ಫೋನ್ ವಾರೆಂಟಿ ಮುಗಿದಿದ್ರೆ ಚಿಂತಿಸ ಬೇಡಿ … !

0
419

ಕೊರೋನಾ ಎನರ್ಜೆನ್ಸಿಯಿಂದ ಇಡೀ ವಿಶ್ವ ತತ್ತರಿಸಿದೆ . ಭಾರತ ಸೇರಿದಂತೆ ಜಗತ್ತಿನ 183 ರಾಷ್ಟ್ರಗಳಲ್ಲಿ‌ ಕೊರೋನಾ ರುದ್ರತಾಂಡವ ಆಡುತ್ತಿದೆ . ಕೊರೋನಾ ವಿರುದ್ಧ ಸಮರ ಸಾರಿರುವ ಭಾರತ ಲಾಕ್ ಡೌನ್ ಎಂಬ ‘ ಕೊರೋನಾ ಯುದ್ಧ ತಂತ್ರ ‘ ಅನುಸರಿಸಿದೆ . ಇಡೀ ದೇಶ ಸದ್ಯ ಲಾಕ್ ಡೌನ್ ಆಗಿದೆ . ಹೀಗಾಗಿ ಅತ್ಯಗತ್ಯ ಸೇವೆಗಳನ್ನು ಹೊರತುಪಡಿಸಿ ಯಾವುದೇ ಸೇವೆಗಳು ಲಭ್ಯವಿಲ್ಲ . ಹೀಗಾಗಿ ಜನ ಕೆಲವೊಂದಿಷ್ಟು ಸೇವೆಗಳ ವಿಚಾರಗಳಲ್ಲಿ ಗೊಂದಲಕ್ಕೀಡಾಗಿದ್ದಾರೆ .

ಅಂತೆಯೇ ಮೊಬೈಲ್ ವಾರೆಂಟ್ ಮುಕ್ತಾಯದ ವಿಷಯ ಕೂಡ ..! ಇದೀಗ ಮೊಬೈಲ್ ಕಂಪನಿಗಳು ವಾರೆಂಟ್ ಅವಧಿಯನ್ನು ಮುಂದೂಡಿ ಗ್ರಾಹಕರ ತಲೆನೋವು ಕಡಿಮೆ ಮಾಡಿವೆ .

ಲಾಕ್ ಡೌನ್ ಅವಧಿಯಲ್ಲಿ ನಿಮ್ಮಲ್ಲಿರುವ ಸ್ಮಾರ್ಟ್ ಫೋನ್ ವಾರೆಂಟಿ ಮುಗಿದಲ್ಲಿ ಚಿಂತಿಸುವ ಅಗತ್ಯವಿಲ್ಲ . ವಿವಿಧ ಸ್ಮಾರ್ಟ್ ಫೋನ್ ಕಂಪನಿಗಳು ತಮ್ಮ ಗ್ರಾಹಕರಿಗೆ ವಾರೆಂಟಿ , ಮಾರಾಟ ನಂತರದ ಪ್ರಯೋಜನಗಳು ಹಾಗೂ ರಿಪೇರಿ ಮೊದಲಾದ ಸೇವೆಗಳನ್ನು ವಿಸ್ತರಿಲು ನಿರ್ಧರಿಸಿವೆ . ಈ ಮೂಲಕ ಲಾಕ್ ಡೌನ್ ನಲ್ಲಿ ತಮ್ಮ ಮೊಬೈಲ್ ವಾರೆಂಟಿ ಬಗ್ಗೆ ಚಿಂತಿಸುತ್ತಿದ್ದ ಗ್ರಾಹಕರು ನಿಶ್ಚಿಂತೆಯಿಂದ ಇರುವಂತಾಗಿದೆ .

ನಿಮ್ಮಲ್ಲಿರುವ ಫೋನ್ ವಾರೆಂಟಿ ಲಾಕ್ ಡೌನ್ ಅವಧಿಯಲ್ಲಿ ಮುಕ್ತಾಯವಾಗುತ್ತಿದೆ ಎಂದಾದರೆ ಆ ಅವಧಿಯನ್ನು ವಿಸ್ತರಿಸಲಾಗುತ್ತಿದ್ದು , ಮೇ 31 ರವರೆಗೆ ವಾರೆಂಟಿ ನೀಡಲಾಗುತ್ತಿದೆ .

ಸ್ಯಾಮ್ಸ್ ಸಂಗ್, ರಿಯಲ್ ಮಿ, ಒಪ್ಪೋ, ಒನ್ ಪ್ಲೆಸ್ , ವಿವೋ , ಲೆನೋವೋ, ಹುವೈ, ಮೋಟೋ ರೋಲಾ ಹೊನೋರ್, ಏಸಸ್ , ಐಟೆಲ್, ಲಾವಾ ಮತ್ತು ಇನ್ಫಿನಿಕ್ಸ್ ವಿಸ್ತರಣೆ ಪ್ರಯೋಜನ ನೀಡಿವೆ .

ಸ್ಯಾಮ್‌ಸಂಗ್ : ಸ್ಯಾಮ್ ಸಂಗ್ ಸಂಸ್ಥೆ  ಗ್ರಾಹಕರಿಗೆ ವಾರೆಂಟಿ ವಿಸ್ತರಣೆ ಕೊಡುಗೆ ನೀಡಿದೆ.
ಗ್ರಾಹಕರ ಹಿತರಕ್ಷಣೆ ಕಾಪಾಡುವ ‌ನಿಟ್ಟಿನಲ್ಲಿ , ಮಾರ್ಚ್ 20ರಿಂದ ಏ. 30ರವರೆಗೆ ನಿಮ್ಮ ಫೋನ್‌ ವಾರಂಟಿ ಇದ್ದಲ್ಲಿ, ಮೇ 31, 2020ವರೆಗೆ ವಾರಂಟಿ ವಿಸ್ತರಣೆ ಮಾಡಿದೆ.

​ಹುವೈ ಮತ್ತು ಹೊನೊರ್

ಇನ್ನು ನಮ್ಮ ದೇಶದಲ್ಲಿ ಹುವೈ ಮತ್ತು ಹೊನೊರ್ ಫೋನ್ ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಮಾರ್ಚ್ 21ರಿಂದ ಜೂನ್ 21ರವರೆಗೆ ವಾರಂಟಿ ಹೊಂದಿರುವ ಎಲ್ಲ ಫೋನ್‌ಗಳ ವಾರಂಟಿ ಜೂನ್ 30ರವರೆಗೆ ವಿಸ್ತರಿಸಲು ಸಂಸ್ಥೆ ತೀರ್ಮಾನಿಸಿದೆ .

​​ವಿವೋ : ಚೀನಾ ಮೂಲದ ವಿವೋ ಕಂಪನಿ ಸಹ ವಾರಂಟಿ ವಿಸ್ತರಣೆಗೆ ಮುಂದಾಗಿದೆ . ಈ ಮೂಲಕ ತನ್ನ ಗ್ರಾಹಕರಿಗೆ ಲಾಕ್ ಡೌನ್ ಹಿನ್ನೆಲೆಯಲ್ಲಿ ವಿಶೇಷ ಕೊಡುಗೆ ನೀಡುತ್ತಿದೆ. ಮಾರ್ಚ್ 25ಕ್ಕೆ ನಿಮ್ಮ ಫೋನ್ ವಾರಂಟಿ ಮುಗಿದಿದ್ದಲ್ಲಿ, ನಿಮಗೆ ಮೇ 31, 2020ರವರೆಗೆ ವಾರಂಟಿ ವಿಸ್ತರಣೆ ನೀಡಲಾಗುತ್ತದೆ .

​ರಿಯಲ್‌ಮಿ : ರಿಯಲ್‌ಮಿ ಫೋನ್‌ ಕೂಡ ಕೊರೋನಾ ಲಾಕ್ ಡೌನ್ ಅವಧಿಯಲ್ಲಿ ವಾರಂಟಿ ವಿಸ್ತರಣೆ ಮಾಡುತ್ತಿದೆ . ಫೋನ್ ಮತ್ತು ಅಕ್ಸೆಸ್ಸರಿಗೂ ಅಧಿಕ ವಾರಂಟಿ ಕೊಡುಗೆ ಲಭ್ಯವಾಗಲಿದೆ . ಮಾರ್ಚ್ 20ರಿಂದ ಹಿಡಿದು ಏಪ್ರಿಲ್ 30ರವರೆಗೆ ವಾರಂಟಿ ಹೊಂದಿರುವ ಎಲ್ಲಾ ಮೊಬೈಲ್ ಡಿವೈಸ್‌ಗಳಿಗೂ ಮೇ 31ರವರೆಗೆ ವಾರಂಟಿ ವಿಸ್ತರಣೆ ಮಾಡಿದೆ .

​​ಒಪ್ಪೋ : ಒಪ್ಪೋ ಕೂಡ ಗ್ರಾಹಕರಿಗೆ ಒಪ್ಪಿತ ಸೇವೆ ಒದಗಿಸಿದೆ .
ಒಪ್ಪೋ ಕೂಡ ತನ್ನ ಗ್ರಾಹಕರಿಗೆ ಲಾಕ್‌ಡೌನ್ ಅವಧಿಯಲ್ಲಿ ವಾರಂಟಿ ಮೇ 31ರವರೆಗೆ ವಿಸ್ತರಣೆ ಮಾಡಿದೆ . ಅಂದರೆ ಮಾರ್ಚ್ 23ರ ನಂತರ ನಿಮ್ಮ ವಾರಂಟಿ ಮುಗಿದುಹೋದರೆ, ಮೇ 31ರವರೆಗೆ ವಿಸ್ತರಣೆಯಾಗಲಿದೆ . ಫೋನ್ ಮಾತ್ರವಲ್ಲದೆ, ಬಾಕ್ಸ್ ಅಕ್ಸೆಸ್ಸರಿಗೂ ವಾರಂಟಿ ವಿಸ್ತರಣೆಯಾಗಲಿದೆ. ಒನ್‌ಟೈಂ ಸ್ಕ್ರೀನ್ ರಿಪ್ಲೇಸ್‌ಮೆಂಟ್, ಡ್ಯಾಮೇಜ್ ಪ್ರೊಟೆಕ್ಷನ್‌ಗೂ ವಾರಂಟಿ ಸೌಲಭ್ಯ ನೀಡಿದೆ .

​ಒನ್‌ಪ್ಲಸ್ : ಚೀನಾ ಮೂಲದ ಸಂಸ್ಥೆ ಒನ್‌ಪ್ಲಸ್, ದೇಶದಲ್ಲಿ ಲಾಕ್‌ಡೌನ್ ಅವಧಿಯಲ್ಲಿ ರಿಟರ್ನ್ಸ್ ಮತ್ತು ವಾರಂಟಿಯನ್ನು ವಿಸ್ತರಣೆ ಮಾಡಿದೆ . ಮಾರ್ಚ್ 1ರಿಂದ ನಿಮ್ಮ ವಾರಂಟಿ ಮೇ 30ಕ್ಕೆ ಕೊನೆಯಾಗುತ್ತಿದ್ದರೆ, ಮೇ 31ರವರೆಗೆ ನಿಮಗೆ ವಾರಂಟಿ ವಿಸ್ತರಣೆ ಸೌಲಭ್ಯ ಸಿಗಲಿದೆ . ರಿಟರ್ನ್ ಮತ್ತು ರಿಪ್ಲೇಸ್‌ಮೆಂಟ್ ಅವಧಿಯನ್ನು 15 ದಿನದಿಂದ 30ರವರೆಗೆ ವಿಸ್ತರಿಸಿದೆ .

​ಲೆನೋವೋ ಮತ್ತು ಮೋಟೋರೊಲಾ :

ಲೆನೋವೊ ಮತ್ತು ಮೋಟೋರೊಲಾ ಖರೀದಿಸಿರುವ ಗ್ರಾಹಕರಿಗೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಫೋನ್ ವಾರಂಟಿ ಹೆಚ್ಚಿಸಿದೆ . ಮಾರ್ಚ್ 15 ರಿಂದ ಏಪ್ರಿಲ್ 30ವರೆಗಿನ ಅವಧಿಯಲ್ಲಿ ಲಾಕ್‌ಡೌನ್‌ನಿಂದಾಗಿ ಯಾವುದೇ ಮಾರಾಟ ನಂತರದ ಸೇವೆ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಾದರೆ ಚಿಂತಿಸುವ ಅಗತ್ಯವಿಲ್ಲ . ವಾರೆಂಟಿಯನ್ನು ಮೇ 31 ರವರೆಗೆ ವಿಸ್ತರಿಸಿದೆ .

 

LEAVE A REPLY

Please enter your comment!
Please enter your name here