‘ಸ್ವಲ್ಪ ದಿನ ಸರಿಯಾಗಿ ಕೆಲಸ ಮಾಡಿ, ಆಮೇಲೆ ನಾವು ನೋಡ್ಕೋತೀವಿ’ ಮೋದಿಗೆ ಸಿದ್ದರಾಮಯ್ಯ ಟಾಂಗ್ !?

Date:

ನೀಟ್ ಪತೀಕ್ಷೆ ಬರೆಯಲು ಬೆಂಗಳೂರಿಗೆ ಆಗಮಿಸುತ್ತಿದ್ದ ರೈಲು ವಿಳಂಬದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸ್ವಲ್ಪ ದಿನ ಸರಿಯಾಗಿ ಕೆಲಸ ಮಾಡಿ. ಆಮೇಲೆ ನಾವು ಅಧಿಕಾರಕ್ಕೆ ಬರುತ್ತೇವೆ. ಎಲ್ಲವನ್ನು ಸರಿ ಮಾಡುತ್ತೇವೆ ಎಂದು ಪ್ರಧಾನಿನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಟ್ವೀಟರ್ ಮೂಲಕ ಹೇಳಿದ್ದಾರೆ.ಹಂಪಿ ಎಕ್ಸ್‍ಪ್ರೆಸ್ ರೈಲು ವಿಳಂಬದಿಂದ ತೊಂದರೆಗೀಡಾಗಿರುವ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ಬರೆಯಲು ಮತ್ತೊಂದು ಅವಕಾಶ ನೀಡಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಇತರರ ಸಲಹೆಗಳನ್ನು ತಮ್ಮದೆಂದು ಬಿಂಬಿಸಿಕೊಂಡು ಹೆಸರು ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ.ಅದೇ ರೀತಿ ಅವರ ಸಂಪುಟದ ಸಚಿವರುಗಳ ಅಸಮರ್ಥತೆಯಿಂದಾಗುವ ಅನಾಹುತಗಳ ಹೊಣೆಯನ್ನು ಹೊತ್ತುಕೊಳ್ಳಬೇಕೆಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ರೈಲ್ವೆ ಇಲಾಖೆ ಸ್ಪಷ್ಟನೆ : ಗುಂತಕಲ್ಲು ರೈಲ್ವೆ ವಿಭಾಗದಲ್ಲಿ ಡಬ್ಲಿಂಗ್ ಕಾಮಗಾರಿಯಿಂದಾಗಿ ಮಾರ್ಗ ಬದಲಾವಣೆಯಾಗಿದ್ದು, ಹಂಪಿ ಎಕ್ಸ್‍ಪ್ರೆಸ್ ವಿಳಂಬವಾಗಿ ಬೆಂಗಳೂರು ತಲುಪುವಂತಾಗಿದೆ ಎಂದು ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ.

ಹುಬ್ಬಳ್ಳಿ-ಮೈಸೂರು ನಡುವಿನ ಹಂಪಿ ಎಕ್ಸ್‍ಪ್ರೆಸ್ ಬೆಳಗ್ಗೆ 6.20ಕ್ಕೆ ಬೆಂಗಳೂರಿಗೆ ತಲುಪಬೇಕಿತ್ತು. ಆದರೆ ಮಾರ್ಗಬದಲಾವಣೆಯಿಂದಾಗಿ ಎರಡು ಗಂಟೆ ವಿಳಂಬವಾಗಿ ಬೆಳಗ್ಗೆ 8.20ಕ್ಕೆ ಬಂದು ತಲುಪಲಿದೆ ಎಂಬ ನಿರೀಕ್ಷೆ ಇತ್ತು.ನಿರೀಕ್ಷೆಗೂ ಮೀರಿ ರೈಲು ಪ್ರಯಾಣ ವಿಳಂಬವಾಗಿದ್ದು, ಬೆಳಗ್ಗೆ 2.30ರ ವೇಳೆಗೆ ಬೆಂಗಳೂರಿಗೆ ಆಗಮಿಸಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಸಾಮಾನ್ಯವಾಗಿ ಬಳ್ಳಾರಿ, ಗುಂತಕಲ್, ಧರ್ಮಾವರಂ, ಪೆನಗೊಂಡ, ಯಲಹಂಕ ಮೂಲಕವಾಗಿ ಬೆಂಗಳೂರು ತಲುಪಬೇಕಿತ್ತು.

ಅಲ್ಲಿ ಗುಂತಕಲ್-ಕಲ್ಲೂರು ನಡುವೆ ಡಬ್ಲಿಂಗ್ ಕಾಮಗಾರಿ ನಡೆಯುತ್ತಿರುವುದರಿಂದ ಬಳ್ಳಾರಿ ಬಳಿ ಮಾರ್ಗ ಬದಲಾವಣೆಯಾಗಿ ರಾಯದುರ್ಗ, ಚಿಕ್ಕಜಾಜೂರು, ಅರಸೀಕೆರೆ, ತುಮಕೂರು ಮಾರ್ಗವಾಗಿ ಬೆಂಗಳೂರು ತಲುಪಿದೆ. ಸುಮಾರು 120 ಕಿಲೋಮೀಟರ್ ದೂರ ಹೆಚ್ಚಾಗಿದ್ದರಿಂದ ರೈಲು ಪ್ರಯಾಣ ವಿಳಂಬವಾಗಿದೆ.ರೈಲು ವಿಳಂಬದ ಬಗ್ಗೆ ಈಗಾಗಲೇ ಟಿಕೆಟ್ ಮುಂಗಡ ಕಾಯ್ದಿರಿಸಿದವರಿಗೆ ಎಸ್‍ಎಂಎಸ್ ಮೂಲಕ ಮಾಹಿತಿ ನೀಡಲಾಗಿತ್ತು ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿ ಅಶೋಕ್‍ಕುಮಾರ್ ವರ್ಮಾ ಪತ್ರಿಕೆಗೆ ತಿಳಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...