ಈ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್

0
69

ಕೇರಳದಲ್ಲಿ 2 ದಿನ ಸಂಪೂರ್ಣ ಲಾಕ್‌ಡೌನ್ ವಿಧಿಸಿ ಸರ್ಕಾರ ಆದೇಶ ಮಾಡಿದೆ.

ಜುಲೈ 24 ಹಾಗೂ 25ರಂದು ಎರಡು ದಿನ ರಾಜ್ಯದಲ್ಲಿ ಸಂಪೂರ್ಣವಾಗಿ ಲಾಕ್‌ಡೌನ್ ಮಾಡುವಂತೆ ಸೂಚಿಸಲಾಗಿದೆ. ಹಾಗೆಯೇ ಜುಲೈ 12 ಹಾಗೂ 13ರಂದು ವಿಧಿಸಿದ ಮಾರ್ಗಸೂಚಿಗಳೇ ಈ ಎರಡು ದಿನವೂ ಅನ್ವಯವಾಗಲಿದೆ ಎಂದು ಹೇಳಲಾಗಿದೆ.

ಪ್ರತಿ ದಿನವೂ 3 ಲಕ್ಷ ಪರೀಕ್ಷೆಗಳನ್ನು ಮಾಡುವ ಕುರಿತು ಆರೋಗ್ಯ ಇಲಾಖೆ ಗುರಿ ಹೊಂದಿದೆ. ಎಲ್ಲಾ ಜಿಲ್ಲೆಗಳಲ್ಲೂ ಮೈಕ್ರೋ ಕಂಟೈನ್ಮೆಂಟ್ ಜೋನ್‌ಗಳನ್ನು ಪತ್ತೆ ಹಚ್ಚಲು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

ರಾಜ್ಯಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದ್ದು, ಬಕ್ರಿದ್ ಆಚರಣೆಗಾಗಿ ಭಾನುವಾರದಿಂದ ದಿನಗಳ ಕಾಲ ಟೆಕ್ಸ್‌ಟೈಲ್ ಶಾಲ್, ಚಪ್ಪಲಿ ಅಂಗಡಿಗಳು ಸೇರಿ ಹಲವು ಅಂಗಡಿಗಳಿಗೆ ನಿಯಮಗಳಲ್ಲಿ ಸಡಿಲಿಕೆ ಮಾಡಲಾಗಿತ್ತು.

ದೇಶದಲ್ಲಿ ಬಹುತೇಕ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಇಳಿಕೆಯಾಗಿವೆ ಆದರೆ, ಕೇರಳದಲ್ಲಿ ಮಾತ್ರ ನಿತ್ಯ 10 ರಿಂದ 15 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಮಹಾರಾಷ್ಟ್ರದಲ್ಲೂ ಕೂಡ ಸಾವಿನ ಸಂಖ್ಯೆಯೂ ಹೆಚ್ಚಾಗಿದೆ. ಮತ್ತೆ ದೇಶದಲ್ಲಿ ಇಂದಿನಿಂದ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ.

ಭಾರತದಲ್ಲಿ ಕೊರೊನಾ 2ನೇ ಅಲೆಯ ಏರಿಳಿತ ಮುಂದುವರೆದಿದ್ದು, ದೇಶದಲ್ಲಿ ಬುಧವಾರ ಬೆಳಿಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆಗಳ ಅವಧಿಯಲ್ಲಿ 42,015 ಮಂದಿಯಲ್ಲಿ ಹೊಸದಾಗಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಇದೇ ಅವಧಿಯಲ್ಲಿ 3,998 ಮಂದಿ ಬಲಿಯಾಗಿದ್ದಾರೆ.

LEAVE A REPLY

Please enter your comment!
Please enter your name here