ಹೊಸದೊಂದು ದಾಖಲೆಗೆ ನಾಳೆ ಕನ್ನಡ ಚಿತ್ರರಂಗ ಸಾಕ್ಷಿಯಾಗ್ತಿದೆ.. ಕಾರಣವೇನು ಗೊತ್ತಾ..?
ಒಂದೊಂದು ಬಾರಿ ವಾರಕ್ಕೆ ಒಂದೇ ಒಂದು ಕನ್ನಡ ಸಿನಿಮಾ ರಿಲೀಸ್ ಆಗದ ಉದಾಹರಣೆ ಇದೆ.. ಆದರೆ ಮತ್ತೆ ಕೆಲವು ಬಾರಿ 7 ಸಿನಿಮಾಗಳು ತೆರೆಗೆ ಬಂದು ಹೋಗಿದೆ.. ಈ ನಡುವೆ ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗದ ಇಷ್ಟು ವರ್ಷಗಳ ಇತಿಹಾದಲ್ಲಿ ಒಟ್ಟಿಗೆ 11 ಚಿತ್ರಗಳು ತೆರೆ ಕಾಣ್ತಿವೆ.. ಹೌದು, ನಿಮಗೆ ನಂಬೋಕೆ ಸಾಧ್ಯವಿಲ್ಲವಾದ್ರು ಇದನ್ನ ನೀವು ನಂಬ್ಲೇಬೇಕು…
ಥಿಯೇಟರ್ ಸಮಸ್ಯೆಯನ್ನ ಎದುರಿಸುವ ಕನ್ನಡ ಚಿತ್ರರಂಗ ಈ ಬಾರಿ 11 ಸಿನಿಮಾಗಳಿಗೂ ಸ್ಥಾನವನ್ನ ಕಲ್ಪಿಸಿದೆ.. ನಾಳೆ ಬಿಡುಗಡೆಯಾಗ್ತಿರೋ ಸಿನಿಮಾಗಳೆಂದರೆ, ತಾರಕಾಸುರ, ಫ್ರೆಂಡ್ಲಿ ಬೇಬಿ, ನೀವು ಕರೆ ಮಾಡಿದ ಚಂದಾದರರು, ಅಜ್ಜ, ಬೀದರ್ ಕಿಂಗ್, ಒಂದು ಸಣ್ಣ ಬ್ರೇಕ್ ನಂತರ, ಕರ್ಷಣ್, ಅಪಲ್ ಕೇಕ್, ಕರ್ಷಣಮ್, ಕಿಸ್ಮತ್ ಹಾಗೆ ಲೂಟಿ.. ಇದರಲ್ಲಿ ಸ್ಟಾರ್ ನಟನ ಸಿನಿಮಾವಾಗಿ ವಿಜಯ್ ರಾಘವೇಂದ್ರ ನಟನೆಯ, ನಿರ್ದೇಶನ ಸಿನಿಮಾ ಕಿಸ್ಮತ್ ಇದೆ..
ಇಷ್ಟೊಂದು ಸಿನಿಮಾ ಒಟ್ಟೊಟ್ಟಿಗೆ ತೆರೆಗೆ ಬರ್ತಿದೆ.. ಪ್ರೇಕ್ಷಕರಿಗೆ ಆಯ್ಕೆ ಹೆಚ್ಚಾಗಿದೆ.. ಈ ಕನ್ನಡ ಸಿನಿಮಾಗಳನ್ನ ನೋಡಿ, ಅವರನ್ನ ಬೆಳೆಸಬೇಕಾದ, ಉಳಿಸದ ಬೇಕಾದ ಕೆಲಸವನ್ನ ನೀವು ಮಾಡಬೇಕಿದೆ.. ಈ ವೀಕ್ ಎಂಡ್ ಗೆ ಈ ಚಿತ್ರಗಳಲ್ಲಿ ನಿಮ್ಮಗ ಇಷ್ಟವಾದದ್ದನ್ನ ಆಯ್ಕೆ ಮಾಡಿಕೊಂಡಿ ನೋಡಿ…