ಹಾಸನದಲ್ಲಿ ಇಂದು ಬೆಳಿಗ್ಗೆ ಅರಕಲಗೂಡು ಮೂಲದ ಭವಿತಾ (23) ಮೃತಪಟ್ಟ ಯುವತಿ. ಈಕೆ ಕಳೆದ ಎರಡು ವಾರಗಳಿಂದ ಇಲ್ಲಿನ ಹೋಟೆಲ್ ಒಂದರಲ್ಲಿ ರೂಮ್ ಮಾಡಿಕೊಂಡು ವಾಸಾವಾಗಿದ್ದು, ಇಂದು ಬೆಳಗ್ಗೆ ಅದೇ ಹೋಟೆಲ್ ಹಿಂಬದಿ ಆಕೆಯ ಶವ ಪತ್ತೆಯಾಗಿದೆ. ಅದು ಪೊಲೀಸರಿಗೆ ಅನುಮಾನಾಸ್ಪದವಾಗಿ ಕಂಡಿದೆ ಎನ್ನಲಾಗುತ್ತಿದೆ.
ಯುವತಿಯ ಪೋಷಕರು ಈ ಬಗ್ಗೆ ದೂರು ನೀಡಿದ್ದಾರೆ. ಯುವತಿ ದೇಹದ ಕೆಲವು ಭಾಗಳಲ್ಲಿ ಹಚ್ಚೆ ಹಾಕಿಸಿಕೊಂಡಿದ್ದು, ಅದರಲ್ಲಿ ಪುನೀತ್ ಎಂಬವನ ಹೆಸರನ್ನು ಆಕೆ ಹಚ್ಚೆ ಹಾಕಿಕೊಂಡಿದ್ದಳು ಎನ್ನಲಾಗಿದೆ. ಹಾಸನ ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ