ಭಾರತದ ಇಂಟರ್‍ನೆಟ್ ಜಾಲದಲ್ಲಿ ಅಪನಂಬಿಕೆ ಮೂಲ ಸೃಷ್ಟಿಸುವಲ್ಲಿ ಸೈಬರ್ ಅಪರಾಧಿಗಳು ನಂಬರ್ ಒನ್ ಸ್ಥಾನದಲ್ಲಿದ್ದು, ಸಾಮಾಜಿಕ ಮಾಧ್ಯಮ ಕಂಪನಿಗಳು ತಮ್ಮಲ್ಲಿ ಅಪನಂಬಿಕೆಗೆ ಕಾರಣವಾಗಿದೆ ಎಂದು ಶೇ. 79ರಷ್ಟು ಮಂದಿ ಹೇಳಿದ್ದಾರೆ.
2018ರ ಅವಧಿಯಲ್ಲಿ ಜಾಲತಾಣ ನಿರ್ವಹಿಸುವ ಕಂಪನಿಗಳ ಬಗ್ಗೆ ಶೇ.74ರಷ್ಟು ಮಂದಿ ತಮ್ಮ ಅಪನಂಬಿಕೆಯನ್ನು ಹೊರಹಾಕಿದ್ದರು. ಪ್ರಸ್ತುತ ಈ ಅಪನಂಬಿಕೆ ಶೇ.5ರಷ್ಟು ಅಂದರೆ ಶೇ.79ರಷ್ಟು ಜನ ಸೈಬರ್ ಅಪರಾಧಗಳ ಬಗ್ಗೆ ಆತಂಕ ವ್ಯಕ್ತಪಡಿಸುವ ಜೊತೆಗೆ ಸೋಷಿಯಲ್ ಮೀಡಿಯಾ ಕಂಪನಿಗಳ ವಿರುದ್ಧ ನಂಬಿಕೆ ಕಳೆದುಕೊಂಡಿದ್ದಾರೆ.
ಇದೇ ವೇಳೆ ಶೇ60ರಷ್ಟು ಭಾರತೀಯರು ಡೇಟಾ ಪ್ರೊಟೆಕ್ಷನ್(ದತ್ತಾಂಶ ಮಾಹಿತಿ ರಕ್ಷಣೆ ಮತ್ತು ಖಾಸಗಿ ನಿಯಮಗಳ ಬಗ್ಗೆ ಸ್ಪಷ್ಟ ಅರಿವು ಹೊಂದಿದ್ದಾರೆ. ಇದು ಆರೋಗ್ಯಕರ ಬೆಳವಣಿಗೆಯಾಗಿದ್ದು, ಜಾಗತಿಕ ಸರಾಸರಿ ಶೇ.44ರಷ್ಟು ಮಂದಿ ಹೊಂದಿರುವ ಜಾಗೃತಿಗಿಂತಲೂ ಇದು 16 ಪಟ್ಟು ಹೆಚ್ಚಳವಾಗಿದೆ.
ಇದೇ ಕಾರಣಕ್ಕಾಗಿ ಜಾಗೃತರಾಗಿರುವ ಮಂದಿ ಸೈಬರ್ ಅಪರಾಧಿಗಳ ಕೃತ್ಯ ಮತ್ತು ಸೋಶಿಯಲ್ ಮಿಡಿಯಾ ಕಂಪನಿಗಳ ಕಾರ್ಯ ನಿರ್ವಹಣೆ ಬಗ್ಗೆ ಆತಂಕ ವ್ಯಕ್ತಪಡಿಸಿದರು.