ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಒಬ್ರು ಸ್ಯಾಂಡಲ್ ವುಡ್ ಗೆ, ಅಂದ್ರೆ ಕನ್ನಡ ಚಿತ್ರರಂಗಕ್ಕೆ ಬರೋ ಸೂಚನೆ ಸಿಕ್ಕಿದೆ.
ಭಾರತ ತಂಡದ ನಾಯಕನಾಗಿ, ವಿಶ್ವ ಶ್ರೇಷ್ಠ ಕ್ರಿಕೆಟಿಗನಾಗಿ ಮಿಂಚಿದ ಆ ಸ್ಟಾರ್ ಚಂದನವನದಲ್ಲಿ ಚಾಪು ಮೂಡಿಸುವ ಸಾಧ್ಯತೆ ಇದೆ..!
ಇದೇನಿದು ವಿಷಯ ಅವರಾರು ಎಂದಿರಾ? ಅವರು ಬೇರಾರು ಅಲ್ಲ ಹೆಮ್ಮೆಯ ಕನ್ನಡಿಗ ಅನಿಲ್ ಕುಂಬ್ಳೆ.
ಹೌದು ಅನಿಲ್ ಕುಂಬ್ಳೆ ಕನ್ನಡದ ಸಿನಿಮಾವೊಂದರಲ್ಲಿ ನಟಿಸುವ ಸಾಧ್ಯತೆ ಇದೆ. ಅದೂ ಕೂಡ ಕರುನಾಡ ಚಕ್ರವರ್ತಿ , ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಿನಿಮಾದಲ್ಲಿ.
ಅಚ್ಚರಿಯಾದ್ರು ಇದು ಈಡೇರಬಹುದಾದ ಕನಸು..!
ಶಿವರಾಜ್ ಕುಮಾರ್ ಮತ್ತು ಅನಿಲ್ ಕುಂಬ್ಳೆ ಒಳ್ಳೆಯ ಗೆಳೆಯರು. ಜುಲೈ 12 ರಂದು ಶಿವಣ್ಣನ ಬರ್ತ್ ಡೇ ಇತ್ತು. ಶಿವಣ್ಣ ಬಲ ಭುಜದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು ಲಂಡನ್ ನಲ್ಲಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಲ್ಲಿಗೆ ತೆರಳಿ ಶಿವಣ್ಣನ ಹುಟ್ಟುಹಬ್ಬವನ್ನು ಆಚರಿಸಿದ್ದರು.
ಅದರ ಬೆನ್ನಲ್ಲೇ ಅನಿಲ್ ಕುಂಬ್ಳೆ ಶಿವಣ್ಣನನ್ನು ಭೇಟಿಯಾಗಿದ್ದಾರೆ. ಶಿವಣ್ಣನ ಜೊತೆ ಸೆಲ್ಫಿ ಕ್ಲಿಕ್ಕಿಸಿದ್ದಾರೆ. ಶಿವಣ್ಣಗೆ ಬರ್ತ್ ಡೇ ವಿಶ್ ಮಾಡಿದ್ದಾರೆ. ಅದಲ್ಲದೇ ಬೇಗ ಗುಣ ಮುಖರಾಗಿ ಅಂತ ಹಾರೈಸಿದ್ದಾರೆ.
ಶಿವಣ್ಣ ಅನಿಲ್ ಕುಂಬ್ಳೆ ಜೊತೆಗಿನ ಫೋಟೊವನ್ನು ಟ್ಟಿಟರ್ ಗೆ ಹಾಕಿದ್ದಾರೆ. ಬರ್ತ್ ಡೇ ಸರ್ ಪ್ರೈಸ್. ನಂಗೆ ಕ್ರಿಕೆಟ್ ಅಂದ್ರೆ ಇಷ್ಟ. ಅದರಲ್ಲೂ ಕನ್ನಡದವರು ಇನ್ನೂ ಇಷ್ಟ ಎಂದು ಅನಿಲ್ ಕುಂಬ್ಳೆ ಅವರೊಡನೆಯ ಸ್ನೇಹವನ್ನು ಹೇಳಿಕೊಂಡಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ನಾವು ಸಿನಿಮಾದವರು ಕ್ರಿಕೆಟ್ ಆಡ್ತಿರ್ತೀವಿ. ಆದರೆ ಅನಿಲ್ ಕುಂಬ್ಳೆ ನನ್ನ ಮುಂದಿನ ಯಾವ್ದಾದ್ರು ಸಿನಿಮಾದಲ್ಲಿ ಅತಿಥಿ ಪಾತ್ರವನ್ನಾದರೂ ಮಾಡಬೇಕು ಎಂದು ಆಶಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಇದು ಮುಂದೆ ಒಂದಲ್ಲ ಒಂದು ಸಿನಿಮಾದಲ್ಲಿ ಅನಿಲ್ ಕುಂಬ್ಳೆ ಬಣ್ಣ ಹಚ್ಚೋದು ಖಚಿತ ಎಂಬಂತಿದೆ. ಅನಿಲ್ ಕುಂಬ್ಳೆ ಸ್ಯಾಂಡಲ್ ವುಡ್ ನಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿ ಅಲ್ಲೂ ಚಾಪು ಮೂಡಿಸ್ತಾರಾ ಕಾದು ನೋಡಬೇಕು.