ಸ್ವಾತಂತ್ರ್ಯ ಭಾರತದ ಮೊದಲ ಉಗ್ರ ಹಿಂದೂ ಎಂದು ಹೇಳಿಕೆ ನೀಡಿದ ಕಮಲ್ ಹಾಸನ್ ಅವರ ನಾಲಿಗೆಯನ್ನು ಕತ್ತರಿಸಿ ಎಂದು ಹೇಳಿದ್ದ ತಮಿಳುನಾಡು ಸಚಿವ ಕೆಟಿ ರಾಜೇಂದ್ರ ಬಾಲಾಜಿ
ಅಲ್ಪ ಸಂಖ್ಯಾತರ ಮತ ಸೆಳೆಯಲು ಕಮಲ ಹಾಸನ್ ಈ ರೀತಿ ಡೈಲಾಗ್ ಹೊಡೆಯುತ್ತಿದ್ದಾರೆ. ಆದ್ದರಿಂದ ಕಮಲ ಹಾಶನ್ ಮಕ್ಕಳ್ ನೀದಿ ಮಯ್ಯ ಪಕ್ಷವನ್ನು ನಿಷೇಧಿಸಿ ಅವರಿಗೆ ಪ್ರಚಾರ ಮಾಡದಂತೆ ನಿಷೇಧ ಹೇರಬೇಕು ಎಂದು ಸಚಿವ ಕೆಟಿ ರಾಜೇಂದ್ರ ಬಾಲಾಜಿ ಆಗ್ರಹಿಸಿದ್ದಾರೆ.
ಉಗ್ರವಾದಕ್ಕೆ ಯಾವುದೇ ಧರ್ಮ ಲೇಪನ ಸರಿಯಲ್ಲ. ತೆರೆಯ ಮೇಲೆ ನಟಿಸುವ ಕಮಲ್ ರಾಜಕೀಯ ರಂಗದಲ್ಲಿಯೂ ನಾಟಕ ಆಡಲು ಪ್ರಯತ್ನಿಸುತ್ತಿದ್ದಾರೆ. ಅವರ ನಾಲಿಗೆ ಕಟ್ ಮಾಡಿದರೆ ಸರಿ ಹೋಗುತ್ತೆ ಎಂದು ಅವರು ಹೇಳಿದ್ದಾರೆ.