ಯೋಗ್ಯತೆ ಇದ್ದವರಿಗೆ ಯೋಗ ಬಂದೇ ಬರುತ್ತೆ..! ಆದ್ರೆ ಅದೃಷ್ಟವೂ ಬೇಕಾಗುತ್ತೆ..! ಲೈಫ್ ನಲ್ಲಿ ಒಂದ್ಸಲ ಅದೃಷ್ಟ ದೇವತೆ ಬರ್ತಾಳೆ..! ಯಾವಾಗ ಅಂತ ಗೊತ್ತಾಗಲ್ಲ..! ಆ ಅದೃಷ್ಟದೇವತೆ ಬಂದು ಬಾಗಿಲು ತಟ್ಟಿದಾಗ ತಡಮಾಡದೇ ಬಾಗಿಲು ತೆಗೆದು ಬಿಡಿ..! ಆದ್ರೆ ಈ ಹುಡುಗನಷ್ಟು ಅದೃಷ್ಟ ಯಾರಿಗೂ ಇಲ್ಲ ಬಿಡ್ರೀ..! ಯಾವ್ ಹುಡುಗ ಅಂತಿರಾ..?! ಆತ ಈಗ ನೀವು ಓದಲಿರೋ ಸ್ಟೋರಿಯ ನಾಯಕ…!
ಈ ರಿಯಲ್ ಸ್ಟೋರಿಯ ನಾಯಕನ ಹೆಸರು ಚೇತನ್ ಕಕ್ಕರ್. ದೆಹಲಿ ಮೂಲದ ಇವರು ಡೆಲ್ಲಿ ಟೆಕ್ನಾಲಜಿ ಯೂನಿವರ್ಸಿಟಿ( ಡಿಟಿಯು)ಯ ವಿದ್ಯಾರ್ಥಿ. ಇವರ ತಂದೆ ಸುಭಾಷ್ ಕಕ್ಕರ್, ದೆಹಲಿ ವಿಶ್ವವಿದ್ಯಾಲಯದಲ್ಲಿ ಮ್ಯಾನೇಜ್ ಮೆಂಟ್ ಸ್ಟಡೀಸ್ ವಿಷಯದ ಪ್ರಾಧ್ಯಾಪಕರು. ತಾಯಿ ರೀಟಾ ಕಕ್ಕರ್ ರಸಾಯನ ಶಾಸ್ತ್ರದ ಪ್ರಾಧ್ಯಾಪಕಿ. ಇವರಿಗೆ ತಮ್ಮ ಮಗ ತುಂಬಾ ಎತ್ತರಕ್ಕೆ ಬೆಳೆಯುತ್ತಾನೆಂಬುದು ಕನ್ಫರ್ಮ್ ಆಗಿದೆ..!
ಕಾರಣ, ಈಗಿನ್ನೂ ವಿದ್ಯಾರ್ಥಿಯಾಗಿರೋ ಚೇತನ್ ಕಕ್ಕರ್ ಗೆ ಅತೀ ಹೆಚ್ಚು ಸಂಬಳದ ಉದ್ಯೋಗವೊಂದು ಹುಡುಕಿಕೊಂಡು ಬಂದಿದೆ..! ಅದೂ ಅಂತಿಂತ ಕಂಪನಿಯಿಂದಲ್ಲ.. ಗೂಗಲ್ ನಿಂದ..! ಅಂತರ್ಜಾಲ ಲೋಕದ ದೈತ್ಯ ಗೂಗಲ್ 12578950.00 ವಾರ್ಷಿಕ ವೇತನ ಕೊಡುವುದಾಗಿ ಕೆಲಸಕ್ಕೆ ಆಫರ್ ಮಾಡಿದೆ..! ಅಂದರೆ ಇವರ ತಿಂಗಳ ಸಂಬಳ 1048246 ರೂಪಾಯಿಗಳು..!
ಒಬ್ಬ ವಿದ್ಯಾರ್ಥಿಗೆ ಇಷ್ಟೊಂದು ದೊಡ್ಡ ಮೊತ್ತದ ಆರಂಭಿಕ ಸಂಬಳವನ್ನು ನೀಡ್ತೀವಿ, ಕೆಲಸಕ್ಕೆ ಬರ್ತೀರಾ ಅಂತ ಆಫರ್ ನೀಡಿರೋ ಗೂಗಲ್ ಉದ್ಯೋಗ ಪ್ರಸ್ತಾವದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿದೆ..! ಗೂಗಲ್ ದಾಖಲೆಗಿಂತ ಈ ಚೇತನ್ ಕಕ್ಕರ್ ಅದೃಷ್ಟ ನೋಡ್ರೀ..! ಈ ಕುರಿತು ಮಾತನಾಡಿರೋ ಚೇತನ್ ಈ ನಮ್ಮ ಡೆಲ್ಲಿ ಟೆಕ್ನಾಲಜಿ ಯೂನಿವರ್ಸಿಟಿ ತನ್ನ ಭವಿಷ್ಯಕ್ಕೆ ದೊಡ್ಡ ಮಟ್ಟದ ಬದಲಾವಣೆಯನ್ನು ತಂದಿದೆ ಅಂತ ತುಂಬಾ ಖುಷಿಯಿಂದ ಹೇಳಿಕೊಳ್ತಾ ಇದ್ದಾರೆ..!
ಅದೃಷ್ಟ ದೇವತೆ ತಾನಾಗಿಯೇ ಬಂದು ಇಂಥಾ ಅವಕಾಶವನ್ನು ಕೊಟ್ಟಿರುವಾಗ ಯಾರು ತಾನೆ ಬೇಡ ಅಂತಾರೆ ಹೇಳಿ..?! ಚೇತನ್ ಈಗ ಅಂತಿಮ ವರ್ಷದ ಪದವಿಯಲ್ಲಿದ್ದು, 2016ರಲ್ಲಿ ಪದವಿ ಮುಗಿದ ಕೂಡಲೇ ಕ್ಯಾಲಿಫೋರ್ನಿಯಾದಲ್ಲಿರೋ ಗೂಗಲ್ ಕಛೇರಿಯಲ್ಲಿ ಸೇವೆ ಸಲ್ಲಿಸಲಿದ್ದಾರೆ..!
ಡಿಟಿಯುನ ವಿದ್ಯಾರ್ಥಿಯೊಬ್ಬರಿಗೆ ಈ ಹಿಂದೆ 93 ಲಕ್ಷ ವಾರ್ಷಿಕ ಸಂಬಳದ ಕೆಲಸಕ್ಕೆ ಆಫರ್ ಬಂದಿತ್ತು..! ಇದೇ ಇಲ್ಲಿತನಕ ಉದ್ಯೋಗ ಪ್ರಸ್ತಾವದ ದಾಖಲೆಯಾಗಿತ್ತು..! ಈಗ ಗೂಗಲ್ ಚೇತನ್ರಿಗೆ 12578950.00 ರೂ ವಾರ್ಷಿಕ ಸಂಬಳದ ಆಫರ್ ನೀಡಿರೋದು ದಾಖಲೆಯಾಗಿದೆ..!
ಚೇತನ್ ಕಕ್ಕರ್ ಅಷ್ಟೊಂದು ಸಂಬಳ ಸಿಗುತ್ತಲ್ಲಾ ಅಂತ ಖುಷಿ ಪಡೋಣ..! ಆತ ನಮ್ಮ ಹುಡುಗ, ನಮ್ಮವ, ಭಾರತೀಯ..! ಅವರಿಗೆ ಅದೃಷ್ಟವೂ ಇದೆ.. ಅದಕ್ಕಿಂತಲೂ ಹೆಚ್ಚಾಗಿ ಯೋಗ್ಯತೆ ಇದೆ..! ಯೋಗ್ಯತೆ ಇಲ್ಲದವರನ್ನು ಅಷ್ಟೊಂದು ಸಂಬಳ ನೀಡಿ ಗೂಗಲ್ ನವರು ಕೆಲಸಕ್ಕೆ ಸೇರಿಸಿಕೊಳ್ಳುತ್ತಾರ..?! ಎನಿವೇ, ಚೇತನ್ ಕಕ್ಕರ್ ನಿಮ್ಮ ಭವಿಷ್ಯ ಉಜ್ವಲವಾಗಿರಲಿ.. ಅಂತ ಹರಸುತ್ತೇವೆ.
- ಶಶಿಧರ ಡಿ ಎಸ್ ದೋಣಿಹಕ್ಲು
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!
ಕನ್ನಡಿಗರು ನೋಡಲೇಬೇಕಾದ ಕಿರುಚಿತ್ರ `ಪ್ರೆಸೆಂಟ್ ಸಾರ್’ ಕನ್ನಡದ ಶಾಲೆಗಳ ಪರಿಸ್ಥಿತಿ ಏನಾಗಿದೆ ಅಂತ ನೀವೇ ನೋಡಿ..!
ನಾನು ಹೆಮ್ಮೆಯ ಕನ್ನಡಿಗ ತಂಡ ನಮ್ಮ ಮೆಟ್ರೋಗೆ ಶಂಕರ್ ನಾಗ್ ರವರ ಹೆಸರಿಡಬೇಕೆಂದು ಪಿಟಿಷನ್ ಶುರು ಮಾಡಿದೆ..!
ಈ ಗ್ರಾಮ ಇಡೀ ಜಗತ್ತಿಗೇ ಮಾದರಿ..! ಹೆಣ್ಣನ್ನು ದ್ವೇಷಿಸುವವರು ಇದನ್ನು ಓದಲೇಬೇಕು..!
ವರುಣರಾಯ ನಿಲ್ಲಿಸು ನಿನ್ನ ಆರ್ಭಟವ..! ತಮಿಳುನಾಡಿನ ಪರಿಸ್ಥಿತಿ ಹೇಗಿದೆ ಅಂತ ನೀವೆ ನೋಡಿ..!
ಅವನಿಗೆ ಉಗ್ರನೆಂಬ ಹಣೆಪಟ್ಟಿ ಕಟ್ಟುತ್ತಿದ್ದರು..! ಟೈಮ್ ಸರಿ ಇಲ್ಲ ಅಂದ್ರೆ ಅಷ್ಟೇ….