ಹಿಂದಿಯ ಸುಲ್ತಾನೇ ಪೈಲ್ವಾನನಾ?? ಪೈಲ್ವಾನ್ ರಿವ್ಯೂ ಓದಿ.

Date:

ಇಂದು ಬಹುನಿರೀಕ್ಷಿತ ಪೈಲ್ವಾನ್ ಚಿತ್ರ ವಿಶ್ವದಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಿದೆ. ಕಿಚ್ಚ ಸುದೀಪ್ & ನಿರ್ದೇಶಕ ಕೃಷ್ಣ ಅವರ ಕಾಂಬಿನೇಷನ್ ನ ಎರಡನೇ ಸಿನಿಮಾ ಪೈಲ್ವಾನ್. ಈ ಹಿಂದೆ ಹೆಬ್ಬುಲಿಯಂತಹ ಸಿನಿಮಾ ಕೊಟ್ಟಿದ್ದ ಈ ಜೋಡಿ ಇದೀಗ ಮತ್ತೆ ಘರ್ಜಿಸಿದೆ. ಹೌದು ಪೈಲ್ವಾನ್ ಗೆದ್ದಿದ್ದಾನೆ. ಇಂದು ಚಿತ್ರ ವೀಕ್ಷಿಸಿದ ಪ್ರೇಕ್ಷಕ ಫುಲ್ ಫಿದಾ ಆಗಿದ್ದಾನೆ.


ಮೊದಲರ್ಧ ಸುದೀಪ್ ಯಾರು? ಸುನೀಲ್ ಶೆಟ್ಟಿಗೂ ಕಿಚ್ಚನಿಗೂ ಏನು ಲಿಂಕ್? ಸುನೀಲ್ ಶೆಟ್ಟಿ ಆಸೆಯಂತೆ ಕಿಚ್ಚ ನ್ಯಾಷನಲ್ ಕುಸ್ತಿ ಚಾಂಪಿಯನ್ ಆಗ್ತಾರಾ? ಆ ಹಾದಿಯಲ್ಲಿ ಬರೋ ನಾಯಕಿ. ನಾಯಕಿಯ ಆಗಮನದಿಂದ ಮತ್ತೊಂದು ಟ್ರ್ಯಾಕ್ ಗೆ ಕತೆ.. ಇಷ್ಟರಲ್ಲಿ ಮಧ್ಯಂತರಕ್ಕೆ ಚಿತ್ರ ತಲುಪಿರುತ್ತದೆ.. ದ್ವಿತೀಯಾರ್ಧದಲ್ಲಿ ಸುದೀಪ್ ಪಕ್ಕಾ ಕಮರ್ಷಿಯಲ್ ಹೀರೋ. ಬೇರೆಯದೇ ಶೈಲಿಯಲ್ಲಿ ಬದುಕೋ ಕಿಚ್ಚ ಸುನೀಲ್ ಶೆಟ್ಟಿಯವರಿಂದ ದೂರವಾಗೇ ಇರ್ತಾರಾ? ಮತ್ತೆ ಚಾಂಪಿಯನ್ ಆಗ್ತಾರಾ? ಕುಸ್ತಿ ಬಿಟ್ಟು ಬಾಕ್ಸಿಂಗ್ ನ ಯಾವ ಕಾರಣಕ್ಕೆ ಆಡ್ತಾರೆ ಅನ್ನೋದು ಚಿತ್ರದ ಕ್ಲೈಮ್ಯಾಕ್ಸ್ ನ ಅಂಶ.. ಒಟ್ಟಿನಲ್ಲಿ ಮನೆಮಂದಿ ಕುಳಿತು ಒಳ್ಳೆಯ ಮೆಸೇಜ್ ನೊಂದಿಗೆ ಮನರಂಜನೆ ಪಡೆದುಕೊಳ್ಳೋ ಅಂತ ಚಿತ್ರ ಪೈಲ್ವಾನ್..
ಅಂದಹಾಗೆ ಹಿಂದಿಯ ಸುಲ್ತಾನ್ ಗೂ ಕನ್ನಡದ ಪೈಲ್ವಾನ್ ಗೂ ಯಾವುದೇ ಸಂಬಂಧ ಇಲ್ಲ ಸ್ವಾಮಿ

Share post:

Subscribe

spot_imgspot_img

Popular

More like this
Related

ಅಪ್ಪಿತಪ್ಪಿಯೂ ಚಳಿಗಾಲದಲ್ಲಿ ಗರ್ಭಿಣಿಯರು ಈ ತಪ್ಪುಗಳನ್ನು ಮಾಡಬೇಡಿ!

ಅಪ್ಪಿತಪ್ಪಿಯೂ ಚಳಿಗಾಲದಲ್ಲಿ ಗರ್ಭಿಣಿಯರು ಈ ತಪ್ಪುಗಳನ್ನು ಮಾಡಬೇಡಿ! ಇತ್ತೀಚಿನ ದಿನಗಳಲ್ಲಿ ಚಳಿ ದಿನದಿಂದ...

ಇಂದು ಶಾಮನೂರು ಶಿವಶಂಕರಪ್ಪ ಅಂತಿಮ ದರ್ಶನ: ಸಂಜೆ ಪತ್ನಿ ಸಮಾಧಿ ಬಳಿ ಅಂತ್ಯಕ್ರಿಯೆ 

ಇಂದು ಶಾಮನೂರು ಶಿವಶಂಕರಪ್ಪ ಅಂತಿಮ ದರ್ಶನ: ಸಂಜೆ ಪತ್ನಿ ಸಮಾಧಿ ಬಳಿ...

ಕಾಂಗ್ರೆಸ್​​​​​ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ

ಕಾಂಗ್ರೆಸ್​​​​​ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದ...

ನಮ್ಮ ಹೋರಾಟಕ್ಕೆ ಗಾಬರಿಗೊಂಡು ದೆಹಲಿಗೆ ವಾಹನ ಪ್ರವೇಶ ತಡೆಯುತ್ತಿರುವ ಬಿಜೆಪಿ ಸರ್ಕಾರ: ಡಿ.ಕೆ. ಶಿವಕುಮಾರ್

ನಮ್ಮ ಹೋರಾಟಕ್ಕೆ ಗಾಬರಿಗೊಂಡು ದೆಹಲಿಗೆ ವಾಹನ ಪ್ರವೇಶ ತಡೆಯುತ್ತಿರುವ ಬಿಜೆಪಿ ಸರ್ಕಾರ:...