ಬಾಲಿವುಡ್ ನಟ ಸಂಜಯ್ ದತ್ ಇದೀಗ ರಾಜಕೀಯ ಪ್ರವೇಶ ಮಾಡುತ್ತಿದ್ದಾರೆ ಎಂಬ ಸುದ್ದಿ ಎಂಬುದು ದೊಡ್ಡದಾಗಿ ಹರಿದಾಡ್ತಿದೆ , ಹತ್ತು ವರ್ಷದ ಹಿಂದೆ ಸಮಾಜವಾದಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಸಿನಿಮಾ ನಟ ಸಂಜಯ್ ದತ್ ಈಗ ರಾಜಕೀಯಕ್ಕೆ ಮರು ಪ್ರವೇಶ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ .
ಮಹಾರಾಷ್ಟ್ರದಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿರುವ ರಾಷ್ಟ್ರೀಯ ಸಮಾಜ ಪಕ್ಷ (ಆರ್‌ಎಸ್‌ಪಿ)ಕ್ಕೆ ಅವರು ಇದೇ ಸೆಪ್ಟೆಂಬರ್ 25ರಂದು ಸೇರಲಿದ್ದಾರೆ.ರಾಷ್ಟ್ರೀಯ ಸಮಾಜ ಪಕ್ಷದ ಸಂಸ್ಥಾಪಕ ಹಾಗೂ ಮಹಾರಾಷ್ಟ್ರದ ಕ್ಯಾಬಿನೆಟ್ ಸಚಿವರೂ ಆಗಿರುವ ಮಹದೇವ್ ಜಂಕರ್ ಭಾನುವಾರ ಈ ವಿಷಯ ತಿಳಿಸಿದ್ದಾರೆ.