ರಾಜೀನಾಮೆ ನೀಡಿ ಮುಂಬೈನಲ್ಲಿ ತಂಗಿರುವ ಶಾಸಕರಿಗೆ ಸಚಿವ ಡಿ.ಕೆ. ಶಿವಕುಮಾರ್ ಕೊನೆಯ ಎಚ್ಚರಿಕೆ ಸಂದೇಶ ನೀಡಿದ್ದಾರೆ.ಮಂಗಳವಾರ ಬೆಳಗ್ಗೆ 11 ಗಂಟೆಗೆ ವಿಧಾನಸಭೆಯ ಅಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಎದುರು ರಾಜೀನಾಮೆ ನೀಡಿರುವ ಶಾಸಕರು ಹಾಜರಾಗಿ ಸ್ಪಷ್ಟನೆ ನೀಡಬೇಕು. ಇಲ್ಲವಾದರೆ ನಿಮ್ಮನ್ನು ಅನರ್ಹಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಎತ್ತಿರುವ ಕ್ರಿಯಾಲೋಪದ ಕುರಿತು ವಿಧಾನಸಭೆ ಸ್ಪೀಕರ್ ಸೋಮವಾರ ರೂಲಿಂಗ್ ನೀಡಿದ್ದು, ರಾಜೀನಾಮೆ ಅಂಗೀಕಾರವಾಗದ ಕಾರಣ ವಿಪ್ ಜಾರಿ ಮಾಡಬಹುದಾಗಿದೆ. ಹಾಗಾಗಿ ಅನರ್ಹಗೊಳಿಸುವ ಸಾಧ್ಯತೆ ಇರುವುದರಿಂದ 11 ಗಂಟೆ ಒಳಗೆ ರಾಜೀನಾಮೆ ನೀಡಿರುವ ಶಾಸಕರು ಹಾಜರಾಗಿ ಸ್ಪಷ್ಟನೆ ನೀಡಬೇಕು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬಿಜೆಪಿಗೆ ಅನುಕೂಲಮಾಡಿಕೊಡಲು ನೀವು ರಾಜೀನಾಮೆ ನೀಡಿದ್ದೀರಿ. ಅನರ್ಹವಾದರೆ ಏನೂ ಆಗಲ್ಲ ಎಂದು ಅವರು ನಿಮಗೆ ನಂಬಿಸುತ್ತಿದ್ದಾರೆ. 6 ವರ್ಷ ನೀವು ಚುನಾವಣೆಗೆ ಸ್ಪರ್ಧಿಸುವಂತಿಲ್ಲ. 11 ಗಂಟೆ ಒಳಗೆ ಬನ್ನಿ ಎಂದು ಹೇಳಿದ್ದಾರೆ.