ಬೈಕ್ ನಲ್ಲಿ ಹೋಗುವಾಗ ಹೆಲ್ಮೆಟ್ ಧರಿಸೋದೆ ತಲೆನೋವು..! ಹೆಚ್ಚು ಹೆಲ್ಮೆಟ್ ಧರಿಸೋದ್ರಿಂದ ಕೂದಲು ಉದುರುತ್ತೆ ಅನ್ನೋ ಟೆಂಕ್ಷನ್. ಹಾಗಂತ ಹೆಲ್ಮೆಟ್ ಹಾಕದೇ ಇರೋಕು ಆಗಲ್ಲ. ನೀವು ಹೆಲ್ಮೆಟ್ನಿಂದ ಕೂದಲು ಉದುರೋದನ್ನು ತಪ್ಪಿಸಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಅನುಸರಿಸಿ.
ಹೆಲ್ಮೆಟ್ ಹಾಕೋದಕ್ಕಿಂತ ಮೊದಲು ಕೂದಲು ಒಣಗಿರಬೇಕು. ಕೂದಲು ಒದ್ದೆಯಾಗಿದ್ದರೆ ಹೆಲ್ಮೆಟ್ ಹಾಕಬಾರದು.
ಹೆಲ್ಮೆಟ್ ಹಾಕೋ ಮುನ್ನ ತಲೆಗೆ ಕಾಟನ್ ಬಟ್ಟೆ ಅಥವಾ ಸ್ಕಾರ್ಫ್ ಕಟ್ಟಿಕೊಳ್ಳಿ. ಸ್ಕಾರ್ಫ್ ಸ್ವಚ್ಚವಾಗಿರಲಿ.
ನಿಮ್ಮ ತಲೆಗೆ ಫಿಕ್ಸ್ ಆಗುವಂತಹ ಹೆಲ್ಮೆಟ್ ತೆಗೆದುಕೊಳ್ಳಿ. ತಲೆ ಅಲ್ಲಾಡಿದಾಗಲೆಲ್ಲಾ ಹೆಲ್ಮೆಟ್ ಅಲ್ಲಾಡೋದು ಬೇಡ.
ಲಾಂಗ್ ಡ್ರೈ ಹೋಗುವಾಗ ಮಾರ್ಗ ಮಧ್ಯೆ ಆಗಾಗಾ ಹೆಲ್ಮೆಟ್ ತೆಗೆಯಿರಿ.