ಹಿಂದೂ ಧರ್ಮವು ಪೂಜಾ, ಆಚರಣೆಗಳಷ್ಟೇ ಅಲ್ಲ; ಅದು ಒಂದು ಜೀವನ ಶೈಲಿ: ಮೋಹನ್ ಭಾಗವತ್

Date:

ಹಿಂದೂ ಧರ್ಮವು ಪೂಜಾ, ಆಚರಣೆಗಳಷ್ಟೇ ಅಲ್ಲ; ಅದು ಒಂದು ಜೀವನ ಶೈಲಿ: ಮೋಹನ್ ಭಾಗವತ್

ಚಿಕ್ಕೋಡಿ: ಹಿಂದೂ ಧರ್ಮವು ಕೇವಲ ಪೂಜಾ ವಿಧಾನ, ಆಹಾರ ಪದ್ಧತಿ ಅಥವಾ ಆಚರಣೆಗಳಷ್ಟೇ ಅಲ್ಲ; ಅದು ಒಂದು ಜೀವನ ಶೈಲಿ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ವೀರಭದ್ರ ದೇವಸ್ಥಾನದಲ್ಲಿ ದರ್ಶನ ಪಡೆದು, ಬಳಿಕ ಶ್ರೀ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ ಅವರು ತುಲಾಭಾರ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹಿಂದೂ ಸಮಾಜ ಮತ್ತು ಜಾಗತಿಕ ವಿಚಾರಗಳ ಕುರಿತು ಮಾತನಾಡಿದ ಅವರು, ನಮ್ಮ ಸಮಾಜದಲ್ಲಿ ಅನೇಕ ದೇವರುಗಳು, ವಿಭಿನ್ನ ಆಹಾರ ಪದ್ಧತಿ ಮತ್ತು ಆಚರಣೆಗಳಿವೆ. ಭೌಗೋಳಿಕವಾಗಿ ಬೇರೆ ಬೇರೆ ಪ್ರದೇಶಗಳಲ್ಲಿ ಇದ್ದರೂ, ನಾವು ಒಟ್ಟಾಗಿ ಬದುಕುತ್ತೇವೆ ಎಂದು ಹೇಳಿದರು.
ಈ ವೈವಿಧ್ಯತೆಯನ್ನು ನಾವು ಕೇವಲ ಒಪ್ಪಿಕೊಳ್ಳುವುದಷ್ಟೇ ಅಲ್ಲ, ಗೌರವಿಸುತ್ತೇವೆ. ಎಲ್ಲರ ಮಾರ್ಗಗಳನ್ನೂ ಮಾನ್ಯತೆ ನೀಡುತ್ತೇವೆ. ಯಾರನ್ನೂ ಬಲವಂತವಾಗಿ ಮತಾಂತರ ಮಾಡುವುದಿಲ್ಲ; ಬದಲಾಗಿ ಪ್ರತಿಯೊಬ್ಬರನ್ನೂ ಅವರಂತೆಯೇ ಸ್ವೀಕರಿಸುವುದು ನಮ್ಮ ಸಂಸ್ಕೃತಿ ಎಂದು ಅವರು ಅಭಿಪ್ರಾಯಪಟ್ಟರು.

Share post:

Subscribe

spot_imgspot_img

Popular

More like this
Related

ವಯೋವೃದ್ಧ ಗಜೇಂದ್ರನಿಗೆ ಶಿಬಿರಕ್ಕೆ ಸ್ಥಳಾಂತರಕ್ಕೆ ಈಶ್ವರ್ ಖಂಡ್ರೆ ಸೂಚನೆ

ವಯೋವೃದ್ಧ ಗಜೇಂದ್ರನಿಗೆ ಶಿಬಿರಕ್ಕೆ ಸ್ಥಳಾಂತರಕ್ಕೆ ಈಶ್ವರ್ ಖಂಡ್ರೆ ಸೂಚನೆ ಚಾಮರಾಜನಗರ: ಹಲವು ದಸರಾ...

ಐಪಿಎಲ್ 2026 ಹಿನ್ನೆಲೆ: ಮೆಟ್ರೋ ಸೇವೆ ರಾತ್ರಿ 2ರವರೆಗೆ ವಿಸ್ತರಣೆ

ಐಪಿಎಲ್ 2026 ಹಿನ್ನೆಲೆ: ಮೆಟ್ರೋ ಸೇವೆ ರಾತ್ರಿ 2ರವರೆಗೆ ವಿಸ್ತರಣೆ ಬೆಂಗಳೂರು: 2026ರ...

IPL ಆರಂಭಕ್ಕೂ ಮುನ್ನ CSK ಗೆ ಶಾಕ್: ಧೋನಿ ಆರಂಭಿಕ ಪಂದ್ಯಗಳಿಂದ ಔಟ್?

IPL ಆರಂಭಕ್ಕೂ ಮುನ್ನ CSK ಗೆ ಶಾಕ್: ಧೋನಿ ಆರಂಭಿಕ ಪಂದ್ಯಗಳಿಂದ...

ಇಂಧನ ಕೊರತೆ ಇಲ್ಲ, ದೇಶದಲ್ಲಿ ಲಾಕ್‌ ಡೌನ್ ಇಲ್ಲ: ಕೇಂದ್ರ ಸಚಿವರ ಸ್ಪಷ್ಟನೆ

ಇಂಧನ ಕೊರತೆ ಇಲ್ಲ, ದೇಶದಲ್ಲಿ ಲಾಕ್‌ ಡೌನ್ ಇಲ್ಲ: ಕೇಂದ್ರ ಸಚಿವರ...