ಹೆಸರುಕಾಳು ಎಲ್ಲರಿಗೂ ಒಳ್ಳೆಯದೇ ಅಲ್ಲ! ಯಾರೆಲ್ಲಾ ತಿನ್ನಬಾರದು ಗೊತ್ತಾ..?
ನಮ್ಮ ಆರೋಗ್ಯಕ್ಕಾಗಿ ಧಾನ್ಯ, ತರಕಾರಿ, ಕಾಳುಗಳು ಮುಖ್ಯವಾದವು. ವಿಶೇಷವಾಗಿ ಹೆಸರುಕಾಳು ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿದೆ. ಆದರೆ ಇದನ್ನು ಎಲ್ಲರೂ ಸಮಾನವಾಗಿ ತಿನ್ನುವುದು ಸೂಕ್ತವಲ್ಲ. ಕೆಲವರಿಗೆ ಇದು ದೇಹಕ್ಕೆ ಹಾನಿಕಾರಕವಾಗಬಹುದು.
ಯಾರೆಲ್ಲಾ ಹೆಸರುಕಾಳು ತಿನ್ನಬಾರದು?
ಹೆಚ್ಚು ಸೇವಿಸಿದರೆ ಅನಿಲ, ಹೊಟ್ಟೆ ಉಬ್ಬುವಿಕೆ, ಅತಿಸಾರ ಉಂಟಾಗಬಹುದು.
ಯೂರಿಕ್ ಆಮ್ಲ ಹೆಚ್ಚು ಇರುವವರು ಹೆಸರುಕಾಳು ಸೇವಿಸಬಾರದು, ಏಕೆಂದರೆ ಇದರಲ್ಲಿ ಹೆಚ್ಚು ಪ್ರೋಟೀನ್ ಇದೆ.
ಆಗಾಗ್ಗೆ ಕಡಿಮೆ ರಕ್ತ ಸಕ್ಕರೆ (Low Sugar) ಅನುಭವಿಸುವವರು ತಿನ್ನಬಾರದು.
ಮೂತ್ರಪಿಂಡದ ಕಲ್ಲು ಇರುವವರಿಗೆ ಹೆಸರುಕಾಳಿನಲ್ಲಿರುವ ಆಕ್ಸಲೇಟ್ ಹಾನಿ ಮಾಡಬಹುದು.
ಸಂಧಿವಾತ, ಆಸ್ತಮಾ, ಬ್ರಾಂಕೈಟಿಸ್, ಸೈನಸಿಟಿಸ್, ಸ್ಪಾಂಡಿಲೈಟಿಸ್ ಇರುವವರು ಕೂಡ ತಿನ್ನಬಾರದು. ಹೆಸರುಕಾಳು ದೇಹದಲ್ಲಿ ಕಫವನ್ನು ಹೆಚ್ಚಿಸಿ ಸಮಸ್ಯೆಯನ್ನು ತೀವ್ರಗೊಳಿಸುತ್ತದೆ.
ಹೆಸರುಕಾಳು ಸಾಮಾನ್ಯವಾಗಿ ಆರೋಗ್ಯಕರವಾದರೂ, ಮೇಲಿನ ಸಮಸ್ಯೆಗಳಿರುವವರು ಮಾತ್ರ ಅಳತೆ ಮೀರಿ ಸೇವನೆ ಮಾಡಬಾರದು. ವೈದ್ಯರ ಸಲಹೆಯಂತೆ ನಿಯಂತ್ರಿತ ಪ್ರಮಾಣದಲ್ಲಿ ತಿನ್ನುವುದು ಉತ್ತಮ.