ಹೆಣ್ಣುಮಕ್ಕಳಿಗಾಗಿ ಈ ಡಾಕ್ಟರ್ ಏನೆಲ್ಲಾ ಮಾಡ್ತಿದ್ದಾರೆ ಗೊತ್ತಾ?

Date:

ಡಾ. ಶಿಪ್ರಾ ಧಾರ್. ಹೆಣ್ಣು ಮಕ್ಕಳ ರಕ್ಷಣೆಯೇ ಇವರ ಮುಖ್ಯ ಗುರಿ. ಇವರ ಈ ಗುರಿ ಒಂದು ಹೋರಾಟದ ರೂಪ ತಾಳಿದೆ. ತಮ್ಮ ಧ್ಯೇಯವನ್ನು ಪೂರ್ಣಗೊಳಿಸಲು ಜೀವನವನ್ನೇ ಧಾರೆ ಎರೆಯಲು ಶಿಪ್ರಾ ಸಿದ್ಧರಿದ್ದಾರೆ. ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಎಂ.ಡಿ. ಪದವಿ ಪಡೆದಿರುವ ಶಿಪ್ರಾ ಅವರಿಗೆ ವೈದ್ಯೆಯಾಗಿ ಹಣಗಳಿಸುವ ಆಸೆಯಿಲ್ಲ. ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಸಮಾಜ ಸೇವೆ ಮಾಡುವುದು ಅವರ ಉದ್ದೇಶವಾಗಿದೆ.
ವೈದ್ಯಕೀಯ ಪದವಿ ಪೂರ್ಣಗೊಳಿಸಿದ ಡಾ. ಶಿಪ್ರಾ, ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಬದಲು ತಮ್ಮದೇ ಒಂದು ಆಸ್ಪತ್ರೆ ತೆರೆಯಬೇಕೆಂದು ನಿರ್ಧರಿಸಿದರು. ಆದರೆ, ಕೆಲ ವರ್ಷದ ಹಿಂದೆ ಅವರ ಆಸ್ಪತ್ರೆಯಲ್ಲಿ ನಡೆದ ಘಟನೆ ಅವರ ಜೀವನದಲ್ಲಿ ಸಾಕಷ್ಟು ಬದಲಾವಣೆ ತರಲು ಕಾರಣವಾಯ್ತು. ಅವರ ಜೀವನದ ದಿಕ್ಕನ್ನು ಬದಲಾಯಿಸಿತು.


  • ಡಾ.ಶಿಪ್ರಾ ಅವರ ಆಸ್ಪತ್ರೆಗೆ ಮಧ್ಯವಯಸ್ಕ ಮಹಿಳೆಯೊಬ್ಬರು ಗರ್ಭಿಣಿ ಸೊಸೆಯೊಂದಿಗೆ ಬಂದಿದ್ದರಂತೆ. ಚಿಕಿತ್ಸೆ ನಂತರ ಆ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದರಂತೆ. ಮೊಮ್ಮಗಳಾಗಿರುವುದಕ್ಕೆ ಖುಷಿಪಡುವ ಬದಲು ಆ ಮಹಿಳೆ ಕೋಪಗೊಂಡಿದ್ದರಂತೆ. ಹೆಣ್ಣು ಮಗುವಿಗೆ ಜನ್ಮ ನೀಡಿದ ಸೊಸೆಗೆ ಛೀಮಾರಿ ಹಾಕಿದರಲ್ಲದೆ, ಡಾಕ್ಟರ್ಗೂ ಹಿಡಿಶಾಪ ಹಾಕುತ್ತಿದ್ದಂತೆ. ಈ ಘಟನೆ ಡಾ. ಶಿಪ್ರಾ ಬದುಕಿನ ಚಿತ್ರಣವನ್ನೇ ಬದಲಾಯಿಸಿತಂತೆ.
    ನೋಡಿ, ಆವೊಂದು ಘಟನೆಯ ನಂತ್ರ ಆಸ್ಪತ್ರೆಯಲ್ಲಿ ಜನಿಸುವ ಹೆಣ್ಣು ಮಕ್ಕಳ ಚಿಕಿತ್ಸೆಯನ್ನು ಉಚಿತವಾಗಿ ಮಾಡುವ ನಿರ್ಧಾರಕ್ಕೆ ಬಂದ್ರು ಡಾ. ಶಿಪ್ರಾ. ಅಲ್ಲಿಂದ ಇಲ್ಲಿಯವರೆಗೂ ಹೆಣ್ಣು ಶಿಶುಗಳ ಚಿಕಿತ್ಸೆಯನ್ನು ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಲಾಗುತ್ತಿದೆ. ಹೆಣ್ಣು ಮಕ್ಕಳಿಗೆ ಉಚಿತ ಚಿಕಿತ್ಸೆಯೊಂದೇ ಅಲ್ಲ, ಆ ಹೆಣ್ಣು ಮಕ್ಕಳ ಓದಿನ ಖರ್ಚನ್ನು ಡಾ. ಶಿಪ್ರಾ ನೋಡಿಕೊಳ್ಳುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಒಂದು ಶಾಲೆಯನ್ನು ತೆರೆಯುವ ಯೋಚನೆಯಲ್ಲಿದ್ದಾರೆ.
    ಬಡ ಹಾಗೂ ನಿರ್ಗತಿಕ ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಸ್ವಾವಲಂಬಿಗಳಾಗಲಿ ಎನ್ನುವ ಉದ್ದೇಶದಿಂದ ಶಾಲೆ ಆರಂಭಿಸಲು ಡಾ. ಶಿಪ್ರಾ ಮುಂದಾಗಿದ್ದಾರೆ. ಶಿಪ್ರಾ ಅವರ ಈ ಕಾರ್ಯ ಅನೇಕರ ಮೆಚ್ಚುಗೆಗೆ ಕಾರಣವಾಗಿದೆ. ಕೆಲವು ಸಂಘ ಸಂಸ್ಥೆಗಳು ಡಾ. ಶಿಪ್ರಾ ನೆರವಿಗೆ ಬಂದಿವೆ. ಅಷ್ಟೇ ಅಲ್ಲ ಆಸ್ಪತ್ರೆಗೆ ಬರುವ ಜನರ ಆಲೋಚನೆ ಕೂಡ ಬದಲಾಗ್ತಾ ಇದೆ.
    ಈಗ ಹುಡುಗ ಆಗ್ಲಿ ಹುಡುಗಿಯೇ ಆಗಲಿ, ಯಾವುದೇ ವ್ಯತ್ಯಾಸವಿಲ್ಲ. ಹುಡುಗಿಯಾದ್ರೆ ಡಾ. ಶಿಪ್ರಾ ಮೇಡಂ ಹಾಗೆಯೇ ವೈದ್ಯರನ್ನಾಗಿ ಮಾಡುತ್ತೇವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಪೋಷಕ ವರ್ಗ. ಇಲ್ಲಿಯವರೆಗೆ ಡಾ. ಶಿಪ್ರಾ ಅವರ ಆಸ್ಪತ್ರೆಯಲ್ಲಿ 150ಕ್ಕೂ ಅಧಿಕ ಹೆಣ್ಣು ಮಕ್ಕಳು ಹುಟ್ಟಿವೆ. ಈ ಎಲ್ಲ ಶಿಶುಗಳ ಚಿಕಿತ್ಸೆಯನ್ನು ಉಚಿತವಾಗಿ ಮಾಡಿರುವ ಡಾ. ಶಿಪ್ರಾ ಕುಟುಂಬದವರಿಗೆ ದೊಡ್ಡ ಉಡುಗೊರೆಯನ್ನು ನೀಡಿದ್ದಾರೆ.
    ಹೆಣ್ಣು ಮಕ್ಕಳ ರಕ್ಷಣೆಗಾಗಿ ಕ್ಯಾಂಪೇನ್ ಮಾಡುತ್ತಿರುವ ಡಾ. ಶಿಪ್ರಾ ಅವರ ಹಿಂದೆ ಅವರ ಪತಿ ಡಾ. ಮನೋಜ್ ಶ್ರೀವಾಸ್ತವ್ ಅವರ ದೊಡ್ಡ ಕೊಡುಗೆ ಇದೆ. ಪತ್ನಿಯ ಪ್ರತಿ ಹೆಜ್ಜೆಗೂ ಬೆಂಬಲ ನೀಡುತ್ತಿರುವ ಡಾ. ಮನೋಜ್ ಕೂಡ ಒಬ್ಬ ವೈದ್ಯರು. ಪತ್ನಿಯ ಕಾರ್ಯವನ್ನು ಶ್ಲಾಘಿಸಿಸುತ್ತಾರೆ. ಇಡೀ ಗುಜರಾತ್ ಕೂಡ ಡಾ.ಶಿಪ್ರಾ ಕಾರ್ಯವೈಖರಿಯನ್ನು ಕೊಂಡಾಡುತ್ತಿದೆ.

    ಏನೇ ಹೇಳಿ, ಹೆಣ್ಣು ಮಕ್ಕಳ ರಕ್ಷಣೆ ಹೊಣೆ ಹೊತ್ತಿರುವ ಡಾ. ಶಿಪ್ರಾ ಅವರು ಇತರರಿಗೆ ಮಾದರಿಯಾಗಿದ್ದಾರೆ. ಅವರ ಕಾರ್ಯಕ್ಷೇತ್ರ ಚಿಕ್ಕದಿದೆ. ಆದ್ರೆ ಹೆಣ್ಣು ಮಕ್ಕಳ ರಕ್ಷಣೆಗೆ ಅವರು ಕೈಗೊಳ್ಳುತ್ತಿರುವ ಯೋಜನೆಗಳಿಗೆ ಮಾತ್ರ ಗಡಿಯಿಲ್ಲ. ಡಾ. ಶಿಪ್ರಾ ಅವರ ಈವೊಂದು ಪ್ರಯತ್ನ ಸಮಾಜಕ್ಕೆ ಕನ್ನಡಿಯಾಗಿದೆ.

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...