ಕನ್ನಡದ ಮೂಲಕ ಸಿನಿ ಪಯಣ ಆರಂಭಿಸಿದ ನಟಿ ರಶ್ಮಿಕಾ ಮಂದಣ್ಣ ಇದೀಗ ಟಾಲಿವುಡ್ ಕಾಲಿವುಡ್ ಮತ್ತು ಬಾಲಿವುಡ್ ನಲ್ಲಿಯೂ ಬಿಜಿಯಾಗಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುತ್ತಿರುವ ರಶ್ಮಿಕಾ ಮಂದಣ್ಣ ಅವರು ಇತ್ತೀಚಿಗಷ್ಟೇ ನ್ಯಾಷನಲ್ ಕ್ರಷ್ ಎಂಬ ಬಿರುದನ್ನು ಪಡೆದುಕೊಂಡು ಸುದ್ದಿಯಲ್ಲಿದ್ದರು. ಇದೀಗ ದೊಡ್ಡದೊಂದು ಕಾರು ಖರೀದಿಸುವ ಮೂಲಕ ರಶ್ಮಿಕಾ ಮಂದಣ್ಣ ಮತ್ತೆ ಸುದ್ದಿಯಾಗಿದ್ದಾರೆ.
ಹೊಸದೊಂದು ಕಾರು ಖರೀದಿಸಿರುವ ವಿಷಯವನ್ನು ಸ್ವತಃ ಆ ರಶ್ಮಿಕಾ ಮಂದಣ್ಣ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ ರಶ್ಮಿಕಾ ಮಂದಣ್ಣ ಅವರು ಖರೀದಿಸಿರುವ ಕಾರಿನ ಹೆಸರು ರೇಂಜ್ ರೋವರ್ ಸ್ಪೋರ್ಟ್.. ಈ ಕಾರಿನ ಬೆಲೆ 85 ಲಕ್ಷದಿಂದ 1 ಕೋಟಿ ರೂಪಾಯಿ.. ಲಕ್ಷಾಂತರ ರೂಪಾಯಿಯ ಕಾರನ್ನು ತೆಗೆದುಕೊಂಡ ನಂತರ ವಿಷಯವನ್ನು ರಶ್ಮಿಕಾ ಮಂದಣ್ಣ ಅವರು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.