17ರ ಪೋರ ಈಗ `ನಾಸ' ಉದ್ಯೋಗಿ..! ಕ್ಯಾವೆಲಿನ್ ಗೆ ಇನ್ನೂ 17ವರ್ಷ ಈಗಲೇ ವಿಮಾನ ಹಾರಿಸಬಲ್ಲ..!

Date:

ಅಬ್ಬಾ ಇವನೆಂಥಾ ಪ್ರತಿಭಾವಂತ..! ಚಿಕ್ಕವಯಸ್ಸಲ್ಲೇ ಎಂಥಾ ಸಾಧನೆ ಮಾಡಿದ್ದಾನೆ..! ನಿಜಕ್ಕೂ ಈ ಹುಡುಗ ಇಷ್ಟೊಂದು ದೊಡ್ಡ ಸಾಧನೆ ಮಾಡಿದ್ದಾನ…? ನಂಬಲಾಗ್ತಾ ಇಲ್ಲ ಗುರೂ..! ಹೀಗೆ ಅನೇಕ ಅಭಿಪ್ರಾಯಗಳನ್ನು ಈ ಸ್ಟೋರಿ ಓದಿದ ಮೇಲೆ ನೀವು ಹೇಳೇ ಹೇಳ್ತೀರಿ..! ಈತನ ಸ್ಟೋರಿಯನ್ನು ಕೇಳಿದಾಗ ನನಗೂ ಅಚ್ಚರಿಯಾಯ್ತು..! ಅಚ್ಚರಿಯಾದ್ರೂ ನಿಜ.. ಅದಕ್ಕಾಗಿಯೇ ಈತನ ಸ್ಟೋರಿಯನ್ನು ನಿಮಗೆ ಹೇಳ್ತಾ ಇದ್ದೀನಿ.
ಆತ ಕ್ಯಾಲಿಫೋರ್ನಿಯಾದ ಸ್ಯಾನ್ ಗ್ಯಾಬ್ರಿಯಲ್ಲಿನವನು. ಹೆಸರು, `ಮೋಶೆ ಕೈ ಕ್ಯಾವೆಲಿನ್’..! ಒಂದಲ್ಲ ಇವನ ಬಳಿ ಎರಡು ಪದವಿಗಳಿವೆ…! ಸಮುದಾಯ ಕಾಲೇಜ್ ಒಂದರಲ್ಲಿ ಪದವಿ ಪಡೆದ..! ಆ ಪದವಿ ಪಡೆದ ನಾಲ್ಕು ವರ್ಷದ ನಂತರ ಲಾಸ್ ಏಂಜೆಲ್ಸಿನ `ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ’ `ಗಣಿತಶಾಸ್ತ್ರ’ದಲ್ಲಿ ಪದವಿ ಪಡೆದ. ಅಯ್ಯೋ ಇದರಲ್ಲೇನಿದೆ ಅಂತೀರಾ..?! ಸಾರ್, ಅವನು ಪದವಿ ಪಡೆದಿದ್ದರಲ್ಲಿ ಏನೇನೂ ವಿಶೇಷ ಇಲ್ಲ..! ಅಚ್ಚರಿ, ವಿಶೇಷ ಅಂದ್ರೆ, ಅವನು ಮೊದಲ ಪದವಿಯನ್ನು ಪಡೆಯುವಾಗ ಕೇವಲ 11 ವರ್ಷದವನಾಗಿದ್ದ..! ನಾಲ್ಕು ವರ್ಷದ ನಂತರ ಗಣಿತಶಾಸ್ತ್ರದಲ್ಲಿ ಪದವಿ ಪಡೆಯುವಾಗ ಕೇವಲ ಹದಿನೈದೇ ವರ್ಷ..!
ಈಗ ಈತನಿಗೆ ಹದಿನೇಳು ವರ್ಷ ಬೋಸ್ಟನ್ ನ ಬ್ರಾಂಡೀಸ್ ಯೂನಿವರ್ಸಿಟಿಯಲ್ಲಿ ಸೈಬರ್ ಸೆಕ್ಯುರಿಟಿ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೀಬೇಕು ಅಂತ ಅನ್ಕೊಂಡಿದ್ದ..! ಅದಕ್ಕಾಗಿಯೇ ಆನ್ಲೈನ್ ತರಬೇತಿಗೆ ಸೇರಿಕೊಂಡಿದ್ದ..! ಹೀಗಿರುವಾಗಲೇ ಅವನೇ ಆಶ್ಚರ್ಯಪಡುವಂತೆ ಬಾಹ್ಯಕಾಶ ಸಂಶೋಧನಾ ಸಂಸ್ಥೆ `ನಾಸಾ’ದಿಂದ “ವಿಮಾನ ಮತ್ತು ಡ್ರೋನ್ಗಳ ಕಣ್ಗಾವಲು ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುವಂತೆ ಆಹ್ವಾನ ಬಂತು..! ಆದ್ದರಿಂದ ಸ್ನಾತಕೋತ್ತರ ಪದವಿ ಮಾಡೋ ಯೋಚನೆಯನ್ನು ಸಧ್ಯಕ್ಕೆ ದೂರ ಮಾಡಿ ನಾಸಾದಲ್ಲಿ ಕೆಲಸ ಮಾಡಲು ಹೊರಟು ಹೋದ(ರು)..! ನೆನಪಿರಲಿ, ನಾಸಕ್ಕೆ ಹೊರಟ ಈ ಹುಡುಗನಿಗಿನ್ನೂ 17 ವರ್ಷ..!
ಆಕಾಶದಲ್ಲಿ ವಿಮಾನವನ್ನೂ ಹಾರಿಸಬಲ್ಲ ಈ 17ರ ಪೋರ.., ಈ ವರ್ಷದ ಅಂತ್ಯದೊಳಗೆ ಪೈಲೆಟ್ ಪರವಾನಿಗೆಯನ್ನು ಪಡೆಯಬೇಕೆಂಬ ಕನಸನ್ನು ಕಂಡಿದ್ದಾನೆ(ರೆ)..! ಲಾಸ್ ಏಂಜೆಲ್ಸ್ ಬಳಿಯ ಇವರ ಮನೆಗೆ ಹೋದರೆ, ಇವರು ಪಡೆದ ಕ್ರೀಡಾ ಪ್ರಶಸ್ತಿಗಳು, ಪದಕಗಳು, ಶೀಲ್ಡ್ ಗಳು, ಮಾರ್ಷಲ್ ಆರ್ಟ್ ನಲ್ಲಿಪಡೆದ ಪ್ರಶಸ್ತಿಗಳನ್ನೂ ನೋಡಬಹದು..!
ಇವರ ತಾಯಿ ಥೈವಾನಿನವರು, ತಂದೆ ಬ್ರೆಜಿಲ್ಲಿನವರು. ಕ್ಯಾವೆಲಿನ್ರಿಗೆ ಅವರ ಸಾಧನೆ ಬಗ್ಗೆ ಕೇಳಿದ್ರೆ..””ನಾನು ಎಲ್ಲರಂತೆ ಸಾಮಾನ್ಯನೇ.. ಅಪ್ಪ ಅಮ್ಮನ ಪ್ರೋತ್ಸಾಹದಿಂದ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಇಷ್ಟೊಂದು ಸಾಧನೆ ಮಾಡಲು ಸಾಧ್ಯವಾಗಿದೆ.. ನಾನು ಎಂದೂ ಅಸಮಾನ್ಯ ಪ್ರತಿಭಾವಂತನೆಂದು ಭಾವಿಸಿಲ್ಲ.” ಅಂತಾರೆ..!
ಕ್ಯಾವೆಲಿನ್ನರ ತಾಯಿ ಮಗನ ಬಗ್ಗೆ ಮಾತನಾಡ್ತಾ..”ನನ್ನ ಮಗ ಎಲ್ಲರಂತೆ ಸಾಮಾನ್ಯ ಹುಡುಗನೇ..! ಆದರೆ ಬೇಗ ಬೇಗ ಕಲಿಯುತ್ತಾನೆ..! ತುಂಬಾ ಚುರುಕಾಗಿದ್ದಾನೆ..! ಅವನು ನಾಲ್ಕು ತಿಂಗಳ ಮಗುವಾಗಿದ್ದಾಗನೇ ಆಕಾಶದಲ್ಲಿ ಹೋಗ್ತಾ ಇದ್ದ ಜೆಟ್ ಅನ್ನು ನಮಗೆ ತೋರಿಸಿದ್ದ..! ಚೀನಿ ಭಾಷೆಯಲ್ಲಿ ವಿಮಾನಕ್ಕಿರುವ ಪದವನ್ನೇ ಆತ ಮೊಟ್ಟಮೊದಲ ಬಾರಿ ಉಚ್ಚರಿಸಿದ್ದು..! ಏಳನೇ ವರ್ಷದವನಿರುವಾಗಲೇ ಟ್ರಿಗ್ನೋಮೇಟ್ರಿ ಕಲಿತಿದ್ದ..! ಅವನು ಶಾಲೆಯಲ್ಲಿ ಕಲಿತಿದ್ದಕ್ಕಿಂತ ಮನೆಯಲ್ಲಿ ಕಲಿತಿದ್ದೇ ಹೆಚ್ಚು…”! ಅಂತಾರೆ.
ಕ್ಯಾವೆಲಿನ್ನ ಗಣಿತ ಪ್ರಾಧ್ಯಪಕರಾದ ಪ್ರೊ. ಡೇನಿಯಲ್ ಜಜ್ ” ಕ್ಯಾವೆಲಿನ್ ಜನ್ಮತಃ ಪ್ರತಿಭಾವಂತ ಎಂದು ಬಹಳಷ್ಟು ಜನ ಭಾವಿಸ್ತಾರೆ..! ಅಂಥಹ ಪ್ರತಿಭೆ ಸ್ವಾಭಾವಿಕವಾಗಿಯೇ ಬರುತ್ತೆ..! ನಿಜ, ಆದರೆ ಈತ ಎಲ್ಲಾ ವಿದ್ಯಾರ್ಥಿಗಳಿಗಿಂತ ಹೆಚ್ಚಿಗೆ ಶ್ರಮವಹಿಸಿ ಕಲಿಯುತ್ತಾನೆ” ಅಂತ ಅಭಿಪ್ರಾಯ ಪಡ್ತಾರೆ..!
ಫ್ರೆಂಡ್ಸ್ ಕೇಳಿದ್ರಲ್ಲಾ.. ಕ್ಯಾವೆಲಿನ್ ಸ್ಟೋರಿಯನ್ನಾ..! 17ನೇ ವಯಸ್ಸಲ್ಲೇ ಎರಡೆರಡು ಪದವಿ ಮಾಡ್ಕೊಂಡು..! ವಿಮಾನವನ್ನೂ ಹಾರಿಸಬಲ್ಲವನಾಗಿ.., ಈಗ ನಾಸಾದಲ್ಲಿ ಕೆಲಸಗಿಟ್ಟಿಸಿಕೊಂಡಿರೋ ಈ ಪೋರನ ಬಗ್ಗೆ ಈಗ ನೀವೇನಂಥೀರಾ..?!

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಕಿರಿಕ್ ಕೀರ್ತಿ ಸ್ಟೈಲಲ್ಲಿ ಹುಚ್ಚ ವೆಂಕಟ್ ವ್ರತ..! ನೋಡಿ, ಸಖತ್ ಎಂಜಯ್ ಮಾಡಿ..! ಇದು ತಮಾಷೆಗೆ..!

ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ಕನ್ನಡ ಕಲರವ..! ರಾಜ್ಯೋತ್ಸವದ ದಿನ ಕನ್ನಡಿಗರಿಗೆ ಕನ್ನಡದಲ್ಲೇ ಸ್ವಾಗತ..!

ನಮ್ಮ ಕನ್ನಡ ಹುಡುಗರ ಕನ್ನಡ ಹಾಡು..! ಕನ್ನಡ ಕನ್ನಡ ಕನ್ನಡ ಅಂತ ಹೆಮ್ಮೆಯಿಂದ ಹಾಡಿದ್ದಾರೆ ನಮ್ಮ ಹೊಸಪೇಟೆ ಹುಡುಗರು

ನಮ್ಮ ಕನ್ನಡದ ರಿಯಲ್ ಹೀರೋಗಳಿವರು..! ಕನ್ನಡಿಗರೆಂದು ಹೆಮ್ಮೆಯಿಂದ ಹೇಳಿಕೊಳ್ಳಿ..!

ನೂರು ವರ್ಷದ ನಂತರ ಕನ್ನಡ ಹೇಗಿರುತ್ತೆ ಗೊತ್ತಾ..? ಕಿರಿಕ್ ಕೀರ್ತಿ ಸ್ಟೈಲಲ್ಲಿ ಅಆಇಈ ಕಲಿಕೆ..!

ನವೆಂಬರ್ ಬಂತು ಅಂದ್ರೆ ಕನ್ನಡದ ರಕ್ತ ಕೊತಕೊತ ಅಂತ ಕುದಿಯುತ್ತೆ..! ನೀವೂ ನವೆಂಬರ್ ಕನ್ನಡಿಗರಾ ಸ್ವಾಮಿ..?

ವೆಲ್ ಕಮ್ ಟು ಸತ್ತವರ ಹೋಟೆಲ್..! ಜಪಾನ್ ನಲ್ಲಿ ನಿರ್ಮಾಣವಾಗಿದೆ ವಿಚಿತ್ರ ಹೋಟೆಲ್

ಇಂಥಾ ಪುಟ್ಟ ಮಕ್ಕಳ ಲೈಫ್ ಬಗ್ಗೆ ಯಾವತ್ತಾದ್ರು ಯೋಚನೆ ಮಾಡಿದ್ದೀವಾ..?!

ಅರಿವಿಲ್ಲದೇ ಪ್ಲಾಸ್ಟಿಕ್ ತಿನ್ನುತ್ತಿದ್ದೀರಿ ಜೋಕೆ..! ಚೀನಾದಿಂದ ಬರುತ್ತಿವೆ ಪ್ಲಾಸ್ಟಿಕ್ ಮೇಡ್ ತಿನಿಸು

ಚಿಂದಿ ಆಯೋ ವೃದ್ಧನ ಬದುಕು ಬದಲಾಗಿದ್ದು ಹೇಗೆ ಗೊತ್ತಾ..?! ಗೆದ್ದೇ ಗೆಲ್ಲುತ್ತದೆ ಒಳ್ಳೇತನ..!

ಭಿಕ್ಷುಕ ಅವರ ಕಾಲಿಗೆ ಬಿದ್ದ..! ಅವರು ಅವನಿಗೆ `ಸ್ಯಾಂಡ್ವಿಚ್’ ಕೊಟ್ಟರು ಆದರೆ…..?! ಭಿಕ್ಷೆ ಹಾಕೋ ಮೊದಲು ಈ ರಿಯಲ್ ಸ್ಟೋರಿ ಓದಿ

ಹುಡುಗಿಯರು ಹುಡುಗರಲ್ಲಿ `ಯಾವುದನ್ನು’ ಇಷ್ಟಪಡ್ತಾರೆ ಗೊತ್ತಾ..?! ಹುಡಗರಲ್ಲಿ ಏನನ್ನು ನೋಡಿ ಹುಡುಗಿಯರು ಅಟ್ರ್ಯಾಕ್ಟ್ ಆಗ್ತಾರೆ..!?

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...