ಹುಡುಗಿಯರೇ ಹುಷಾರ್: ನೀವು ನೈಲ್ ಪಾಲಿಶ್ ಪ್ರಿಯರಾಗಿದ್ದರೆ ಈ ಸುದ್ದಿ ಮಿಸ್ ಮಾಡ್ದೆ ನೋಡಿ!

Date:

ಹುಡುಗಿಯರೇ ಹುಷಾರ್: ನೀವು ನೈಲ್ ಪಾಲಿಶ್ ಪ್ರಿಯರಾಗಿದ್ದರೆ ಈ ಸುದ್ದಿ ಮಿಸ್ ಮಾಡ್ದೆ ನೋಡಿ!

ಹುಡುಗಿಯರು ಸಾವಿರಾರು ರೂಪಾಯಿ ಖರ್ಚು ಮಾಡಿ ಬಣ್ಣ ಬಣ್ಣದ ನೈಲ್ ಪಾಲಿಶ್​ಗಳನ್ನು ಹಚ್ಚುತ್ತಾರೆ. ನೈಲ್ ಪಾಲಿಶ್, ಜೆಲ್ ಪಾಲಿಶ್, ನಕಲಿ ಉಗುರುಗಳು ಹಾಗೂ ಇತರೆ ಉಗುರು ಸೌಂದರ್ಯೋತ್ಪನ್ನಗಳನ್ನು ತಯಾರಿಸಲು ಬಳಸುವ ರಾಸಾಯನಿಕ ಪದಾರ್ಥಗಳು ಆರೋಗ್ಯಕ್ಕೆ ಕಂಟಕಪ್ರಾಯವಾಗಿವೆ.

ಉಗುರಿನ ಬಣ್ಣಕ್ಕೆ ಬಳಸುವ ರಾಸಾಯನಿಕಗಳು ನಾನಾ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಈ ಉಗುರುಗಳಿಗೆ ಹಚ್ಚುವ ಬಣ್ಣ ಕ್ರಮೇಣವಾಗಿ ಆಹಾರದ ಜೊತೆ ಸೇರಿ ಹೊಟ್ಟೆಗೆ ಸೇರುತ್ತದೆ. ಇದರಿಂದ ನೈಲ್ ಪಾಲಿಶ್ ನಲ್ಲಿರುವ ಮಾರಕ ರಾಸಾಯನಿಕ ಅಂಶಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಅಷ್ಟೇ ಅಲ್ಲದೆ ಕ್ಯಾನ್ಸರ್​ನಂತಹ ಮಾರಣಾಂತಿಕ ಕಾಯಿಲೆಗೂ ಕಾರಣವಾಗುತ್ತದೆ ಎಂಬ ಆಘಾತಕಾರಿ ಅಂಶ ಇತ್ತೀಚೆಗೆ ದೃಢಪಟ್ಟಿದೆ.

ಸೌಂದರ್ಯ ವರ್ಧಕಗಳನ್ನು ಉತ್ಪಾದಿಸುವ ಉದ್ಯಮಗಳಿಗೆ ಕೆಲವು ಕಠಿಣ ನಿಯಮಗಳನ್ನು ವಿಧಿಸುವ ಅಗತ್ಯವಿದೆ. ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಕೆಲವು ಪ್ರಾಡೆಕ್ಟ್​ಗಳಲ್ಲಿ ತುಂಬಾ ಡೇಂಜರೆಸ್ ಕೆಮಿಕಲ್ಸ್​ಗಳನ್ನು ಬಳಸಲಾಗುತ್ತಿದೆ. 10 ನಿಮಿಷದಲ್ಲಿ ಕೂದಲಿಗೆ ಬಣ್ಣ ಹಾಕುವುದು, ಬೆಳ್ಳಗಿನ ತ್ವಚೆಗೆ ಈ ಕ್ರೀಮ್ ಹಚ್ಚುವುದು, ಹಾಗೆಯೇ ನೈಲ್ ಪಾಲಿಶ್​ಗಳು ನಿಧಾನವಾಗಿ ನಮ್ಮ ಇಡೀ ಆರೋಗ್ಯವನ್ನು ಹಾಳು ಮಾಡುವಂತಹ ಅಂಶಗಳನ್ನು ಹೊಂದಿವೆ. ಹಾಗಾಗಿ ಇದರಿಂದ ದೂರ ಉಳಿಯುವುದು ಒಳಿತು. ಅದರ ಬದಲು ಕೈಗೆಟುಕುವ ಅಂತರದಲ್ಲಿ ನೈಸರ್ಗಿಕವಾಗಿ ಸಿಗುವ ಹಾಗೂ ಮನೆಯಲ್ಲೇ ಇರುವ ಅರಿಶಿಣ, ಮೊಸರು, ಕಡಲೆ ಹಿಟ್ಟು ಇತ್ಯಾದಿಗಳಿಂದ ನಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು ಎಂದು ತಜ್ಞರು ಸಲಹೆ ಕೊಟ್ಟಿದ್ದಾರೆ.

ಆರೋಗ್ಯ ತಜ್ಞರ ಪ್ರಕಾರ ನೈಲ್ ಪಾಲಿಶ್ ಹಾಕಿಕೊಂಡ ನಂತರ ತಕ್ಷಣಕ್ಕೆ ಆ ಕೈಗಳಳಿಂದಲೇ ಊಟ ಮಾಡಲಿಲ್ಲ ಎಂದೇ ಇಟ್ಟುಕೊಂಡರೂ ಉಗುರುಗಳ ಮೂಲಕ ಮತ್ತು ಚರ್ಮದ ಮೂಲಕ ಈ ಹಾನಿಕಾರಕ ರಸಾಯನಿಕಗಳು ಕಾಲಾಂತರದಲ್ಲಿ ದೇಹ ಸೇರುವ ಅಪಾಯ ಇದ್ದೇ ಇರುತ್ತದೆ. ದೇಹದಲ್ಲಿ ಥೈರಾಯ್ಡ್ ಹಾರ್ಮೋನುಗಳ ಬದಲಾವಣೆ, ಅತಿ ಹೆಚ್ಚು ಈಸ್ಟ್ರೋಜನ್ ಹಾರ್ಮೋನ್ ಉತ್ಪತ್ತಿಯಾಗುವುದು, ಅಂಡಾಶಯದ ಕ್ಯಾನ್ಸರ್ ಸೇರಿದಂತೆ ಇನ್ನೂ ಅನೇಕ ಆರೋಗ್ಯ ಸಮಸ್ಯೆಗಳು ನೇಲ್ ಪಾಲಿಶ್​ನಿಂದ ಬರುವ ಸಾಧ್ಯತೆಗಳು ಹೆಚ್ಚು.

ನೈಲ್ ಪಾಲಿಶ್​ನಲ್ಲಿ ಒಂದೋ, ಎರಡೋ ಬಗೆಯ ರಾಸಾಯನಿಕ ಅಂಶಗಳನ್ನು ಸೇರಿಸಿರುವುದಿಲ್ಲ. ಬದಲಿಗೆ ನೈಲ್ ಪಾಲಿಶ್​ಗಳ ಗಾಢ ಬಣ್ಣಕ್ಕೆ, ಹೊಳಪು ಬರಲು, ಬಹುಕಾಲ ಉಗುರುಗಳ ಮೇಲೆ ಇರುವಂತೆ ಮಾಡಲು ಅವುಗಳಿಗೆ ಅನುಕೂಲವಾಗುವಂತೆ ಬೇರೆ ಬೇರೆ ಬಗೆಯ ರಾಸಾಯನಿಕ ಅಂಶಗಳನ್ನು ಬಳಸಲಾಗುತ್ತೆ. ಅದರಲ್ಲಿ ಒಂದಾದ ನ್ಯೂರೋಟಾಕ್ಸಿನ್ ಎಂಬ ರಸಾಯನಿಕ ಅಂಶ ನಮ್ಮ ನರಮಂಡಲದ ಮೇಲೆ ಪ್ರಭಾವ ಬೀರುತ್ತದೆ.

ನೈಲ್ ಪಾಲಿಶ್​ನಲ್ಲಿ ಕಂಡುಬರುವ ಟಾಲಿನ್ ಎನ್ನುವ ಅಂಶವು ಗರ್ಭಾವಸ್ಥೆಯ ಸಮಯದಲ್ಲಿ ಭ್ರೂಣದ ಅಭಿವೃದ್ಧಿಯಲ್ಲಿ ತೊಂದರೆ ಉಂಟು ಮಾಡುತ್ತದೆ. ಅವಧಿಗೂ ಮುನ್ನ ಹೆರಿಗೆ, ಪುಟ್ಟ ಮಕ್ಕಳಲ್ಲಿ ಅರಿವಿನ ಸಮಸ್ಯೆಯಂತಹ ಗಂಭೀರ ಸಮಸ್ಯೆಗಳಿಗೆ ಟಾಲಿನ್​ ಎಂಬ ಕೆಟ್ಟ ರಸಾಯನಿಕ ಅಂಶ ಪ್ರಭಾವಬೀರುತ್ತೆ

ಉಗುರುಗಳ ಮೇಲೆ ದೀರ್ಘಕಾಲದವರೆಗೆ ಬಣ್ಣ ಉಳಿಯುವಂತೆ ಮಾಡಲು ಹಾಗೂ ನೈಲ್ ಪಾಲಿಶ್ ಗಟ್ಟಿಯಾಗಿ ಕೂರಲು ಫಾರ್ಮಾಲ್ಡಿಹೈಡ್ ಎನ್ನುವ ರಾಸಾಯನಿಕ ಅಂಶವನ್ನು ನೈಲ್ ಪಾಲಿಶ್​ಗಳಲ್ಲಿ ಬಳಸಲಾಗುತ್ತೆ. ಆಶ್ಚರ್ಯವೆಂದರೆ ಈ ಅಂಶವು ಮನುಷ್ಯನ ದೇಹದ ಜೀವಕೋಶಗಳಲ್ಲಿಯೂ ಸಹಜವಾಗಿ ಉತ್ಪತ್ತಿಯಾಗುತ್ತೆ. ಆದರೆ ಇದರ ರಾಸಾಯನಿಕ ರೂಪ ಆರೋಗ್ಯಕ್ಕೆ ಬಹಳ ಕೆಟ್ಟದ್ದು ಎಂಬುದನ್ನು ಮನಗಾಣಬೇಕು ಎಂದು ತಜ್ಞರು ಎಚ್ಚರಿಸುತ್ತಾರೆ.

Share post:

Subscribe

spot_imgspot_img

Popular

More like this
Related

Elephant Teeth: ಆನೆ ದಂತಕ್ಕೆ ಏಕೆ ಅಷ್ಟೊಂದು ಬೇಡಿಕೆ! ಇಲ್ಲಿ ತಿಳಿಯಿರಿ

Elephant Teeth: ಆನೆ ದಂತಕ್ಕೆ ಏಕೆ ಅಷ್ಟೊಂದು ಬೇಡಿಕೆ! ಇಲ್ಲಿ ತಿಳಿಯಿರಿ ಇತಿಹಾಸದುದ್ದಕ್ಕೂ...

ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ಮಂಗಳೂರು: ಮಹೇಶ್...

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ ಬೆಂಗಳೂರು:-ಕಲ್ಯಾಣ...

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್ ಚಿಕ್ಕಮಗಳೂರು: ಶೃಂಗೇರಿ...