No menu items!
13.5 C
Munich
Wednesday, April 22, 2026

ವಯೋವೃದ್ಧ ಗಜೇಂದ್ರನಿಗೆ ಶಿಬಿರಕ್ಕೆ ಸ್ಥಳಾಂತರಕ್ಕೆ ಈಶ್ವರ್ ಖಂಡ್ರೆ ಸೂಚನೆ

Must read

ವಯೋವೃದ್ಧ ಗಜೇಂದ್ರನಿಗೆ ಶಿಬಿರಕ್ಕೆ ಸ್ಥಳಾಂತರಕ್ಕೆ ಈಶ್ವರ್ ಖಂಡ್ರೆ ಸೂಚನೆ

ಚಾಮರಾಜನಗರ: ಹಲವು ದಸರಾ ಉತ್ಸವಗಳಲ್ಲಿ ಭಾಗವಹಿಸಿದ್ದ ವಯೋವೃದ್ಧ ಗಜೇಂದ್ರ ಎಂಬ ಸಾಕಾನೆ ಈಗ ಏಕಾಂಗಿಯಾಗಿರುವ ಹಿನ್ನೆಲೆ, ಅದನ್ನು ಶಿಬಿರಕ್ಕೆ ಸ್ಥಳಾಂತರಿಸಲು ಈಶ್ವರ್ ಖಂಡ್ರೆ ಸೂಚಿಸಿದ್ದಾರೆ.
ಚಾಮರಾಜನಗರ ತಾಲೂಕಿನ ಬೂದಿಪಡಗ ಪ್ರದೇಶದಲ್ಲಿ ಇರುವ ಗಜೇಂದ್ರನಿಗೆ ಸದ್ಯ ಸುಮಾರು 75 ವರ್ಷ ವಯಸ್ಸಾಗಿದೆ. ಕಳೆದ ಹಲವು ವರ್ಷಗಳಿಂದ ಅದು ಒಂಟಿಯಾಗಿದ್ದು, ಅದರ ದೈಹಿಕ ಸಾಮರ್ಥ್ಯವೂ ಕಡಿಮೆಯಾಗಿದೆ.
ಹಿಂದೆ ಗಜೇಂದ್ರ ಜೊತೆ ದುರ್ಗಾಪರಮೇಶ್ವರಿ ಎಂಬ ಇನ್ನೊಂದು ಆನೆ ಇತ್ತು. ಆದರೆ ಅದು ಈಗ ಬೇರೆ ಶಿಬಿರದಲ್ಲಿರುವುದರಿಂದ ಗಜೇಂದ್ರ ಕಳೆದ 5–6 ವರ್ಷಗಳಿಂದ ಏಕಾಂಗಿಯಾಗಿದೆ.
ವಯಸ್ಸಿನ ಕಾರಣದಿಂದ ಗಜೇಂದ್ರ ಕಾಡಿಗೆ ಮೇಯಲು ಹೋಗುವ ವೇಳೆ ಬಲಿಷ್ಠ ಕಾಡಾನೆಗಳಿಂದ ಅಪಾಯ ಎದುರಾಗುವ ಸಾಧ್ಯತೆ ಇರುವುದರಿಂದ, ಮತ್ತಿಗೋಡು ಅಥವಾ ಇತರೆ ಸುರಕ್ಷಿತ ಶಿಬಿರಕ್ಕೆ ಸ್ಥಳಾಂತರಿಸಲು ಸಚಿವರು ಆದೇಶಿಸಿದ್ದಾರೆ.

- Advertisement -spot_img

More articles

- Advertisement -spot_img

Latest article