15 ಹುಡುಗನಿಗೆ RCB 1.5 ಕೋಟಿ ಕೊಟ್ಟು ಖರೀದಿ ಮಾಡಲು ಕಾರಣವೇನು ಗೊತ್ತಾ..?
ಆರ್ ಸಿಬಿ ತಂಡದ ಇಂದು ನಡೆದ ಹರಾಜಿನಲ್ಲಿ ಎಚ್ಚರಿಕೆ ಹೆಜ್ಜೆ ಇಟ್ಟಂತೆ ಕಾಣುತ್ತಿದೆ.. ಬೇಡವಾದ ಆಟಗಾರರನ್ನ ಬಿಟ್ಟು ಉತ್ತಮ ಸಾಮರ್ಥ್ಯವಿರುವ ಆಟಗಾರರಿಗೆ ಮಣೆ ಹಾಕಿದೆ.. ಹೀಗಾಗೆ ಇಂದು ನಡೆದ ಹರಾಜು ಪ್ರಕ್ರಿಯೆಯಲ್ಲಿ ಸಾಧನೆ ತೋರಿದ ಯುವ ಆಟಗಾರರಿಗೆ ಟೀಮ್ ನಲ್ಲಿ ಸ್ಥಾನ ನೀಡಿದೆ..
ಹೀಗಾಗೆ ಇಂದು 15ರ ಪೋರನೊಬ್ಬ ಆರ್ ಸಿಬಿ ತಂಡ ಸೇರಿದ್ದಾನೆ.. ಈತನಿಗೆ 1.5 ಕೋಟಿ ಹಣ ನೀಡಿ ಘಟಾನುಘಟಿ ಆಟಗಾರನ್ನ ದೂರವಿಟ್ಟು ಖರೀದಿ ಮಾಡಿದೆ.. ಬಂಗಾಳ ಮೂಲದ ಪ್ರಯಾಸ್ ರೇ ಬರ್ಮನ್ 1.5 ಕೋಟಿಗೆ ಬೆಂಗಳೂರು ತಂಡ ಸೇರಿದ ಹುಡುಗ.. ಈತನ ಆಯ್ಕೆಗೆ ಕಾರಣವಿದೆ.. 2018-19ರ ವಿಜಯ್ ಹಜಾರೆ ಟೂರ್ನಿಯಲ್ಲಿ ಬಂಗಾಳ ಪರ ಅತೀ ಹೆಚ್ಚು ವಿಕೆಟ್ ಪಡೆದ ಹೆಗ್ಗಳಿಕೆಗೆ ಪ್ರಯಾಸ್ ಗಿದೆ..
ಸ್ಪಿನ್ನರ್ ಆಗಿರುವ ಈತನ ಬೌಲಿಂಗ್ ನಲ್ಲಿ ವಿಶೇಷತೆ ಇರುವುದಾಗಿ ಕ್ರಿಕೆಟ್ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ..ಇನ್ನೂ ಕೊಹ್ಲಿ ನಾಯಕತ್ವದಲ್ಲಿ ಆಡುವ ಅವಕಾಶ ಪಡೆದಿರುವ ಈ ಯುವಕ ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದರೆ ಅಚ್ಚರಿ ಇಲ್ಲ..