ಹೊಸ ವರ್ಷದಂದು ಭಾರತದಲ್ಲಿ ಹುಟ್ಟಿದ ಮಕ್ಕಳ ಸಂಖ್ಯೆ ಬರೋಬ್ಬರಿ 69,944… ವಿಶ್ವ ದಾಖಲೆ..!!
ಹೊಸ ವರ್ಷದಂದೆ ಮಗು ಹುಟ್ಟಬೇಕು ಎಂಬ ಹಂಬಲ ಹಲವರಲ್ಲಿ ಇರುತ್ತೆ.. ಹೀಗಾಗೆ ಈ ದಿನದಂದೆ ನಮ್ಮ ಕುಡಿ ಜನನವಾಗಲಿ ಅಂತ ಆಸೆ ಪಡುವವರಿಗೇನು ಕಡಿಮೆ ಇಲ್ಲ.. ಇನ್ನು ಭಾರತದಲ್ಲಿ ಹೊಸ ವರ್ಷದ ದಿನವೇ ಬರೋಬ್ಬರಿ 69944 ಮಕ್ಕಳ ಜನನವಾಗಿದೆ.. ಈ ವಿಚಾರವನ್ನ ಯುನಿಸೆಫ್ ಸ್ಪಷ್ಟಪಡಿಸಿದೆ..
ಇಡೀ ವಿಶ್ವದಲ್ಲಿ ಹೊಸ ವರ್ಷದಂದು ಒಟ್ಟು 3,95,072 ಮಕ್ಕಳ ಜನನವಾಗಿದೆ.. ಅದರಲ್ಲು ಜನಸಂಖ್ಯೆಯಲ್ಲಿ ನಂ.1 ಸ್ಥಾನದಲ್ಲಿರುವ ಜಪಾನ್ ನಲ್ಲಿ 44,940, ನೈಜೀರಿಯಾದಲ್ಲಿ 25,685 ಮಕ್ಕಳು ಜನಿಸಿವೆ.. ಸದ್ಯ ವಿಶ್ವದಲ್ಲಿ ಹೊಸ ವರ್ಷದಂದು ಅಧಿಕ ಶಿಶುಗಳ ಜನನದಲ್ಲಿ ಭಾರತ ಮುಂದೆ ನಿಂತಿದೆ.. ಈ ಮೂಲಕ ವರ್ಷದ ಮೊದಲ ದಿನವೇ ಮಕ್ಕಳ ಜನನ ವಿಚಾರದಲ್ಲಿ ದಾಖಲೆ ಬರೆದಿದೆ..