ನಿನ್ನೆ ಪೈಲ್ವಾನ್ ಚಿತ್ರದ ಪ್ರಿ ರಿಲೀಸ್ ಈವೆಂಟ್ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಿತು. ಮಾಧ್ಯಮ ಮಿತ್ರರೊಂದಿಗೆ ಮಾತುಕತೆ ನಡೆಸಿದ ಪೈಲ್ವಾನ್ ಚಿತ್ರತಂಡ ಚಿತ್ರದ ಬಗೆಗಿನ ಮಾಹಿತಿಗಳನ್ನು ಹಂಚಿಕೊಂಡಿತು. ಇನ್ನು ಕಾರ್ಯಕ್ರಮ ಶುರುವಾಗುವ ಮುನ್ನ ಪೈಲ್ವಾನ್ ಚಿತ್ರದ ಸ್ಪೆಷಲ್ ಕೇಕ್ ಒಂದನ್ನು ಕಟ್ ಮಾಡಲಾಯಿತು.
ಸುದೀಪ್ ಅವರ ಕುಸ್ತಿ ಮತ್ತು ಬಾಕ್ಸಿಂಗ್ ಚಿತ್ರದ ಮೂಲಕ ತಯಾರಿಸಿದ್ದ ಈ ಕೇಕ್ ಅನ್ನು ಚಿತ್ರತಂಡ ಕಟ್ ಮಾಡಿ ಸೆಲೆಬ್ರೇಟ್ ಮಾಡಿತು. ಈ ವೇಳೆ ಚಿತ್ರತಂಡದವರು ಪರಸ್ಪರ ಕೇಕ್ ತಿನ್ನಿಸುವುದರ ಮೂಲಕ ಸಂಭ್ರಮ ಆಚರಿಸಿದರು. ಇನ್ನು ಇದೇ ವೇಳೆ ಕೈ ಒರೆಸಿಕೊಳ್ಳಲು ಟಿಶ್ಯೂ ಪೇಪರ್ ಅನ್ನು ನೀಡಲಾಗಿತ್ತು. ಈ ಸಂದರ್ಭದಲ್ಲಿ ಆ ಟಿಶ್ಯೂ ಪೇಪರ್ ಗಳು ಸ್ಟೇಜ್ ಮೇಲೆ ಬಿದ್ದವು. ಕೆಳಗೆ ಬಿದ್ದ ಟಿಶ್ಯು ಪೇಪರ್ಗಳನ್ನು ಕಿಚ್ಚ ಸುದೀಪ್ ಅವರು ತಾನೊಬ್ಬ ಸೂಪರ್ ಸ್ಟಾರ್ ಎಂಬುದನ್ನು ತಲೆಯಲ್ಲಿ ಇಟ್ಟುಕೊಳ್ಳದೆ ಬಗ್ಗಿ ಸ್ವತಃ ಕೈನಿಂದ ಆಯ್ದು ಕ್ಲೀನ್ ಮಾಡಲು ಬಂದ ಹುಡುಗನಿಗೆ ಕೊಟ್ಟರು. ಅಷ್ಟೇ ಅಲ್ಲದೆ ನೆಲದ ಮೇಲೆ ಬಿದ್ದಿದ್ದ ಕೇಕ್ ತುಂಡುಗಳನ್ನು ಸುದೀಪ್ ಅವರೇ ಆ ಪೇಪರ್ ನಿಂದ ಒರೆಸಿದರು. ಕಿಚ್ಚ ಸುದೀಪ್ ಅವರ ಈ ಸರಳತೆ ನೋಡಿ ನೆರೆದಿದ್ದವರು ಶ್ಲಾಘಿಸಿದರು.