ಭಾರತದಲ್ಲಿ ಇಂದಿಗೂ ಸರಿಸುಮಾರು ಶೇಕಡ 35ರಷ್ಟು ಹುಡುಗಿಯರಿಗೆ ಶಾಲೆಗೆ ಹೋಗೋಕೆ, ಓದೋಕೆ ಸರಿಯಾಗಿ ಪ್ರೋತ್ಸಾಹ ಸಿಗ್ತಾ ಇಲ್ಲ…! ಆದ್ರೆ ಇಲ್ಲೊಬ್ಬಳು ಹುಡುಗಿ ಹೈಸ್ಕೂಲ್ ಗೆ ಹೋಗ್ಬೇಕಾದ ವಯಸ್ಸಲ್ಲಿ ಪಿಎಚ್ಡಿ ಮಾಡ್ತಾ ಇದ್ದಾಳೆ..! ಓದಿ, ಇಲ್ಲಿದೆ ಆ ಇಂಟ್ರೆಸ್ಟಿಂಗ್ ಸ್ಟೋರಿ..
ಆ ಬಾಲಕಿ ಹೆಸರು ಸುಷ್ಮಾ ವರ್ಮಾ..! ಫ್ರಂ ಲಖ್ನೋ..! ಈ ಹುಡುಗಿಗೆ ಈಗಿನ್ನು ಕೇವಲ ಹದಿನೈದೇ ವರ್ಷ..! 15 ವರ್ಷದ ಆ ಹುಡುಗಿ ಎಂಟನೆ ಕ್ಲಾಸ್ ಅಥವಾ ಒಂಬತ್ತನೇ ಕ್ಲಾಸ್ನಲ್ಲಿ ಇರ್ಬೇಕಿತ್ತು..! ಇನ್ನೂ ಅಬ್ಬಬ್ಬ ಅಂದ್ರೆ ಎಸ್ಎಸ್ಎಲ್ಸಿ ಓದ್ತಾ ಇರ್ಬೇಕಿತ್ತು..! ಆದ್ರೆ ಅವಳು ಶಾಲೆಗೆ ಹೋಗೋ ಪುಟ್ಟ ಬಾಲಕಿ ಅಲ್ಲ..! ಮಾಸ್ಟರ್ ಡಿಗ್ರಿ ಮುಗಿಸಿ ಸಂಶೋಧನೆ ಮಾಡೋಕೆ ಹೊರಟಿರುವ ಪಿ.ಎಚ್.ಡಿ. ಸ್ಟೂಡೆಂಟ್..!
ಹದಿನೈದನೇ ವರ್ಷಕ್ಕೆ ಪಿ.ಎಚ್.ಡಿ. ಮಾಡ್ತಾ ಇದ್ದಾಳೆಂದ್ರೆ, ಎಸ್ಎಸ್ಎಲ್ಸಿ, ಪಿಯುಸಿ, ಡಿಗ್ರಿ, ಮಾಸ್ಟರ್ ಡಿಗ್ರಿಯನ್ನೆಲ್ಲಾ ಯಾವಾಗ ಮುಗಿಸಿದ್ಲು ಅನ್ನೋ ಪ್ರಶ್ನೆ ಕಾಡುತ್ತೆ ಅಲ್ವಾ..?! ಸಾರ್, ಈ ಪುಟ್ಟ ವಯಸ್ಸಿನ ದೊಡ್ಡ ಸಂಶೋಧಕಿ ತಾನು ಏಳನೇ ವರ್ಷದಲ್ಲಿರುವಾಗಲೇ ಎಸ್ಎಸ್ಎಲ್ಸಿ ಪಾಸ್ ಮಾಡಿದ್ದಳು..! ಆ ಪರೀಕ್ಷೆಯನ್ನು ಪಾಸ್ ಮಾಡಿದ ಅತೀ ಸಣ್ಣವಯಸ್ಕಳೆಂಬ ಕೀರ್ತಿ ಗೆ ಪಾತ್ರಳಾಗಿದ್ದಳು..! ಆ ಸಾಧನೆಯಿಂದಾಗಿಯೇ 2007ರಲ್ಲಿಯೇ `ಲಿಮ್ಕಾ’ದಾಖಲೆ ಪುಸ್ತಕದಲ್ಲಿ ಗುರುತಿಸಿಕೊಂಡಿದ್ದಳು..! ನಂತರ 14ನೇ ವರ್ಷಕ್ಕೆ ಡಿಗ್ರಿಯನ್ನು ಮುಗಿಸಿದ್ದಳು. ಡಾ. ಬಿಆರ್ ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಮೈಕ್ರೋಬಯಲಜಿ ವಿಷಯದಲ್ಲಿ ಸ್ನಾತಕೋತ್ತರ ಪದವಿ (ಮಾಸ್ಟರ್ ಡಿಗ್ರಿ) ಮುಗಿಸಿ, ಅಲ್ಲಿಯೇ ಪಿ.ಎಚ್.ಡಿ. ಗೆ ಸೇರಿಕೊಂಡಿದ್ದಾಳೆ..! ನೆನಪಿರಲಿ, ಮಾಸ್ಟರ್ ಡಿಗ್ರಿ ಮುಗಿಸಿ, ಪಿ.ಎಚ್.ಡಿ. ಗೆ ಸೇರಿರುವ ಈಕೆಗಿನ್ನೂ ಕೇವಲ ಹದಿನೈದು ವರ್ಷ..!
ಅಷ್ಟೇ ಅಲ್ಲ ಇನ್ನೊಂದು ವಿಷಯ, ಏನಪ್ಪಾ ಅಂದ್ರೆ ಅತೀ ಚಿಕ್ಕ ವಯಸ್ಸಲ್ಲೇ ಎಸ್ಎಸ್ಎಲ್ಸಿ ಮುಗಿಸಿದ್ದ ಈಕೆ, 2010ರಲ್ಲಿ ದ್ವಿತೀಯ ಪಿಯುಸಿ ಮುಗಿಸಿದ್ದಳು..! ಆಗ ಇವಳಿಗೆ ಜಪಾನ್ ನಿಂದ ಆಹ್ವಾನವೊಂದು ಬಂದಿತ್ತು..! ಅಲ್ಲಿ ಐಕ್ಯೂ ಪರೀಕ್ಷೆಯಲ್ಲಿ 30 ವರ್ಷ ವಯಸ್ಸಿನವರೊಂದಿಗೆ ಇವಳು ಸ್ಪರ್ಧಿಸಿದ್ದಳು..! ಆ ಮೂಲಕ ಇಡೀ ವಿಶ್ವವೇ ಇವಳತ್ತ ತಿರುಗಿ ನೋಡುವಂತೆ ಮಾಡಿದ್ದಳು..!
ಸುಷ್ಮಾ ವರ್ಮಾ 10 ವರ್ಷದವಳಿದ್ದಾಗಲೇ ವೈಧ್ಯಕೀಯ ಕೋರ್ಸ್ ಗೆ ಹೋಗೋಕೆ ಡಿಸೈಡ್ ಮಾಡಿದ್ದಳು..! ಪೂರ್ವಭಾವಿ ಪರೀಕ್ಷೆಯನ್ನೂ ಬರೆದಿದ್ದಳು..! ಆದರೆ ವಿಶ್ವವಿದ್ಯಾಲಯ ನಿಯಮ ಬದಲಿಸಿ, ಇವಳ ಫಲಿತಾಂಶವನ್ನು ತಡೆ ಹಿಡಿಯಿತ್ತು..! ಆದ್ದರಿಂದ ಚಿಕ್ಕ ವಯಸ್ಸಲ್ಲಿ ಡಾಕ್ಟರ್ ಆಗುವ ಕನಸು ನನಸಾಗಲಿಲ್ಲ..! ಆಮೇಲೆ ಡಿಗ್ರಿ, ಮಾಸ್ಟರ್ ಡಿಗ್ರಿ ಮಾಡಿದ್ದಾಳೆ..!
ಇನ್ನೊಂದು ವಿಶೇಷ ಅಂದ್ರೆ ಇವಳ ಇಡೀ ಕುಟುಂಬವೇ ಇವಳಂತೆ..! ಸುಷ್ಮಾಳ ಅಣ್ಣ ಕೂಡ ಅಸಾಮಾನ್ಯ..! ಇವನು ತನ್ನ 14ನೇ ವಯಸ್ಸಿನಲ್ಲೆಯೇ ಕಂಪ್ಯೂಟರ್ ಸೈನ್ಸ್ ಪದವಿ ಪೂರೈಸಿದ್ದ..! ಸುಷ್ಮಾಳ ಪುಟ್ಟತಂಗಿಗೆ ಈಗ ಕೇವಲ 3 ವರ್ಷ..! ಈಗಲೇ ಅಕ್ಕನ ದಾಖಲೆಗಳನ್ನು ಮುರಿಯುವ ತವಕದಲ್ಲಿದ್ದಾಳೆ..!
ಸುಷ್ಮಾ ಮತ್ತು ಅವಳ ಸೋದರ, ಸೋದರಿಯ ಕತೆ ಕೇಳ್ತಾ ಇದ್ರೆ ಇವರ ಕುಟುಂಬದವರು ತುಂಬಾ ಶ್ರೀಮಂತರು..ತಂದೆ ಬಳಿ ಸಿಕ್ಕಾಪಟ್ಟೆ ಹಣ ಇದೆ ಇರ್ಬೇಕೆಂಬ ಕಲ್ಪನೆ ಎಷ್ಟೋ ಜನರ ತಲೆಯಲ್ಲಿ ಬಂದಿರ್ಬಹುದು..! ಅದು ನಿಮ್ಮ ತಪ್ಪು ಕಲ್ಪನೆ..!
ಇವಳ ತಂದೆ 51 ವರ್ಷದ `ತೇಜ್ ಬಹುದ್ದೂರ್’. ಇವರು `ಟ್ಯಾಯ್ಲೇಟ್ ಕ್ಲೀನ್ ಮಾಡುವ ದಿನಗೂಲಿ ಕಾರ್ಮಿಕರು..’! ಇತ್ತೀಚೆಗೆ ಸುಷ್ಮಾಳ ಬಗ್ಗೆ ತಿಳಿದ ಡಾ. ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಆರ್. ವಿ ಸೋಬ್ತಿ ಸುಷ್ಮಾಳ ತಂದೆ ತೇಜ್ ಬಹುದ್ದೂರನ್ನು ಕರೆದು ಕ್ಯಾಂಪಸ್ ನಲ್ಲಿ `ಸ್ಯಾನಿಟೇಶನ್ ಸೂಪರ್ ವೈಸರ್ ಕೆಲಸ ಕೊಟ್ಟಿದ್ದಾರೆ..!
ಟಾಯ್ಲೇಟ್ ಕ್ಲೀನರ್ ನ ಮಗಳೊಬ್ಬಳು ಪಿ.ಎಚ್.ಡಿ. ಮಾಡೋದು ಅಂದ್ರೇನೆ ಒಂದು ದೊಡ್ಡ ಸಾಧನೆ..! ಹಿಂಗಿರುವಾಗ ಸುಷ್ಮಾ ಅತೀ ಸಣ್ಣ ವಯಸ್ಸಿನಲ್ಲಿ, ಕೇವಲ 15ನೇ ವಯಸ್ಸಲ್ಲಿ ಪಿ.ಎಚ್.ಡಿ. ಮಾಡ್ತಾ ಇದ್ದಾಳೆ ಅಂದ್ರೆ ಅವಳೂ ಗ್ರೇಟ್..! ಅವಳಿಗೆ ಪ್ರೋತ್ಸಾಹ ಕೊಟ್ಟು ಓದಿಸ್ತಾ ಇರೋ ಆ ಬಡ ತಂದೆ-ತಾಯಿಯೂ ತುಂಬಾ ಅಂದ್ರೆ ತುಂಬಾನೇ ಗ್ರೇಟ್..! ಸುಷ್ಮಾ ಮತ್ತು ಆಕೆಯನ್ನು ಹೆತ್ತವರಿಗಿಗೊಂದು ದೊಡ್ಡ ಸಲಾಂ…! ಈ ಹುಡುಗಿಯ ಸಾಧನೆ ನಿರಂತರವಾಗಿ ಮುಂದುವರೆಯಲಿ…!
ಸಾರ್, ಈ ಪುಟ್ಟ ಹುಡುಗಿ ಮತ್ತು ಅವಳ ಕುಟುಂಬದ ಬಗ್ಗೆ ನೀವೇನ್ ಹೇಳ್ತೀರಿ..?!
- ಶಶಿಧರ ಡಿ ಎಸ್ ದೋಣಿಹಕ್ಲು
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com