2 ನೇ ಬಾರಿಗೆ 18ನೇ ಲೋಕಸಭೆಯ ಸ್ಪೀಕರ್‌ ಆಗಿ ಓಂ ಬಿರ್ಲಾ ಆಯ್ಕೆ

Date:

ನವದೆಹಲಿ: ಕಳೆದ ಲೋಕಸಭೆಯಲ್ಲೂ ಸ್ಪೀಕರ್‌ ಆಗಿದ್ದ ಎನ್‌ಡಿಎ ಅಭ್ಯರ್ಥಿ ಓಂ ಬಿರ್ಲಾ ಅವರು 2 ನೇ ಬಾರಿಗೆ 18ನೇ ಲೋಕಸಭೆಯ ಸ್ಪೀಕರ್‌ ಆಗಿ ಆಯ್ಕೆಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಓಂ ಬಿರ್ಲಾ ಹೆಸರನ್ನು ಹೇಳಿದರು. ನಂತರ ಪ್ರಧಾನಿ ಮತ್ತು ರಾಹುಲ್ ಗಾಂಧಿ ಅವರನ್ನು ಸ್ಪೀಕರ್‌ ಕುಳಿತುಕೊಳ್ಳುವ ಆಸನಕ್ಕೆ ಕರೆದೊಯ್ದರು. ಇನ್ನೂ ಪ್ರತಿಪಕ್ಷಗಳಿಗೆ ಉಪಸಭಾಪತಿ ಸ್ಥಾನ ನೀಡುವಂತೆ ಷರತ್ತು ಹಾಕಿದ್ದರು.
ಈ ಬಗ್ಗೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಒಮ್ಮತ ಮೂಡಿರಲಿಲ್ಲ. ಎನ್‌ಡಿಎಯಿಂದ ಓಂ ಬಿರ್ಲಾ ಮತ್ತು ವಿರೋಧ ಪಕ್ಷದಿಂದ ಕೆ. ಸುರೇಶ್ ಅಭ್ಯರ್ಥಿಯಾಗಿದ್ದರು. ಸ್ವಾತಂತ್ರ್ಯದ ನಂತರ, ಲೋಕಸಭೆಯ ಸ್ಪೀಕರ್ ಮತ್ತು ಉಪಸಭಾಪತಿಯನ್ನು ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ಒಮ್ಮತದ ಮೂಲಕ ಆಯ್ಕೆ ಮಾಡಲಾಗುತಿತ್ತು. ಆದರೆ ಈ ಬಾರಿ ಇಂಡಿಯಾ ಬಣ ಅಭ್ಯರ್ಥಿ ಘೋಷಣೆಯ ನಂತರ ಚುನಾವಣೆ ನಡೆದಿದೆ.

Share post:

Subscribe

spot_imgspot_img

Popular

More like this
Related

ನಾರಾಯಣಗುರುಗಳ ಕನಸಿನ ಸಹೃದಯ ಭಾರತವನ್ನು ನಾವು ಗಟ್ಟಿಗೊಳಿಸಬೇಕು: ಸಿಎಂ ಸಿದ್ದರಾಮಯ್ಯ

ನಾರಾಯಣಗುರುಗಳ ಕನಸಿನ ಸಹೃದಯ ಭಾರತವನ್ನು ನಾವು ಗಟ್ಟಿಗೊಳಿಸಬೇಕು: ಸಿಎಂ ಸಿದ್ದರಾಮಯ್ಯ ತಿರುವನಂತಪುರ: ವೈವಿಧ್ಯತೆಯ...

ಕಲಬುರಗಿ ಸೆಂಟ್ರಲ್ ಜೈಲಿನ ಅಕ್ರಮಗಳು ಬಯಲು: ಕೈದಿಗಳ ಹೈಫೈ ಲೈಫ್ ವಿಡಿಯೋ ವೈರಲ್

ಕಲಬುರಗಿ ಸೆಂಟ್ರಲ್ ಜೈಲಿನ ಅಕ್ರಮಗಳು ಬಯಲು: ಕೈದಿಗಳ ಹೈಫೈ ಲೈಫ್ ವಿಡಿಯೋ...

ಸಾರಿಗೆ ಇಲಾಖೆ ಎಚ್ಚರಿಕೆಗೂ ಕ್ಯಾರಿಲ್ಲ: ಲಗೇಜ್ ತುಂಬಿಕೊಂಡು ಬಂದ ಬಸ್‌ಗಳು ಸೀಜ್

ಸಾರಿಗೆ ಇಲಾಖೆ ಎಚ್ಚರಿಕೆಗೂ ಕ್ಯಾರಿಲ್ಲ: ಲಗೇಜ್ ತುಂಬಿಕೊಂಡು ಬಂದ ಬಸ್‌ಗಳು ಸೀಜ್ ದೇವನಹಳ್ಳಿ:...

ಕೋಗಿಲು ಅಕ್ರಮ ಮನೆ ತೆರವು ವಿಚಾರ: ಸಿಎಂ–ಡಿಸಿಎಂ ಯೂಟರ್ನ್ ಹೊಡೆದಿದ್ದಾರೆ – ವಿಜಯೇಂದ್ರ ಟೀಕೆ

ಕೋಗಿಲು ಅಕ್ರಮ ಮನೆ ತೆರವು ವಿಚಾರ: ಸಿಎಂ–ಡಿಸಿಎಂ ಯೂಟರ್ನ್ ಹೊಡೆದಿದ್ದಾರೆ –...