ಕಾಮುಕನೊರ್ವ ತನ್ನ ಮಕ್ಕಳ ಎದುರೇ ಪಕ್ಕದ ಮನೆಯ 1 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿರೋ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.
1 ವರ್ಷದ ಬಾಲಕಿ ತನ್ನ ಪಕ್ಕದ ಮನೆಗೆ ಆಟ ಆಡೋಕಂತ ಹೋಗಿದ್ದಾಳೆ.. ! ಆ ಮನೆಯ 4 ವರ್ಷದ ಬಾಲಕ ಹಾಗೂ 2 ವರ್ಷದ ಬಾಲಕಿ ಜೊತೆ ಆಕೆ ಆಡುತ್ತಿದ್ದಳು..! ಈ ಇಬ್ಬರು ಮಕ್ಕಳ ತಾಯಿ ಟೆರಸ್‍ನಲ್ಲಿ ಏನೋ ಕೆಲಸ ಮಾಡ್ತಿದ್ರು..! ಈ ವೇಳೆ ತಂದೆ ಎನಿಸಿಕೊಂಡ ಕಾಮುಕ ಇಬ್ಬರು ಮಕ್ಕಳ ಎದುರೇ ಆಡಲೆಂದು ಬಂದ 1 ವರ್ಷದ ಬಾಲಕಿಯನ್ನು ರೇಪ್ ಮಾಡಿದ್ದಾನೆ ಎನ್ನಲಾಗಿದೆ..!
ಬಾಲಕಿ ಮನೆಗೆ ವಾಪಾಸ್ಸಾದಾಗ ಆಕೆಯ ಗುಪ್ತಾಂಗದಲ್ಲಿ ರಕ್ತಸ್ರಾವವಾಗ್ತಿರೋದನ್ನು ತಾಯಿ ಗಮನಿಸಿದ್ದಾರೆ. ಆತಂಕಕ್ಕೆ ಒಳಗಾಗಿ ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಗ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರೋದು ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಂತ್ರಸ್ತ ಬಾಲಕಿ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದಾಳೆ..!