ಹಿಂದಿನ ಸೆಮಿಸ್ಟರ್ ಪರೀಕ್ಷೆ ಮುಗಿದಿಲ್ಲ; ಆಗಲೇ ಮುಂದಿನ ಸೆಮಿಸ್ಟರ್ ಆನ್ ಲ್ಲೈನ್ ಕ್ಲಾಸ್

Date:

ಕರ್ನಾಟಕದ ಕೆಲವು ವಿವಿಗಳಲ್ಲಿ ಬೆಸ ಸಂಖ್ಯೆ ಸೆಮಿಸ್ಟರ್ ಪರೀಕ್ಷೆಗಳೇ ಮುಗಿದಿಲ್ಲ, ಆದರೆ ಈಗಾಗಲೇ ಮುಂದಿನ ಸೆಮಿಸ್ಟರ್‌ಗಳಿಗೆ ಆನ್‌ಲೈನ್‌ ತರಗತಿಗಳನ್ನು ನಡೆಸಲು ದಿನಾಂಕ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಒತ್ತಡಕ್ಕೊಳಗಾಗಿದ್ದಾರೆ. ಎರಡು ಸೆಮಿಸ್ಟರ್‌ ಪರೀಕ್ಷೆಗಳಿಗೆ ಹೇಗೆ ತಯಾರಿ ನಡೆಸುವುದು ಎಂಬುದು ಅವರ ಚಿಂತೆಯಾಗಿದ್ದು, ಆತಂಕ ತರಿಸಿದೆ.

ಕರ್ನಾಟಕದಲ್ಲಿನ ಕೆಲವು ವಿವಿಗಳ ಪೈಕಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಮಹಾರಾಣಿ ಕ್ಲಸ್ಟರ್ ಯುನಿವರ್ಸಿಟಿಗಳು ಸೆಮಿಸ್ಟರ್ ಪರೀಕ್ಷೆಗಳನ್ನು ಮುಗಿಸಿಲ್ಲ. ಇತರೆ ವಿವಿಗಳು ಸಹ ರಾಜ್ಯದ ಸಾರಿಗೆ ನೌಕರರ ಮುಷ್ಕರ ಹಾಗೂ ನಂತರದಲ್ಲಿ ಸರ್ಕಾರ ಲಾಕ್‌ಡೌನ್‌ ಆದೇಶ ಜಾರಿ ಮಾಡಿದ ಹಿನ್ನೆಲೆ ಪರೀಕ್ಷೆಗಳನ್ನು ಕಂಪ್ಲೀಟ್ ಮಾಡಲು ಆಗಿಲ್ಲ.

ಪ್ರಸ್ತುತ 1, 3, 5 ನೇ ಸೆಮಿಸ್ಟರ್‌ಗಳಿಗೆ ಪುನರ್‌ಮನನ ತರಗತಿಗಳನ್ನು, ಹಾಗೆಯೇ 2, 4, 6ನೇ ಸೆಮಿಸ್ಟರ್‌ಗೆ ರೆಗ್ಯುಲರ್ ತರಗತಿಗಳನ್ನು ಒಟ್ಟೊಟ್ಟಿಗೆ ನಡೆಸಬೇಕಾಗುತ್ತದೆ ಎಂದು ಹಲವು ಉಪನ್ಯಾಸಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಇದೇ ವೇಳೆ ತಮ್ಮ ಅಧ್ಯಯನ ಸಾಮಾಗ್ರಿಗಳನ್ನು ಹಾಸ್ಟೆಲ್‌, ಪಿಜಿಗಳಲ್ಲೇ ಬಿಟ್ಟು, ತಮ್ಮ ತಮ್ಮ ಪ್ರದೇಶಕ್ಕೆ ತೆರಳಿರುವ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಒತ್ತಡಕ್ಕೆ ಸಿಲುಕಿದ್ದಾರೆ.

ಬಿಇ, ಎಂಬಿಎ, ಎಂಸಿಎ, ಎಂಟೆಕ್‌ ಕೋರ್ಸ್‌ಗಳಿಗೆ ಪರೀಕ್ಷೆಗಳು ಇನ್ನು ಮುಗಿದಿಲ್ಲ. ಕೊರೊನಾ ಲಾಕ್‌ಡೌನ್ ವೇಳೆ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ತೊಡಗಿಸಲು ಮುಂದಿನ ಸೆಮಿಸ್ಟರ್‌ಗೆ ಆನ್‌ಲೈನ್‌ ತರಗತಿಗಳನ್ನು ಮೇ.19, 2021 ರಿಂದ ನಡೆಸಲು ನಿಗದಿಪಡಿಸಲಾಗಿದೆ. ಎರಡು ವಾರಗಳ ಇಂಡಕ್ಷನ್ ಪ್ರೋಗ್ರಾಮ್‌ ಅನ್ನು ಆನ್‌ಲೈನ್‌ನಲ್ಲಿ ನಡೆಸಲಾಗಿದೆ. ರಾಜ್ಯ ವಿವಿಗಳ ಕುಲಪತಿಗಳು ಸೆಮಿಸ್ಟರ್ ಪರೀಕ್ಷೆಗೆ ತಯಾರಿ ಆಗಲು ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಯ ನೀಡಲಾಗುತ್ತದೆ ಎಂದಿದ್ದಾರೆ.

 

Share post:

Subscribe

spot_imgspot_img

Popular

More like this
Related

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...