ಹೃದಯಾಘಾತದಿಂದ ಬಸ್ ನಲ್ಲೇ ಪ್ರಾಣಬಿಟ್ಟ ಬಿಎಂಟಿಸಿ ಡ್ರೈವರ್!
ಬೆಂಗಳೂರು:- ಬಿಎಂಟಿಸಿ ಡ್ರೈವರ್ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಗರದ ಯಶವಂತಪುರ ಬಳಿ ಜರುಗಿದೆ. ಡ್ರೈವಿಂಗ್ ವೇಳೆಯೇ ಈ ದುರ್ಘಟನೆ ಸಂಭವಿಸಿದೆ.
39 ವರ್ಷದ ಕಿರಣ್ 39 ಸಾವನ್ನಪ್ಪಿದ ಬಿಎಂಟಿಸಿ ಚಾಲಕ. ಬಿಎಂಟಿಸಿ ಡಿಪೋ 40ರಲ್ಲಿ ಕಿರಣ್ ಕಾರ್ಯನಿರ್ವಹಿಸುತ್ತಿದ್ದರು. ನೆಲಮಂಗಲದಿಂದ ಯಶವಂತಪುರ ಕಡೆ ಬರ್ತಿದ್ದ ಬಸ್ ಚಲಿಸುತ್ತಿರುವಾಗಲೆ ಎದೆ ನೋವು ಕಾಣಿಸಿಕೊಂಡಿತ್ತು.
ತಕ್ಷಣವೇ ಚಾಲಕ ಕಿರಣ್ ಬಸ್ ನಿಲ್ಲಿಸಿದ್ದ. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರು ಬಸ್ ನಲ್ಲಿದ್ರು ಎಂದು ತಿಳಿದು ಬಂದಿದೆ.