14 ವರ್ಷಗಳ ಬಳಿಕ ದಕ್ಷಿಣ ಭಾರತ ಚಿತ್ರರಂಗಕ್ಕೆ ಕನ್ನಡತಿ ದೀಪಿಕಾ ಪಡುಕೋಣೆ ..?

Date:

14 ವರ್ಷಗಳ ಬಳಿಕ ದಕ್ಷಿಣ ಭಾರತ ಚಿತ್ರರಂಗಕ್ಕೆ ಕನ್ನಡತಿ ದೀಪಿಕಾ ಪಡುಕೋಣೆ ..?

ದೀಪಿಕಾ ಪಡುಕೋಣೆ … ಇವತ್ತು ಹಿಂದಿ ಚಿತ್ರರಂಗದ ಬಹುದೊಡ್ಡ ಹೆಸರು .‌ ಬಾಲಿವುಡ್ ನ ಬಹು ಬೇಡಿಕೆಯ ನಟಿ . ಸಾಲು ಸಾಲು ಸಿನಿಮಾಗಳು ದೀಪಿಕಾ ಬತ್ತಳಿಕೆಯಲ್ಲಿವೆ . ಹಾಲಿವುಡ್ ಎಂಟ್ರಿ ಕೂಡ ಆಗಿದೆ .

ನಿಮಗೆ ಗೊತ್ತೇ ಇದೆ .. ದೀಪಿಕಾ ಪಡುಕೋಣೆ ಅಪ್ಪಟ ಕನ್ನಡತಿ . ಕರಾವಳಿ ಚೆಲುವೆ . ಹೆಮ್ಮೆಯ ಕನ್ನಡತಿ ಹಿಂದಿ ಚಿತ್ರರಂಗ ಮಾತ್ರವಲ್ಲದೆ ಅಮೆರಿಕಾ ಸಿನಿರಂಗ ಪ್ರವೇಶ ಮಾಡಿರುವುದು ಖುಷಿ ವಿಚಾರ .

ಇನ್ನು ದೀಪಿಕಾ ಸಿನಿ ಜರ್ನಿ ಆರಂಭಿಸಿದ್ದು ಬಾಲಿವುಡ್ ನಿಂದಲೇ ಅಲ್ಲ … ಅವರ ಸಿನಿಯಾನ ಆರಂಭ ನಮ್ಮ ಕನ್ನಡ ಚಿತ್ರರಂಗದಿಂದಲೇ … ! ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ ಐಶ್ವರ್ಯ ‘ ಸಿನಿಮಾ ಮೂಲಕ ದೀಪಿಕಾ ಸಿನಿಯಾನ ಆರಂಭವಾಯಿತು .ಸ್ಯಾಂಡಲ್ ವುಡ್ ನಿಂದಲೇ ದೀಪಿಕಾ ಪಡುಕೋಣೆ ಎಂಬ ಕನ್ನಡದ ಚೆಲುವೆ ಚಿತ್ರರಂಗಕ್ಕೆ ಪರಿಚಿತವಾಗಿದ್ದು . ಇಂದ್ರಜಿತ್ ಲಂಕೇಶ್ ಆ್ಯಕ್ಷನ್ ಕಟ್ ಹೇಳಿದ್ದ ಐಶ್ವರ್ಯ ಸಿನಿಮಾ ಮೂಲಕ ಸಿನಿ ಪಯಣ ಆರಂಭಿಸಿದ ದೀಪಿಕಾ ಪಡುಕೋಣೆ ಇಂದು ಸಿನಿ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆದಿದ್ದಾರೆ , ಸಾಕಷ್ಟು ಹೆಸರು ಮಾಡಿದ್ದಾರೆ , ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ . ಐಶ್ವರ್ಯ ಸಿನಿಮಾ ಬಂದು 14 ವರ್ಷ ಆಗಿದೆ .. 2006 ರಲ್ಲಿ ತೆರೆಕಂಡ ಆ ಸಿನಿಮಾ ದೀಪಿಕಾರ ಮೊದಲ ಸಿನಿಮಾ . ಹಾಗೂ ಕನ್ನಡದಲ್ಲಿ ಸದ್ಯಕ್ಕೆ ಅದುವೇ‌ ಕೊನೆಯ ಸಿನಿಮಾ ಕೂಡ . ಆ ಸಿನಿಮಾದ ಯಶಸ್ಸಿನ ಬಳಿಕ ಅವರನ್ನು ಹಿಂದಿ ಸಿನಿ ದುನಿಯಾ ಕೈ ಬೀಸಿ ಕರೆಯಿತು . ಅವರು ಬಾಲಿವುಡ್ ನತ್ತ ಚಿತ್ತ ಹರಿಸಿದರು ‌ . ಯಶಸ್ಸು ಸಿಕ್ತು . ಸ್ಟಾರ್ ನಟಿ ಆದರು …ಅಲ್ಲೇ ತೊಡಗಿಸಿಕೊಂಡಿರುವುದರಿಂದ ಕನ್ನಡ ಸಿನಿಮಾಗಳಲ್ಲಿ ಮತ್ತೆ ಮಾಡಿಲ್ಲ . ಕನ್ನಡ ಏನು ದಕ್ಷಿಣ ಭಾರತದ ಯಾವ ಸಿನಿಮಾದಲ್ಲೂ ಕನ್ನಡತಿ ದೀಪಿಕಾ ಪಡುಕೋಣೆ ನಟಿಸಿಲ್ಲ .

ಇದೀಗ 14 ವರ್ಷಗಳ ಬಳಿಕ ದಕ್ಷಿಣ ಭಾರತ ಸಿನಿರಂಗಕ್ಕೆ ದೀಪಿಕಾ ಬರ್ತಿದ್ದಾರೆ ಎನ್ನಲಾಗಿದೆ . ಆದರೆ ಕನ್ನಡ ಸಿನಿಮಾಕ್ಕಲ್ಲ .. ತೆಲುಗುಗೆ …

ಹೌದು ದೀಪಿಕಾ ಪಡುಕೋಣೆ ಅವರನ್ನು ತೆಲುಗು ಚಿತ್ರವೊಂದಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಲಾಗಿದ್ದು , ಆ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ತಿಳಿದುಬಂದಿದೆ . ಎಲ್ಲಾ ಅಂದುಕೊಂಡಂತೆ ಆದರೆ ತೆಲುಗು ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ನಟಿ , ಕನ್ನಡತಿ ದೀಪಿಕಾ ಪಡುಕೋಣೆ ಮಿಂಚಲಿದ್ದಾರೆ .

 

ಕೆಟ್ಟದಾಗಿ ಸ್ಪರ್ಶಿಸಿದ್ದ ಆ ಕ್ರಿಕೆಟರ್ ಗೆ ಪ್ರಿಯಾಮಣಿ ಕಪಾಳಮೋಕ್ಷ ಮಾಡಿದ್ದು ಸತ್ಯನಾ?

2011 ರ ವಿಶ್ವಕಪ್ ನಲ್ಲಿ ಸಚಿನ್ ಪುತ್ರ ಅರ್ಜುನ್ ಜೊತೆ ಮ್ಯಾಚ್ ನೋಡಿದ್ದ ಪೋರ ಇವತ್ತು ಟೀಮ್ ಇಂಡಿಯಾ ಆಟಗಾರ…!

ಇದು ಕಾಳಿಂಗ ಸರ್ಪಗಳ ರಾಜಧಾನಿ…! ಇದು ನಿಮಗೂ ಚಿರಪರಿಚಿತ ..!

ಮನಸ್ಸು ಗಾಯಗೊಳಿಸಿ ಕ್ಷಮೆ ಎಂಬ ಮುಲಾಮು ಹಚ್ಚುವುದಲ್ಲ…

ಧೋನಿ ನಾಯಕತ್ವದ ವಿಶ್ವ ಏಕದಿನ ತಂಡ ಪ್ರಕಟಿಸಿದ ವಾಸಿಮ್ ಜಾಫರ್ ..!

ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ

ನೀವಿಬ್ಬರು ಹೀಗಿದ್ದರೆ ನಿಮ್ಮ ನಡುವೆ ಇರೋದು ಬರೀ ಫ್ರೆಂಡ್ಶಿಪ್ ಅಲ್ಲ…!

ಫ್ರೀ ಟಾಕ್ ಟೈಮ್ ಆಫರ್ , ವ್ಯಾಲಿಡಿಟಿ ವಿಸ್ತರಣೆ ನೀಡುತ್ತಿವೆ‌ ಟೆಲಿಕಾಂ ಕಂಪನಿಗಳು‌..!

ಬಾಸ್ ನೀನೇನು ಮಾಡ್ತಿದ್ಯಾ … ? ಸಿಕ್ಸರ್ ಸಿಡಿಸಿದ ಅಯ್ಯರ್ ಗೆ ದ್ರಾವಿಡ್ ಕೂಲ್ ವಾರ್ನಿಂಗ್ ..!

Share post:

Subscribe

spot_imgspot_img

Popular

More like this
Related

ಡಿ ಕೆ ಶಿವಕುಮಾರ್ ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವುದು ನಮ್ಮ ಪುಣ್ಯ: ನಾಗರಿಕರ ಪ್ರಶಂಸೆ

ಡಿ ಕೆ ಶಿವಕುಮಾರ್ ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವುದು ನಮ್ಮ ಪುಣ್ಯ:...

ಜಾರ್ಖಂಡ್‌ನಲ್ಲಿ ವೈದ್ಯಕೀಯ ನಿರ್ಲಕ್ಷ್ಯ — ರಕ್ತ ಪಡೆದ ಐದು ಮಕ್ಕಳಿಗೆ ಎಚ್‌ಐವಿ ಸೋಂಕು

ಜಾರ್ಖಂಡ್‌ನಲ್ಲಿ ವೈದ್ಯಕೀಯ ನಿರ್ಲಕ್ಷ್ಯ — ರಕ್ತ ಪಡೆದ ಐದು ಮಕ್ಕಳಿಗೆ ಎಚ್‌ಐವಿ...

ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ – ಆದರೆ ಈ ಕೆಲಸ ತಪ್ಪದೇ ಬಿಡಿ!

ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ – ಆದರೆ ಈ ಕೆಲಸ...

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...