ಹೈಕೋರ್ಟ್ ಆದೇಶಕ್ಕಿಲ್ವಾ ಕಿಮ್ಮತ್ತು ?

Date:

ಬೆಂಗಳೂರು:- ಹೈಕೋರ್ಟ್ ಆದೇಶವಿದ ಹೊರತಾಗಿಯೂ ಬೆಂಗಳೂರಿನ ಬೀದಿಗಳಲ್ಲಿ ಫ್ಲೆಕ್ಸ್, ಬ್ಯಾನರ್‌ ಅಬ್ಬರ ನಿಂತಿಲ್ಲ. ಫ್ಲೆಕ್ಸ್, ಬ್ಯಾನರ್‌ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೈಕೋರ್ಟ್ ಆದೇಶ ಇದ್ದರೂ ಇವೆಲ್ಲಕ್ಕೂ ಡೋಂಡ್ ಕೇರ್ ಎಂಬ ರೀತಿಯಲ್ಲಿ ರಾಜಕಾರಣಿಗಳು ಹಾಗೂ ಅವರ ಅಭಿಮಾನಿಗಳು ವರ್ತಿಸುತ್ತಿದ್ದಾರೆ.

ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ಮನೆ ಮುಂದೆಯೇ ಹುಟ್ಟಹಬ್ಬದ ಫ್ಲೆಕ್ಸ್, ಬ್ಯಾನರ್ ರಾರಾಜಿಸುತ್ತಿದೆ.

ಗೃಹ ಸಚಿವ ಪರಮೇಶ್ವರ್ ಅವರ ಬರ್ತ್ ಡೇ ಹಿನ್ನೆಲೆ ಸದಾಶಿವನಗರದ ನಿವಾಸದ ಸುತ್ತಮುತ್ತ ಫ್ಲೆಕ್ಸ, ಬ್ಯಾನರ್ ಹಾಕಲಾಗಿದೆ. ಅತ್ತ ಫ್ಲೆಕ್ಸ್ ಕಂಟ್ರೋಲ್ ಗೆ ರಾತ್ರಿ ವೇಳೆ ಗಸ್ತು ತಿರುಗಲು ಪಾಲಿಕೆ ಜೊತೆ ಖಾಕಿ ಪಡೆ ಕೈ ಜೋಡಿಸಿತ್ತು. ಆದರೆ ಇದೀಗ ಅದೇ ಪೊಲೀಸ್ ಇಲಾಖೆ ನಿರ್ವಹಿಸುವ ಗೃಹ ಸಚಿವರಿಂದಲೇ ರೂಲ್ಸ್ ಬ್ರೇಕ್ ಆಗಿದೆ. ರಾಜಕಾರಣಿಗಳಿಗೆ ಒಂದು ನ್ಯಾಯ, ಜನರಿಗೆ ಮತ್ತೊಂದು ನ್ಯಾಯನಾ? ಎಂದು ಜನಪ್ರತಿನಿಧಿಗಳ ನಡೆಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

ಹಲವು ಕ್ರಮಗಳನ್ನು ಕೈಗೊಂಡ ಬಿಬಿಎಂಪಿಗೆ ರಾತ್ರಿ ವೇಳೆ ರಸ್ತೆಗಳಲ್ಲಿ ಉದ್ಭವವಾಗೊ ಅನಧಿಕೃತ ಫ್ಲೆಕ್ಸ್ ತಲೆ ಬಿಸಿ ತಂದಿತ್ತು. ಮೊದಲಿನಿಂದಲೂ ಈ ರೀತಿ ಬ್ಯಾನರ್ ಹಾಕುವವರ ವಿರುದ್ಧ ಕ್ರಮಕೈಗೊಂಡರು, ಮತ್ತೆ ಮತ್ತೆ ಈ ರೀತಿ ಚಟುವಟಿಕೆ ಹೆಚ್ಚಾಗಿದ್ದು, ಹೈ ಕೊರ್ಟ್ ನ ನಿರ್ದೇಶನದ ಮೇರೆಗೆ ಬಿಬಿಎಂಪಿ, ಪೊಲೀಸರ ಜೊತೆ ಜಂಟಿ ಕಾರ್ಯಾಚರಣೆಗೆ ಮುಂದಾಗಿತ್ತು. ಇತ್ತೀಚೆಗೆ ಬೆಂಗಳೂರು ಪೊಲೀಸರ ಜೊತೆ ಮಹತ್ವದ ಸಭೆ ನಡೆಸಿ, ಈಗಾಗಲೇ ಹಾಕಿರುವ ಅನಧಿಕೃತ ಬ್ಯಾನರ್ ಹಾಗೂ ಅನಧಿಕೃತ ಫ್ಲೆಕ್ಸ್ ಗಳ ವಿರುದ್ಧ ಹಾಗೂ ಅನಧಿಕೃತ ಫ್ಲೆಕ್ಸ್ ಗಳ ಹಾಕುವ ಸಂದರ್ಭದಲ್ಲಿ ಕೈಗೊಳ್ಳಬೇಕಾದ ನಿರ್ಧಾರ ಹಾಗೂ ಕ್ರಮಗಳ ಬಗ್ಗೆ ಚರ್ಚೆ ಮಾಡಲಾಗಿತ್ತು.

ಸಭೆಯಲ್ಲಿ ಮೊದಲ ಹಂತದ ಕ್ರಮವಾಗಿ ಪೊಲೀಸರಿಗೆ ಬಿಬಿಎಂಪಿಯಿಂದ ನಿರ್ಧರಿತವಾದ ನಂಬರ್ ನೀಡಿದ್ದು, ರಾತ್ರಿ ವೇಳೆ ಪೊಲೀಸ್ ಗಸ್ತು ಸಂದರ್ಭದಲ್ಲಿ ಬ್ಯಾನರ್, ಫ್ಲೆಕ್ಸ್ ಗಳು ಹಾಕುವುದು ಕಂಡು ಬಂದಲ್ಲಿ ಕೂಡಲೇ ನಿರ್ಧರಿತ ನಂಬರ್ ಗೆ ಮಾಹಿತಿ ನೀಡುವುದು. ಬಳಿಕ ಅದು ಅಧಿಕೃತವೋ ಅಥವ ಅನಧಿಕೃತವೋ ಎಂಬ ಸಂಗತಿ ಪತ್ತೆ ಮಾಡುವುದು. ನಂತರ ಅನಧಿಕೃತವಾಗಿದ್ದಲ್ಲಿ ಬಿಬಿಎಂಪಿಯಿಂದ ದೂರು ಪಡೆದು ಕ್ರಮ ಕೈಗೊಳ್ಳುವ ನಿರ್ಧಾರ ಮಾಡಲಾಯ್ತು. ಎರಡನೇ ಹಂತದ ಕ್ರಮವಾಗಿ ಈಗಾಗಲೇ ಅಳವಡಿಸಿರುವ ಅನಧಿಕೃತ ಫ್ಲೆಕ್ಸ್ ಹಾಗೂ ಬ್ಯಾನರ್ ಗಳ ಕೂಡಲೇ ತೆರವು ಮಾಡುವುದು ಹಾಗೂ ಸಂಬಂಧ ಪಟ್ಟವರ ವಿರುದ್ಧ ಕೈಗೊಳ್ಳಬಹುದಾದ ಕಠಿಣಾತಿ ಕಠಿಣ ಕಾನೂನಿನ ಕ್ರಮಗಳ ಬಗ್ಗೆ ಯಾವ ರೀತಿ ಹೆಜ್ಜೆ ಇಡುವುದು ಎಂಬ ವಿಚಾರವಾಗಿ ಚರ್ಚೆ ನಡೆಸಲಾಯ್ತು. ಇನ್ನು ಈ ಸಭೆಯಲ್ಲೇ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಅನಧಿಕೃತ ಫ್ಲೆಕ್ಸ್ ಗಳ ತೆರುವಿನ ಬಗ್ಗೆ ಸೂಚನೆ ನೀಡಿದ್ದು, ಬೇಜವಾಬ್ದಾರಿ ತೋರಿದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳೊದಾಗಿ ಎಚ್ಚರಿಕೆ ನೀಡಲಾಗಿತ್ತು. ಆದರೆ ಈಗ ರೂಲ್ಸ್ ಮಾಡಿದವರಿಂದಲೇ ರೂಲ್ಸ್ ಬ್ರೇಕ್ ಆಗಿದ್ದು ಆಕ್ರೋಶ ವ್ಯಕ್ತವಾಗಿದೆ.

Share post:

Subscribe

spot_imgspot_img

Popular

More like this
Related

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ!

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ! ಬೆಂಗಳೂರು: ಪ್ರಸಿದ್ಧ ಕನ್ನಡ...

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ!

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ! ಬೆಂಗಳೂರು:- ಬೆಂಗಳೂರಿಗರಿಗಾಗಿ ನಿರ್ಮಿಸಿದ...

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಬೆಂಗಳೂರು:...

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ?

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಸಾಸಿವೆ ಎಂದಾಕ್ಷಣ ಮನಸ್ಸಿನಲ್ಲಿ...