ಹಾಲು ಕುಡಿದ ನಂತರ ಈ ಆಹಾರಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ..!
ಹಾಲನ್ನು ಭೂಮಿಯ ಅಮೃತವೆಂದು ಕರೆಯಲಾಗುತ್ತದೆ. ಇದರಲ್ಲಿ ಇರುವ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಅನೇಕ ಪೋಷಕಾಂಶಗಳು ನಮ್ಮ ಮೂಳೆ ಮತ್ತು ಹಲ್ಲುಗಳ ಆರೋಗ್ಯಕ್ಕೆ ತುಂಬಾ ಮುಖ್ಯ. ನಿಯಮಿತವಾಗಿ ಹಾಲು ಸೇವಿಸಿದರೆ ದೇಹ ಬಲವಾಗುವುದಲ್ಲದೆ, ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಆದರೆ ಹಾಲನ್ನು ಸರಿಯಾದ ರೀತಿಯಲ್ಲಿ ಕುಡಿಯುವುದು ಮುಖ್ಯ, ಇಲ್ಲದಿದ್ದರೆ ಇದು ಪ್ರಯೋಜನಕ್ಕಿಂತ ಹಾನಿ ಮಾಡಬಹುದು.
ಹಾಲಿನ ಜೊತೆ ತಿನ್ನಬಾರದ ಆಹಾರಗಳು:
ಮಸಾಲೆಯುಕ್ತ ಆಹಾರ:
ಹಾಲು ಕುಡಿದ ತಕ್ಷಣ ಖಾರವಾದ ಚಿಪ್ಸ್, ಬಿಸ್ಕತ್ತು ಅಥವಾ ಜಂಕ್ ಫುಡ್ ತಿನ್ನುವುದು ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡಬಹುದು.
ಬೆಲ್ಲ ಬೆರೆಸಿದ ಹಾಲು:
ಗುಣಮಟ್ಟದ, ತಾಜಾ ಬೆಲ್ಲವಿದ್ದರೆ ಮಾತ್ರ ಒಳ್ಳೆಯದು. ಉಪ್ಪಿನಾಂಶ ಹೆಚ್ಚು ಇರುವ ಬೆಲ್ಲವನ್ನು ಹಾಲಿನೊಂದಿಗೆ ಸೇರಿಸಿದರೆ ಅಜೀರ್ಣದ ಸಮಸ್ಯೆಗಳು ಉಂಟಾಗಬಹುದು.
ಸಿಟ್ರಸ್ ಹಣ್ಣುಗಳು (ಕಿತ್ತಳೆ, ನಿಂಬೆ):
ಇವುಗಳಲ್ಲಿ ಇರುವ ಆಮ್ಲ, ಹಾಲಿನ ಪ್ರೋಟೀನ್ ಹೆಪ್ಪುಗಟ್ಟುವಂತೆ ಮಾಡುತ್ತದೆ. ಇದರಿಂದ ಗ್ಯಾಸ್, ಉಬ್ಬುವುದು, ಹೊಟ್ಟೆ ನೋವು ತೊಂದರೆ ಕಾಣಿಸಿಕೊಳ್ಳಬಹುದು. ಹಾಲು ಕುಡಿದ 2–3 ಗಂಟೆಗಳ ನಂತರ ಮಾತ್ರ ಹಣ್ಣುಗಳನ್ನು ತಿನ್ನುವುದು ಸೂಕ್ತ.
ಮೀನು:
ಹಾಲು ಮತ್ತು ಮೀನುಗಳನ್ನು ಒಟ್ಟಿಗೆ ಸೇವಿಸುವುದು ಅಜೀರ್ಣ ಹಾಗೂ ಹೊಟ್ಟೆ ನೋವಿಗೆ ಕಾರಣವಾಗಬಹುದು.
ಕಲ್ಲಂಗಡಿ:
ಹಾಲು ಕುಡಿದ ತಕ್ಷಣ ಕಲ್ಲಂಗಡಿ ತಿನ್ನುವುದರಿಂದ ಪ್ರೋಟೀನ್ ಮತ್ತು ಆಮ್ಲಗಳ ಸಂಯೋಜನೆ ಅಜೀರ್ಣ ಹಾಗೂ ಹೊಟ್ಟೆ ಸಮಸ್ಯೆಗಳನ್ನು ಉಂಟುಮಾಡುತ್ತದೆ.