕ ಲಸಿಕೆ ನೀಡಿ ಅವರ ಮೇಲೆ ನಿಗಾ ಇಡುವ ಪ್ರಕ್ರಿಯೆ ಯಶಸ್ವಿಯಾಗಿದೆ.
ಇದೀಗ ರಾಜ್ಯಾದ್ಯಂತ ಈ ಪ್ರಕ್ರಿಯೆಯನ್ನು ನಡೆಸಲು ಆರೋಗ್ಯ ಇಲಾಖೆ ಸಜ್ಜಾಗಿದ್ದು ಇದಕ್ಕಾಗಿ ಸರ್ಕಾರಿ ಕ್ಷೇತ್ರದ 2,73,211 ಆರೋಗ್ಯ ಕಾರ್ಯಕರ್ತರು ಹಾಗೂ ಖಾಸಗಿ ಕ್ಷೇತ್ರದ 3,57,313 ಆರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿದೆ. ಸುಮಾರು 10 ಸಾವಿರ ಸಿಬ್ಬಂದಿಗಳು ಈ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.
ದೇಶದಾದ್ಯಂತ ಕೋವಿಡ್‌ ಲಸಿಕೆ ಅಣಕು ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳ ಆರೋಗ್ಯ ಸಚಿವರ ಜೊತೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಗುರುವಾರ ವಿಡಿಯೋ ಸಂವಾದ ನಡೆಸಲಿದ್ದಾರೆ. ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಈ ಸಂವಾದದಲ್ಲಿ ಪಾಲ್ಗೊಂಡು ರಾಜ್ಯದಲ್ಲಿನ ಸಿದ್ಧತೆಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಿದ್ದಾರೆ.

 

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...