ಸ್ವಾಮೀಜಿಗಳ ವಿರುದ್ಧ ಹರಿಹಾಯ್ದ ಹೆಚ್. ವಿಶ್ವನಾಥ್

0
27

“ಮಠ ಮಾನ್ಯಗಳು, ಧರ್ಮಾಧಿಕಾರಿಗಳು ಸಮಾಜದ ಭಾಗವಾಗಬೇಕು. ಅದನ್ನು ಬಿಟ್ಟು ರಾಜಕಾರಣ ಹಾಗೂ ಅಧಿಕಾರದ ಭಾಗವಾಗಬಾರದು,” ಎಂದು ವಿಧಾನ ಪರಿಷತ್‌ ಸದಸ್ಯ ಎಚ್. ವಿಶ್ವನಾಥ್ ಕಿಡಿಕಾರಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಶ್ವನಾಥ್, “ಮಠಾಧೀಶರು ರಾಜಕೀಯ ವಿಚಾರಕ್ಕೂ ತಲೆ ಹಾಕಬಾರದು, ಏಕವ್ಯಕ್ತಿ ಹಾಗೂ ಏಕಪಕ್ಷದ ಪರವಾಗಿ ಧರ್ಮಾಧಿಕಾರಿಗಳು ನಿಲ್ಲಬಾರದು. ಇದು ಯಾರಿಗೂ ಕೂಡ ಒಳ್ಳೆಯದಲ್ಲ,” ಎಂದು ಟೀಕಿಸಿದರು.

“ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಜನ ಸಮುದಾಯದ ಏಳಿಗೆ ಆಗಬೇಕು. ಬಸವ ಪ್ರಶಸ್ತಿ ಪಡೆದ ಮುರುಘಾ ಶ್ರೀಗಳೇ ಬೀದಿಗಿಳಿದಿರುವುದು ನೋವಿನ ಸಂಗತಿ. ‘ಸರ್ಕಾರದ ಕೆಲಸ ದೇವರ ಕೆಲಸ’ ಎನ್ನುವುದು ಈಗ ಸ್ವಾಮಿಗಳ ಕೆಲಸವಾಗಿದೆ. ಯಡಿಯೂರಪ್ಪ ನಮ್ಮ ಜನ ನಾಯಕ, ನನಗೆ ಗೌರವ ಇದೆ. ಎರಡು ಸಾರಿ ಮುಖ್ಯಮಂತ್ರಿ ಆದರೂ ಬಿಎಸ್‌ವೈ ಪರಿಸ್ಥಿತಿ ಶಿಶು ಆಗಿದ್ದಾರೆ.”

ಮೊದಲ ಬಾರಿ ಸಿಎಂ ಆದಾಗ ಕುಟುಂಬದವರಿಂದ ಜೈಲು ಪಾಲಾದರು. ಇದರಿಂದ ಪಕ್ಷದಿಂದ ಉಚ್ಛಾಟನೆ ಮಾಡಲಾಯಿತು. ಆ ಸಂದರ್ಭದಲ್ಲಿ ಏಕೆ ಸ್ವಾಮೀಜಿಗಳು ಅವರ ಪರ ನಿಲ್ಲಲಿಲ್ಲ?. ನರೇಂದ್ರ ಮೋದಿ ಅವರ ತತ್ವಕ್ಕೆ ವಿರುದ್ಧವಾಗಿ ಆಡಳಿತ ನಡೆಸುತ್ತಿದ್ದೀರಾ?,” ಎಂದು ಸಿಎಂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

 

LEAVE A REPLY

Please enter your comment!
Please enter your name here