ಸೊಂಟ ನೋವಿನಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಅಡುಗೆಮನೆಯಲ್ಲಿಯೇ ಇದಕ್ಕೆ ಪರಿಹಾರ
ಇತೀಚಿನ ದಿನಗಳಲ್ಲಿ ಬಹಳಷ್ಟು ಜನರಿಗೆ ಸೊಂಟ ನೋವು ಅಥವಾ ಬೆನ್ನಿನ ಕೆಳಗಭಾಗದಲ್ಲಿ ನೋವು ಕಾಣಿಸುವುದು ಸಾಮಾನ್ಯವಾಗಿಬಿಟ್ಟಿದೆ . ಇದಕ್ಕೆ ಹಲವಾರು ಕಾರಣಗಳಿರಬಹುದು . ಇತ್ತೀಚಿನ ಇರುವ ಮನುಷ್ಯನ ಜಡತ್ವ ಜೀವನ ಶೈಲಿ ಕೂಡ ಇದಕ್ಕೆ ಮುಖ್ಯ ಕಾರಣ ಎನ್ನುತ್ತಾರೆ ತಜ್ಞರು. ದಿನದಲ್ಲಿ ಬಹಳ ಹೊತ್ತು ಒಂದೇ ಕಡೆ ಕೂರುವುದು , ಹೆಚ್ಚು ಸಮಯ ಬೈಕ್ ಅಥವಾ ಕಾರ್ ಓಡಿಸುವುದು , ದೇಹದಲ್ಲಿ ವಿಟಮಿನ್ ಕೊರತೆ, ಕೂರುವಾಗ, ನಿಲ್ಲುವಾಗ, ಮಲಗುವಾಗ ಸರಿಯಾದ ಭಂಗಿ ಇಲ್ಲದಿರುವುದು ಹೀಗೆ ಇವೆಲ್ಲವು ಸಹ ಸೊಂಟ ನೋವಿಗೆ ಕಾರಣವಾಗುತ್ತೆ . ಇದನ್ನು ಸರಿಯಾದ ರೀತಿಯಲ್ಲಿ ಶಮನ ಮಾಡದಿದ್ದರೆ ಸಯಾಟಿಕ ಎಂಬ ಸಮಸ್ಯೆಗೆ ಕೂಡ ಒಳಗಾಗಬಹುದು.
ದಾಲ್ಚಿನ್ನಿಯಿಂದ ಸೊಂಟ ನೋವಿಗೆ ಪರಿಹಾರ:
ಸೊಂಟ ನೋವಿನ ಸಮಸ್ಯೆಯಲ್ಲಿ ನೋವು ನಿವಾರಕ ಔಷಧಿಯ ಬದಲು ಮನೆಮದ್ದು ಅಳವಡಿಸಿಕೊಂಡು ಮುಕ್ತಿ ಪಡೆಯಬಹುದು. ದಾಲ್ಚಿನ್ನಿಯಿಂದ ಸೊಂಟ ನೋವಿಗೆ ಪರಿಹಾರ ಪಡೆಯಬಹುದು. ದಾಲ್ಚಿನ್ನಿ ಸೇವನೆಯಿಂದ ನೈಸರ್ಗಿಕವಾಗಿ ಸೊಂಟ ನೋವಿನ ಸಮಸ್ಯೆಯನ್ನು ಹೋಗಲಾಡಿಸಬಹುದು.
ದಾಲ್ಚಿನ್ನಿ ಹೇಗೆ ಬಳಸುವುದು?
ಸೊಂಟ ನೋವಿನ ಸಮಸ್ಯೆಯನ್ನು ಹೋಗಲಾಡಿಸಲು, ಎರಡು ಗ್ರಾಂ ದಾಲ್ಚಿನ್ನಿ ಪುಡಿಗೆ 1 ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ. ನಂತರ ಅದನ್ನು ತಿನ್ನಿರಿ. ನೀವು ಇದನ್ನು ದಿನಕ್ಕೆ ಕನಿಷ್ಟ 2 ಬಾರಿ ಸೇವಿಸಬೇಕು. ಈ ಮೂಲಕ ಶೀಘ್ರದಲ್ಲೇ ಪರಿಹಾರ ಪಡೆಯಬಹುದು.