ಹರ್ಷಿಕಾ ಮಾಡಿದ ಸಹಾಯಕ್ಕೆ ಮಗುವಿಗೆ ಆಕೆಯ ಹೆಸರನ್ನೇ ಇಟ್ಟ ಪೋಷಕರು

Date:

ಕೊಡಗಿನ ಸುಂದರಿ, ನಟಿ ಹರ್ಷಿಕಾ ಪೂಣಚ್ಚ ಈ ಲಾಕ್‌ಡೌನ್ ಅವಧಿಯಲ್ಲಿ ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೊಡಗು, ಬೆಂಗಳೂರು ಸೇರಿದಂತೆ ಇನ್ನು ಕೆಲವು ಕಡೆಗಳಿಗೆ ತೆರಳಿ ಬಡವರಿಗೆ ಉಚಿತ ದಿನಸಿ ವಿತರಣೆ ಮಾಡುವ ಜೊತೆಗೆ, ಕೋವಿಡ್‌ ರೋಗಿಗಳಿಗೆಂದು ಆಮ್ಲಜನಕ ಪೂರೈಕೆ, ಉಚಿತ ಆಂಬುಲೆನ್ಸ್ ವ್ಯವಸ್ಥೆ ಇನ್ನಿತರೆ ಸೇವೆಗಳನ್ನು ಹರ್ಷಿಕಾ ಪೂಣಚ್ಚ ಮಾಡಿದ್ದಾರೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಗೂ ತೆರಳಿ ಅಲ್ಲಿಯೂ ಸಹಾಯ ಮಾಡಿದ್ದಾರೆ.

ಹರ್ಷಿಕಾ ಮತ್ತು ಭುವನ್ ಅವರು ಉತ್ತರ ಕರ್ನಾಟಕದಲ್ಲಿ ಕೊರೊನಾ ಜಾಗೃತಿ ಪ್ರವಾಸದಲ್ಲಿದ್ದಾಗ ಬೆಳಗಾವಿ ಜಿಲ್ಲೆಯ ಸವಸುದ್ದಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಅಗತ್ಯ ನೆರವು ನೀಡಿದ್ದರು. ಆ ಗ್ರಾಮದಲ್ಲಿ 80 ಮಂದಿ ಕೊರೊನಾ ಕಾರಣಕ್ಕೆ ನಿಧನ ಹೊಂದಿದ್ದರು. ಊರಿನ ಜನರೊಟ್ಟಿಗೆ ಮಾತನಾಡಿದ ಹರ್ಷಿಕಾ ಹಾಗೂ ಭುವನ್ ಊರ ಜನರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಿದ್ದಾರೆ. ಮಾಸ್ಕ್‌ನ ಮಹತ್ವವನ್ನು ಸಾರಿ ಹೇಳಿದ್ದಾರೆ. ಹರ್ಷಿಕಾ ಅವರ ಸೇವೆಯನ್ನು ಮೆಚ್ಚಿದ ಅದೇ ಊರಿನ ದಂಪತಿಯೊಬ್ಬರು ತಮಗೆ ಹುಟ್ಟಿದ ಹೆಣ್ಣು ಮಗುವಿಗೆ ಹರ್ಷಿಕಾ ಎಂದೇ ನಾಮಕರಣ ಮಾಡಿದ್ದಾರೆ.

ಹರ್ಷಿಕಾ ನಮ್ಮ ಊರಿಗೆ ಬಂದು ನಮಗೆ ಸಹಾಯ ಮಾಡಿದ್ದಾರೆ. ನಮಗೆ ಸಾಂತ್ವಾನ ಹೇಳಿದ್ದಾರೆ. ಹಾಗಾಗಿ ನಮ್ಮ ಮಗಳೂ ಸಹ ಹಾಗೆಯೇ ಆಗಬೇಕು ಎಂದು ಮಗಳಿಗೆ ಹರ್ಷಿಕಾ ಎಂದು ನಾಮಕರಣ ಮಾಡಿದ್ದಾಗಿ ಹೇಳಿದ್ದಾರೆ. ಹೀಗೆ ನಾಮಕರಣ ಮಾಡುವುದರ ಹಿಂದೆ ಮಗುವಿನ ಚಿಕ್ಕಪ್ಪನ ಒತ್ತಾಸೆಯೂ ಇದೆ. ಈ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಹರ್ಷಿಕಾ ಪೂಣಚ್ಚ, ‘ನನ್ನ ಜೀವನಕ್ಕೆ ಹೊಸ ಅರ್ಥ ಸಿಕ್ಕಿರುವ ಹಾಗಿದೆ , ಈ ಮುದ್ದು ಪುಟಾಣಿ ಕಂದಮ್ಮನಿಗೆ ನನ್ನ ಹೆಸರು ಇಟ್ಟಿದ್ದಾರೆ .ನಿಮ್ಮ ಪ್ರೀತಿಗೆ ನನ್ನ ಮನಸ್ಸು ತುಂಬಿದೆ . ಈ ವಿಶ್ವಾಸಕ್ಕೆ ನಾನೆಂದು ಚಿರಋಣಿ’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಮಗುವಿನ ಚಿತ್ರವನ್ನೂ ಹಂಚಿಕೊಂಡಿದ್ದಾರೆ.

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...