15 ದೇಶದ 430 ಟೀಮ್ ಗೆ ಇವರೇ ಕ್ಯಾಪ್ಟನ್ ..!

1
146

ಅತುಲ್ ಸತಿಜಾ. ಕಾರ್ಪೋರೇಟ್ ಜಗತ್ತಿನ ಮಹಾನ್ ಸಾಧಕ… ಅಷ್ಟೇ ಸಮಾಜಮುಖಿ ಕೂಡ. ಅತುಲ್ ಕಾರ್ಪೋರೇಟ್​ ಲೋಕದಲ್ಲಿ 15 ದೇಶಗಳ 430 ತಂಡಗಳಿಗೆ ಮುಖ್ಯಸ್ಥರಾಗಿದ್ದವರು

. ಪ್ರತಿಷ್ಠಿತ ಗೂಗಲ್ ಸಂಸ್ಥೆಯಲ್ಲಿ ಆಯಕಟ್ಟಿನ ಹುದ್ದೆಯಲ್ಲಿ ಕಾರ್ಯನಿರ್ವಹಿಸಿ 38ನೇ ವಯಸ್ಸಿಗೇ ಸಾಧನೆಯ ಎತ್ತರಕ್ಕೆ ತಲುಪಿದವರು.
ಅತುಲ್ ಮೂಲತಃ ಹರಿಯಾಣದ ಚಂಡೀಗಢದವರು. ಮಧ್ಯಮ ವರ್ಗದ ಕುಟುಂಬ. ಆದರೂ, ಇವರ ತಂದೆ ಕಷ್ಟದಲ್ಲಿರುವ ಸಂಬಂಧಿಕರಿಗೆ ಯಾವಾಗಲೂ ಸಹಾಯ ಮಾಡುತ್ತಿದ್ದರಂತೆ. ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಅತುಲ್ ಮುಂದೆ ತಾನು ದೊಡ್ಡವನಾಗಿ, ಗಳಿಸಲು ಆರಂಭಿಸಿದ ಮೇಲೆ ಅಪ್ಪನ ಹಾಗೆ ಇತರರಿಗೆ ಸಹಾಯ ಮಾಡಬೇಕು ಅಂತ ಅಂದುಕೊಂಡರಂತೆ. ಬಿ.ಟೆಕ್, ಎಂಬಿಎ ಪೂರ್ಣಗೊಳಿಸಿ 1998ರಲ್ಲಿ ಇನ್ಪೋಸಿಸ್ ಉದ್ಯೋಗಿಯಾಗಿದರು.


ಮುಂದೆ, ಗೂಗಲ್, ಇನ್ವೊಬಿಯಂಥ ಪ್ರತಿಷ್ಠಿತ ಸಂಸ್ಥೆಗಳ ಉನ್ನತ ಹುದ್ದೆಯೇರಿ, ಯಶಸ್ಸು ತಮ್ಮದಾಗಿಸಿಕೊಂಡರು. 40ನೇ ವಯಸ್ಸಿನೊಳಗೆಯೇ ಸಾಮಾಜಿಕ ಕೆಲಸ ಆರಂಭಿಸಬೇಕು ಎಂದು ಸಂಕಲ್ಪಿಸಿದಾಗ, ಏನು ಮಾಡೋದು ಎಂಬ ಪ್ರಶ್ನೆಯಿತ್ತು. ಅದಕ್ಕಾಗಿ, ದೆಹಲಿಯಲ್ಲಿ ‘ಎಂಡ್ಪವರ್ಟಿ’ ಎಂಬ ಸ್ವಯಂಸೇವಾ ಸಂಸ್ಥೆಗೆ ವಾಲೆಂಟರ್ ಆಗಿ ಸೇರಿಕೊಂಡರು.
ಅತುಲ್ ‘ ಎಂಡ್ ಪವರ್ಟಿ ’ ಮೂಲಕ ವಾರಾಂತ್ಯಗಳಲ್ಲಿ ದೆಹಲಿಯ ಕೊಳೆಗೇರಿ ಪ್ರದೇಶಗಳಿಗೆ ಹೋಗಿ ಅಲ್ಲಿನ ಆರೋಗ್ಯ ವ್ಯವಸ್ಥೆ ಸುಧಾರಿಸಲು ಯತ್ನಿಸುವುದು, ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸುವುದು, ಮಕ್ಕಳಿಗೆ ಜೀವನಕೌಶಲ ಹೇಳಿಕೊಡುವುದು ಹೀಗೆ ಹಲವು ಚಟುವಟಿಕೆ ಕೈಗೊಂಡರು. ಮುಂದೆ, ಎಂಡ್ಪವರ್ಟಿ ಸಂಸ್ಥೆಯ ನಿರ್ದೇಶಕರಾಗಿ, ಬಳಿಕ ಅಧ್ಯಕ್ಷರಾಗಿ 2-3 ವರ್ಷ ಕಾರ್ಯನಿರ್ವಹಿಸಿದ ಬಳಿಕ ಗಟ್ಟಿ ಅನುಭವದ ಆಧಾರ ದೊರಕಿತ್ತು.


ಅತುಲ್ ತಮ್ಮ 38ನೇ ವಯಸ್ಸಿನಲ್ಲಿ ಅಂದರೆ 2015ರ ಜನವರಿಯಲ್ಲಿ ಉದ್ಯೋಗಕ್ಕೆ ರಾಜೀನಾಮೆ ನೀಡಿದರು. ಅದೇ ವರ್ಷದ ನವೆಂಬರ್ನಲ್ಲಿ ‘ದ ನಡ್ಜ್’ ಫೌಂಡೇಷನ್ ಸ್ಥಾಪಿಸಿದರು. ಯುವಕರಿಗೆ ಜೀವನ ಮತ್ತು ಉದ್ಯೋಗ ಕೌಶಲ ಎರಡನ್ನೂ ಒದಗಿಸುವ ಉದ್ದೇಶದಿಂದ ‘ಗುರುಕುಲ’ ಸ್ಥಾಪಿಸಿದ್ದು, ಮೂರು ತಿಂಗಳ ಉಚಿತ ವಸತಿ, ಊಟದೊಂದಿಗೆ ತರಬೇತಿ ನೀಡಿ, ಕೆಲಸ ಕೊಡಿಸಿ, ಆ ಬಳಿಕವೂ ವೃತ್ತಿಏಳ್ಗೆಗೆ ಸಹಕರಿಸುವ ಗುರುಕುಲ ಬಡಕುಟುಂಬಗಳ ಯುವಸಮೂಹಕ್ಕೆ ಸಂಜೀವಿನಿಯಾಗಿದೆ.
ನಮ್ಮ ದೇಶದಲ್ಲಿ ಪ್ರತಿ ತಿಂಗಳು 10 ಲಕ್ಷ ಉದ್ಯೋಗಾಕಾಂಕ್ಷಿಗಳು ಹುಟ್ಟಿಕೊಳ್ಳುತ್ತಾರೆ. ಈ ಸಂಖ್ಯೆ 15 ವರ್ಷಗಳವರೆಗೆ ಮುಂದುವರಿಯಲಿದೆ. ಉದ್ಯೋಗಾವಕಾಶಗಳಿಗೆ ಕೊರತೆಯೇನಿಲ್ಲ. ಆದರೆ, ಕೌಶಲವೇ ಇಲ್ಲದೆ ಕೆಲಸ ಸಿಗೋದು ಹೇಗೆ? ಈ ಕೊರತೆಯನ್ನು ನೀಗಿಸಲೆಂದೆ ಕಾರ್ಯನಿರ್ವಹಿಸುತ್ತಿದ್ದೇವೆ. ವರ್ಷಕ್ಕೆ ಮೂರು ಸಾವಿರಕ್ಕಿಂತ ಅಧಿಕ ಗ್ರಾಮೀಣಿಗರಿಗೆ ಕೆಲಸ-ಜೀವನದರ್ಶನ ಒದಗಿಸುತ್ತಿದ್ದೇವೆ’ ಎನ್ನುತ್ತಾರೆ ಅತುಲ್ ಅವರು.
ಏನೇ ಹೇಳಿ, ಅತುಲ್ ಸತಿಜಾ ಅವರು ಸಹಸ್ರಾರು ಹಳ್ಳಿ ಯುವಕರ ಮೊಗದಲ್ಲಿನ ಆತ್ಮವಿಶ್ವಾಸ, ನಗು ಮೂಡಿಸಿದ್ದಾರೆ. ಅವರ ಕಟ್ಟಿರುವ ‘ ಗುರುಕುಲ ’ ಬಡತನ ನಿವಾರಣೆಯ, ಉದ್ಯೋಗಸೃಷ್ಟಿಯ ಯಶಸ್ವಿ ಪ್ರಯೋಗಶಾಲೆಯಾಗಿ ಬದಲಾಗಿದೆ. ಇಡೀ ಕಾರ್ಪೋರೇಟ್​ ವಲಯಕ್ಕೆ ಸ್ಫೂರ್ತಿಯಾಗಿದೆ.

ಮೊದಲ ಸಲ ಅವಳನ್ನು ನೋಡಲು ಹೋಗುವಾಗ ಈ ಟಿಪ್ಸ್ ಫಾಲೋ ಮಾಡಿ

ಅಷ್ಟಕ್ಕೂ ಅಣ್ಣಾಮಲೈ BJP ಸೇರಿದ್ದು ಯಾಕೆ ಗೊತ್ತಾ?

3 ಮಿಲಿಯನ್ ಗೂ ಹೆಚ್ಚು ವೀಕ್ಷಿಸಲ್ಪಟ್ಟಿದ್ದ ಚಂದನ್ ಶೆಟ್ಟಿ ವಿಡಿಯೋ ಡಿಲೀಟ್ ಮಾಡಿದ್ದೇಕೆ ..? ಚಂದನ್ ಶೆಟ್ಟಿ ವಿವಾದದ ಕಂಪ್ಲೀಟ್ ಸ್ಟೋರಿ‌..!

 

1 COMMENT

LEAVE A REPLY

Please enter your comment!
Please enter your name here