ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಬ್ಬರ ನಡೆಯುತ್ತಿದೆ. ಯಾರೂ ಸಹ ಊಹಿಸಿರದ ಮಟ್ಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರದರ್ಶನವನ್ನು ನೀಡುತ್ತಿದ್ದು ಸತತ 4ಪಂದ್ಯಗಳನ್ನು ಗೆದ್ದು ಬೀಗಿದೆ. ನಿನ್ನೆ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬರೋಬ್ಬರಿ ಹತ್ತು ವಿಕೆಟ್ ಗಳ ಜಯವನ್ನು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ನಿನ್ನೆಯ ಪಂದ್ಯದಲ್ಲಿ ಸೋತಿತ್ತು ರಾಜಸ್ಥಾನ್ ರಾಯಲ್ಸ್ ತಂಡ ಆದರೂ ಸಹ ಕಷ್ಟ ಎದುರಾಗಿದ್ದು ಮಾತ್ರ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ. ಯಾಕೆಂದರೆ ಅಂಕಪಟ್ಟಿಯಲ್ಲಿ ಮೊನ್ನೆ ತಾನೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ವಿರುದ್ಧ ಗೆಲ್ಲುವುದರ ಮೂಲಕ ಅಗ್ರಸ್ಥಾನಕ್ಕೇರಿತ್ತು. ಇಪ್ಪತ್ನಾಲ್ಕು ಗಂಟೆ ಕಳೆಯೋದರೊಳಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ತಂಡವನ್ನು ನಂಬರ್ ವನ್ ಸ್ಥಾನದಿಂದ ಕೆಳಗೆ ತಳ್ಳಿದೆ.
ಹೌದು ಒಂದೇ ದಿನಕ್ಕೆ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕೆಳಗೆ ತಳ್ಳಿ ಮತ್ತೆ ನಂಬರ್ ಒನ್ ಸ್ಥಾನಕ್ಕೇರಿದೆ. ಇತ್ತ ಅಂಕಪಟ್ಟಿಯಲ್ಲಿ ಕೆಳ ಕುಸಿದ ಕಾರಣ ಒಂದಾದರೆ ಭಾನುವಾರ ಈ ಬಾರಿ ಅತಿ ಭಯಂಕರ ಎನಿಸಿಕೊಂಡಿರುವ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು ಸಿಎಸ್ ಕೆ ಎದುರಿಸಬೇಕಿದೆ. ಪ್ರಸ್ತುತ ಆರ್ ಸಿಟಿ ತಂಡದ ಬೌಲಿಂಗ್ ಮತ್ತು ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ನೋಡಿದರೆ ಹಾಗೂ ಚೆನ್ನೈ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳಿಂದ ಹಿಗ್ಗಾಮುಗ್ಗಾ ಹೊಡೆಸಿಕೊಂಡು ಕೊನೆಯ ಕ್ಷಣದಲ್ಲಿ ಗೆದ್ದಿ ತನ್ನ ನೋಡಿದರೆ ಭಾನುವಾರದ ಪಂದ್ಯದ ಕುರಿತು ಸಿಎಸ್ ಕೆ ಗೆ ಮತ್ತು ಸಿಎಸ್ ಕೆ ಅಭಿಮಾನಿಗಳ ಬಳಗಕ್ಕೆ ತಲೆಬಿಸಿ ಉಂಟಾಗಿರುವುದಂತೂ ಪಕ್ಕ.