ದ್ವಾರಕೀಶ್ ಚಿತ್ರ ಬ್ಯಾನರ್ ಗೆ 50 ವರ್ಷಗಳ ಸಂಭ್ರಮ.. ಈ ಬ್ಯಾನರ್ ಅಡಿಯಲ್ಲಿ ತಯಾರಾಗಿರೋ ಶಿವಣ್ಣ ಅಭಿನಯದ ಆಯುಶ್ಮಾನ್ ಭವ ದ್ವಾರಕೀಶ್ ಬ್ಯಾನರ್ ನ 52 ನೇ ಚಿತ್ರ. ಆದರೆ ಈ ಚಿತ್ರ ಶುರುವಾಗಿದ್ದರ ಹಿಂದೆ ಒಂದು ಒಳ್ಳೆ ಸ್ನೇಹ ಬಾಂಧವ್ಯದ ಕತೆಯಿದೆ. ಹೌದು ದ್ವಾರಕೀಶ್ ಅವರ ಬ್ಯಾನರ್ ಅಡಿಯಲ್ಲಿ ತೆರೆಕಂಡಿದ್ದ ಚಿರಂಜೀವಿ ಸರ್ಜಾ ಅಭಿನಯದ ಅಮ್ಮ ಐ ಲವ್ ಯೂ ಚಿತ್ರ ಸೋತ ನಂತರ ದ್ವಾರಕೀಶ್ ಅವರು ಲಾಸ್ ಅನುಭವಿಸಿ ಕಂಗಾಲಾಗಿದ್ದರು.
ಇಂಥ ಸಮಯದಲ್ಲಿ ಅವರನ್ನು ಕೆರೆದು ಕಾಲ್ ಶೀಟ್ ಅನ್ನು ನೀಡಿದ್ದು ಶಿವಣ್ಣ. ಹೌದು ಈ ವಿಷಯವನ್ನು ನಿನ್ನೆ ನಡೆದ ಆಯುಷ್ಮಾನ್ ಭವ ಪ್ರೆಸ್ ಮೀಟ್ ನಲ್ಲಿ ದ್ವಾರಕೀಶ್ ಅವರು ಹಂಚಿಕೊಂಡರು. ಈ ಮೂಲಕ ಕಷ್ಟದಲ್ಲಿರೋ ನಿರ್ಮಾಪಕರ ಸಹಾಯಕ್ಕೆ ಶಿವಣ್ಣ ನಿಲ್ಲುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಯಿತು.