18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಇಲ್ಲ!!

0
58

ನಾಳೆಯಿಂದ ಅಂದರೆ ಮೇ ಒಂದನೇ ತಾರೀಕಿನಿಂದ ಕರ್ನಾಟಕದಲ್ಲಿನ 18 ವರ್ಷದಿಂದ 45 ವರ್ಷದೊಳಗಿನ ಜನರಿಗೆ ಕೊರೊನಾ ಲಸಿಕೆ ಹಾಕುವುದಾಗಿ ರಾಜ್ಯ ಸರ್ಕಾರ ತಿಳಿಸಿತ್ತು. ಈ ವಯಸ್ಸಿನ ಜನರು ತಪ್ಪದೇ ಕೇಂದ್ರಗಳಿಗೆ ಬಂದು ಪುರಾಣ ಲಸಿಕೆಯನ್ನು ಪಡೆದುಕೊಳ್ಳಬೇಕೆಂದು ರಾಜ್ಯಸರ್ಕಾರ ಘೋಷಣೆಯನ್ನೂ ಮಾಡಿತ್ತು.

 

 

ಆದರೆ ಇದೀಗ ಕೊರೊನಾ ಲಸಿಕೆ ದಿನಾಂಕಕ್ಕೆ 1 ದಿನ ಬಾಕಿ ಇರುವಾಗ ರಾಜ್ಯ ಸರ್ಕಾರ ಉಲ್ಟಾ ಹೊಡೆದಿದೆ. ಮಾಧ್ಯಮದವರ ಜತೆ ಮಾತನಾಡಿದ ಸಚಿವ ಸುಧಾಕರ್ ಅವರು ಕೊರೊನಾ ಲಸಿಕೆಗಳ ಕೊರತೆ ಇರುವ ಕಾರಣ ನಾಳೆ ಯಾರೂ ಸಹ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಬರಬೇಡಿ ಎಂದು ಮನವಿ ಮಾಡಿದ್ದಾರೆ. ಕೊರೊನಾ ಲಸಿಕೆಗಳನ್ನು ಖರೀದಿ ಮಾಡಲು ಈಗಾಗಲೇ ತಯಾರಿ ನಡೆಸಿದ್ದೇವೆ ಕರ್ನಾಟಕದಲ್ಲಿ 3.5 ಕೋಟಿ ಜನರು 18-45 ವಯಸ್ಸಿನ ಜನರಿದ್ದು ಹೆಚ್ಚಿನ ಕೊರೋನಾ ಲಸಿಕೆಯ ಅಗತ್ಯವಿದೆ ಹೀಗಾಗಿ ಲಸಿಕೆಗಳು ಸರಿಯಾದ ಪ್ರಮಾಣದಲ್ಲಿ ದೊರಕಿದ ನಂತರ ಮತ್ತೊಂದು ದಿನಾಂಕವನ್ನು ನಿಗಧಿಪಡಿಸುತ್ತೇವೆ.

 

 

 

ಅಲ್ಲಿಯವರೆಗೂ ಯಾರೂ ಸಹ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಬರಬೇಡಿ ಎಂದು ಮನವಿ ಮಾಡಿದ್ದಾರೆ. ಕೊರೊನಾ ಲಸಿಕೆ ಖರೀದಿ ಪ್ರಕ್ರಿಯೆ ನಡೆಯುತ್ತಿದ್ದು ಸರಿಯಾದ ಪ್ರಮಾಣದಲ್ಲಿ ಕೊರೊನಾ ಲಸಿಕೆಗಳನ್ನು ಖರೀದಿಸಿದ ನಂತರ ಬೇರೆ ದಿನಾಂಕದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ಹಾಕಲಾಗುವುದು ಎಂದು ಸರ್ಕಾರ ತಿಳಿಸಿದೆ.

LEAVE A REPLY

Please enter your comment!
Please enter your name here