1980 ಕಾಲಘಟ್ಟದಲ್ಲಿ ಪ್ರಿಯಾಂಕಾ ಉಪೇಂದ್ರ? ಏನಿದು 1980

Date:

ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆಯ 1980 ಟೀಸರ್​ ಬಿಡುಗಡೆ ಆಗಿದ್ದು ರಾಜ್​ಕಿರಣ್​ ಚೊಚ್ಚಲ ನಿರ್ದೇಶನ ಮಾಡಿರುವ ಚಿತ್ರಕ್ಕೆ ಪೂಜಶ್ರೀ ಪ್ರೊಡಕ್ಷನ್​ ಮತ್ತು ನೇಸರ ಪ್ರೊಡಕ್ಷನ್​ ಬ್ಯಾನರ್​ನಲ್ಲಿ ಮೂಡಿಬಂದಿರುವ 1980 ಸಿನಿಮಾ ಸೋಮವಾರ ನಗರದ ಮಂತ್ರಿಮಾಲ್​ನಲ್ಲಿ ಟೀಸರ್​ ಬಿಡುಗಡೆ ಮಾಡಿಕೊಂಡು ಸಂಭ್ರಮಿಸಿದೆ. ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ, ಈಗಾಗಲೇ ಬಹುತೇಕ ಶೂಟಿಂಗ್​ ಮುಗಿಸಿಕೊಂಡಿದ್ದು, ಇನ್ನೇನು ಚಿತ್ರಮಂದಿರಕ್ಕೂ ಆಗಮಿಸಿಲಿದೆ. ಟೀಸರ್​ ಲಾಂಚ್​ ನೆಪದಲ್ಲಿ ಮಾಧ್ಯಮದ ಮುಂದೆ ಬಂದಿದ್ದ ತಂಡ, ಸಿನಿಮಾದ ಹಿನ್ನೆಲೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿತು.


ಮೊದಲಿಗೆ ಮಾತನಾಡಿದ ಚಿತ್ರದ ನಾಯಕಿ ಪ್ರಿಯಾಂಕಾ ಉಪೇಂದ್ರ, ಲಾಕ್​ಡೌನ್​ ಬಳಿಕ ಸಿಕ್ಕ ಸಿನಿಮಾ ಇದು. ಕಥೆ ಕೇಳಿದ ತಕ್ಷಣ ಒಪ್ಪಿಕೊಂಡೆ. ಅಷ್ಟೇ ಅದ್ಬುತವಾಗಿದೆ. ಆರಂಭದಲ್ಲಿ ಶೂಟಿಂಗ್ ಹೇಗಿರುತ್ತದೆ ಎಂದು ಟೆನ್ಷನ್ ಇತ್ತು. ಯಾವ ಸಮಸ್ಯೆ ಇಲ್ಲದೆ ಸಲೀಸಾಗಿ ಶನಿವಾರಸಂತೆಯಲ್ಲಿ ಅಷ್ಟೇ ನೀಟಾಗಿ ಶೂಟಿಂಗ್ ಮುಗಿಸಿದ್ದಾರೆ ನಿರ್ದೇಶಕರು. ಹೊಸ ಟೀಮ್​ನಲ್ಲಿ ಕೆಲಸ ಮಾಡಿ ಖುಷಿಯಾಯ್ತು. ಇತ್ತೀಚಿನ ದಿನಗಳಲ್ಲಿ ಮೇಕಿಂಗ್​ ವಿಚಾರದಲ್ಲಿ ಎಲ್ಲರೂ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಬರವಣಿಗೆ ತುಂಬ ಮಹತ್ವದ್ದು. ಇಲ್ಲಿ ಬರವಣಿಗೆಯೂ ಚೆನ್ನಾಗಿದೆ ಎಂದರು.
ನಿರ್ದೇಶಕ ರಾಜ್​ಕಿರಣ್​ಗಿದು ಮೊದಲ ಸಿನಿಮಾ. ಹಾಗಾಗಿ ಸಿನಿಮಾ ಬಗ್ಗೆ ಹೆಚ್ಚೇನು ಹೇಳದೇ, ತೆರೆಮೇಲೆಯೇ ನೋಡಿ ಎಂದರು. ಇದು ನನ್ನ ಮೊದಲ ಸಿನಿಮಾ. ಶೀರ್ಷಿಕೆಗೆ ತಕ್ಕಂತೆ ಇದು 1980 ಕಾಲಘಟ್ಟದಲ್ಲಿ ನಡೆಯುವ ಕಥೆ. ಸೈಕಲಾಜಿಕಲ್ ಥ್ರಿಲ್ಲರ್ ಶೈಲಿ ಎನ್ನಬಹುದು. ಈ ಸಿನಿಮಾ ಸಿದ್ಧವಾಗಲು ನನ್ನ ಇಡೀ ಟೀಮ್​ ಶ್ರಮಿಸಿದೆ. ಅವರಿಗೆಲ್ಲ ನನ್ನ ಕಡೆಯಿಂದ ಧನ್ಯವಾದ ಎಂದರು.
.

Share post:

Subscribe

spot_imgspot_img

Popular

More like this
Related

LPG Price Hike: ಹೊಸ ವರ್ಷಕ್ಕೆ ಕಮರ್ಷಿಯಲ್ ಸಿಲಿಂಡರ್ ಬೆಲೆ ಭಾರೀ ಹೆಚ್ಚಳ

LPG Price Hike: ಹೊಸ ವರ್ಷಕ್ಕೆ ಕಮರ್ಷಿಯಲ್ ಸಿಲಿಂಡರ್ ಬೆಲೆ ಭಾರೀ...

ಕರ್ನಾಟಕದಲ್ಲಿ ಚಳಿ ಜೋರಾಗಿದೆ: ಬೀದರ್‌ನಲ್ಲಿ 6.4 ಡಿಗ್ರಿ, ಬೆಂಗಳೂರಿನಲ್ಲಿ ಮೋಡ–ತಂಪು ವಾತಾವರಣ

ಕರ್ನಾಟಕದಲ್ಲಿ ಚಳಿ ಜೋರಾಗಿದೆ: ಬೀದರ್‌ನಲ್ಲಿ 6.4 ಡಿಗ್ರಿ, ಬೆಂಗಳೂರಿನಲ್ಲಿ ಮೋಡ–ತಂಪು ವಾತಾವರಣ ಬೆಂಗಳೂರು:...

ಪೊಲೀಸ್ ಇಲಾಖೆಗೆ ಸರ್ಕಾರದಿಂದ ಭಾರಿ ಬದಲಾವಣೆ: ಡಿಐಜಿಪಿ ಹುದ್ದೆಗೆ 23 ಐಪಿಎಸ್ ಬಡ್ತಿ, 20 ಮಂದಿಗೆ ವರ್ಗಾವಣೆ

ಪೊಲೀಸ್ ಇಲಾಖೆಗೆ ಸರ್ಕಾರದಿಂದ ಭಾರಿ ಬದಲಾವಣೆ: ಡಿಐಜಿಪಿ ಹುದ್ದೆಗೆ 23 ಐಪಿಎಸ್...

ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ಸಿಗುವ ಅದ್ಭುತ ಆರೋಗ್ಯ ಮತ್ತು ಮಾನಸಿಕ ಪ್ರಯೋಜನಗಳು

ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ಸಿಗುವ ಅದ್ಭುತ ಆರೋಗ್ಯ ಮತ್ತು ಮಾನಸಿಕ ಪ್ರಯೋಜನಗಳು ರಾತ್ರಿ...