ತನ್ನ ಪತ್ನಿ ಸಾವನ್ನಪ್ಪಿದ್ದಾಳೆ, ಆಕೆಯ ಶವ ಸಂಸ್ಕಾರವನ್ನು ಮಾಡಬೇಕು, ಆದರೆ ಊರಿನವರು ಆಕೆಯ ಶವ ಸಂಸ್ಕಾರವನ್ನು ಮಾಡಲು ಒಪ್ಪುತ್ತಿಲ್ಲ, ಊರಿನ ಯಾವ ಭಾಗಕ್ಕೆ ಕೊಂಡೊಯ್ದರು ಸಹ ನಮ್ಮ ಊರಿನ ಸುತ್ತಮುತ್ತ ಶವವನ್ನು ಹೂಳಬೇಕು ಅಥವಾ ಸುಡಲು ಬೇಡ ನಿನ್ನ ಹೆಂಡತಿಯ ಶವವನ್ನು ಎತ್ತಿಕೊಂಡು ಊರು ಬಿಟ್ಟು ಹೊರಟು ಹೋಗು ಎಂದು ಮೃತನಿಗೆ ಇಡೀ ಊರಿಗೂರೇ ಆತನನ್ನು ಹೊರ ಕಳುಹಿಸಿದೆ.
ಊರಿನವರು ಶವಸಂಸ್ಕಾರ ಮಾಡಲು ಒಪ್ಪಿಗೆ ನೀಡದ ಕಾರಣ ತನ್ನ ಹೆಂಡತಿಯ ಶವವನ್ನು ತಾನೊಬ್ಬನೇ ಸೈಕಲ್ ಮೇಲೆ ಹಾಕಿಕೊಂಡು ಊರಿನ ಆಚೆ ಈಚೆ ಎಲ್ಲ ಸುತ್ತಾಡಿದ್ದಾನೆ. ಆದರೆ ಎಲ್ಲೂ ಸಹ ಶವಸಂಸ್ಕಾರ ಮಾಡಲು ಒಪ್ಪಿಗೆ ನೀಡಲಿಲ್ಲ ಜಾಗವನ್ನು ಕೊಡಲಿಲ್ಲ. ಇಷ್ಟಾದರೂ ಸಹ ತನ್ನ ಪಟ್ಟನ್ನು ಬಿಡದ ವೃತ್ತ ತನ್ನ ಹೆಂಡತಿಯ ಶವ ಸಂಸ್ಕಾರವನ್ನು ಮಾಡಲೇಬೇಕೆಂದು ಸೈಕಲ್ ಮೇಲೆ ಹೆಣವನ್ನು ಹಾಕಿಕೊಂಡು ಜಾಗಕ್ಕಾಗಿ ಸತತವಾಗಿ ಹುಡುಕಾಟ ನಡೆಸಿದ್ದಾನೆ.
ಕೊನೆಗೆ ಎಲ್ಲೂ ಜಾಗ ಸಿಗದಿದ್ದಾಗ ರಸ್ತೆಯಲ್ಲಿಯೇ ಸೈಕಲ್ ಬಿಟ್ಟು ರಸ್ತೆ ಬದಿಯಲ್ಲಿ ಸುಸ್ತಾಗಿ ಕುಳಿತಿದ್ದಾನೆ. ರಸ್ತೆ ಮೇಲೆ ತನ್ನ ಹೆಂಡತಿ ರಾಜಕುಮಾರಿ ದೇವಿಯ ಶವವನ್ನು ಇಟ್ಟುಕೊಂಡು ಕಣ್ಣೀರು ಹಾಕುತ್ತಾ ರಸ್ತೆಬದಿಯಲ್ಲಿ ಆತೃಪ್ತ ಕುಳಿತಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೋಡುಗರ ಕಣ್ಣುಗಳು ಒದ್ದೆಯಾಗಿವೆ. ಈ ಅಮಾನವೀಯ ಘಟನೆ ನಡೆದಿರುವುದು ಉತ್ತರ ಪ್ರದೇಶದ ಜೌನ್ ಪುರದಲ್ಲಿ. ಮನುಷ್ಯ ಇದ್ದಾಗಲಂತೂ ನೆಮ್ಮದಿಯಾಗಿ ಬದುಕಲು ನಮ್ಮ ಸಮಾಜ ಬಿಡುವುದಿಲ್ಲ ಕೊನೆಪಕ್ಷ ಸತ್ತಮೇಲಾದರೂ ನೆಮ್ಮದಿಯಾಗಿ ಶವಸಂಸ್ಕಾರ ಪಡೆದುಕೊಳ್ಳುವುಕ್ಕೂ ಸಹ ಜನ ಬಿಡದ ಮಟ್ಟಿಗೆ ಹಾಳಾಗಿ ಬಿಟ್ಟಿರುವುದು ನಿಜಕ್ಕೂ ತೀರಾ ಕೆಟ್ಟ ಸಂಗತಿ..