ಹುಡುಗಿಯರೇ ನಿಮ್ಮ ಗುಣಗಳು ಹುಡುಗರಿಗೆ ತುಂಬಾ ಇಷ್ಟ..!

Date:

ಹುಡುಗರು ಲವ್ವಲ್ಲಿ ಬೀಳುವುದು ಹುಡುಗಿಯ ಅಂದ-ಚಂದ ನೋಡಿ ಎನ್ನುವುದಕ್ಕಿಂತ ಹೆಚ್ಚಾಗಿ ಹೆಣ್ಣಿನ ಗುಣಗಳು ಹುಡುಗರ ಗಮನ ಸೆಳೆಯುತ್ತವೆ. ಹುಡುಗರಿಗೆ ಇಷ್ಟವಾಗುವ ಅಂಥಾ ಗುಣಗಳು ಇಲ್ಲಿವೆ.

* ಹುಡಗರಿಗೆ ನಗುಮೊಗದ ಹುಡ್ಗೀರು ಇಷ್ಟ. ಅವರ ಚೆಲುವು ಅವರ ಸುಂದರ ನಗುವಿನಲ್ಲಿ ಅಡವಗಿದೆ. ನಗು ಗೆಳೆತನದ ದಾರಿಯನ್ನು ತೆರೆಯುತ್ತದೆ. ಆದರೆ ಅದು ಕೃತಕ ನಗುವಾಗಿರಬಾರದು ಅಷ್ಟೆ. ಅಂತರಾಳದಿಂದ ಬರುವ ನಗುವಿನಲ್ಲಿ ನೈಜ ವ್ಯಕ್ತಿತ್ವ ಇರುತ್ತದೆ. ಆದ್ದರಿಂದ ಹುಡುಗರು ಮುಖ ಗಂಟಿಕ್ಕಿಕೊಂಡಿರುವ ಹುಡ್ಗೀರನ್ನು ಮಾತನಾಡಿಸಲ್ಲ. ಬದಲಾಗಿ ನಗುವಿನಲ್ಲಿ ಮನಸೂರೆಗೊಳಿಸುವ ಹುಡ್ಗೀರು ಜೀವ.

* ಸಂಶಯ ಮನೋಪ್ರವೃತ್ತಿ, ಸಂಕುಚಿತ ಮನೋಭಾವದ ಹುಡುಗಿಯನ್ನು ಗಂಡು ಎಂದಿಗೂ ಎಂದೆಂದಿಗೂ ಬಯಸುವುದಿಲ್ಲ. ವಿಶಾಲ ಮನೋಭಾವದ ಅಲೋಚನೆ, ಯಾವುದೇ ಸಮಸ್ಯೆಯನ್ನು ಧೈರ್ಯವಾಗಿ ಎದುರಿಸುವ ಹೆಣ್ಣಿನ ಕಡೆಗೆ ಗಂಡು ಮೆಚ್ಚುಗೆಯಿಂದ ನೋಡುತ್ತಾನೆ.
* ಆತ್ಮವಿಶ್ವಾಸ ಇರುವ ಹೆಣ್ಣು ಬೇಗನೆ ಸೆಳೆಯುತ್ತಾಳೆ. . ಆದರೆ ಹೆಚ್ಚಿನ ಹೆಣ್ಣು ಮಕ್ಕಳಲ್ಲಿ ಇದರ ಕೊರತೆ ಕಂಡು ಬರುತ್ತದೆ. ಅದಕ್ಕೆ ಅವರು ಬೆಳೆದು ಬಂದ ಪರಿಸರ ಕೂಡ ಕಾರಣ. ಆದರೆ ಅದನ್ನು ಮೀರಿ ಹೆಣ್ಣು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಯಾರನ್ನೋ ಆಕರ್ಷಿಸಬೇಕು ಅಂತಲ್ಲ, ಜೀವನವನ್ನು ಎದುರಿಸುವ ಶಕ್ತಿ ಅವಳಲ್ಲಿ ಇರಬೇಕು.

* ನಕಾರಾತ್ಮಕ ವ್ಯಕ್ತಿತ್ವದವರೊಂದಿಗೆ ಜೀವನ ಸಾಗಿಸುವುದು ಕಷ್ಟ. ಪಾಸಿಟಿವ್‌ ಚಿಂತನೆಗಳು, ಪಾಸಿಟಿವ್‌ ಲುಕ್‌ ಒಟ್ಟಿನಲ್ಲಿ ಎಲ್ಲವೂ ಹೆಣ್ಣಿನಲ್ಲಿ ಪಾಸಿಟಿವ್‌ ಆಗಿದ್ದರೆ, ಗಂಡು ಸದಾ ಆ ಹೆಣ್ಣಿಗೆ ಆಕರ್ಷಿತನಾಗಿರುತ್ತಾನೆ. ಯಾವುದೇ ವಿಷಯವನ್ನು ಪಾಸಿಟಿವ್‌ ಆಗಿ ತಿಳಿದುಕೊಳ್ಳುವ ಹುಡುಗಿಯರಿಗೆ ಹುಡುಗರು ಕ್ಲೀನ್‌ ಬೋಲ್ಡ್‌ ಆಗುತ್ತಾರೆ.

* ಅಳು ಮುಂಜಿಗಿಂತ ಹಾಸ್ಯ ಪ್ರವೃತ್ತಿಯ ಹುಡುಗಿಯರನ್ನು ಕಂಡರೆ ಹುಡುಗರಿಗೆ ಇಷ್ಟ. ಹಾಸ್ಯ ಪ್ರವೃತ್ತಿ ಎಲ್ಲರಲ್ಲೂ ಇರುವಂಥದಲ್ಲ. ಇದು ನಿಮ್ಮ ಜಾಣ್ಮೆಯನ್ನು ಹಾಗೂ ನಿಮ್ಮ ಬುದ್ಧಿಶಕ್ತಿಯನ್ನು ಸೂಚಿಸುತ್ತದೆ. ಹಾಸ್ಯ ಪ್ರವೃತ್ತಿ ಇರುವ, ತನ್ನ ಬಗ್ಗೆಯೇ ಹಾಸ್ಯ ಮಾಡಬಲ್ಲ ಹಾಗೂ ಕಷ್ಟದ ಸಮಯದಲ್ಲೂ ಆರಾಮವಾಗಿ ಅಂತಹ ಸನ್ನಿವೇಶಗಳನ್ನು ನಿಭಾಯಿಸಬಲ್ಲ ಹುಡುಗಿಯರನ್ನು ಇಷ್ಟ ಪಡುತ್ತಾರೆ.

* ಮುಖ್ಯವಾಗಿ ಹುಡುಗರು ತೋರಿಕೆಯನ್ನು ಇಷ್ಟಪಡಲ್ಲ. ಅವರು ಅವರಾಗಿಯೇ ಇರುವ ಹುಡ್ಗೀರು ಹುಡಗರಿಗಿಷ್ಟ.

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...