No menu items!
24.1 C
Munich
Tuesday, June 2, 2026

ಹಾಲಿನ ದರ ಹೆಚ್ಚಳದ ಲಾಭ ರೈತರಿಗೆ ಸಿಗಲಿದೆ: ಡಿ.ಕೆ ಶಿವಕುಮಾರ್

Must read

ಬೆಂಗಳೂರು: ಹಾಲಿನ ದರ ಹೆಚ್ಚಳದ ಲಾಭ ರೈತರಿಗೆ ಸಿಗಲಿದೆ, ಈ ಹಿಂದೆ ಮೂರು ರೂ. ಈಗ ಎರಡು ರೂ.ಹೆಚ್ಚಳ ಮಾಡಿದ್ದು ಐದು ರೂ.ಗಳಲ್ಲಿ ರೈತರಿಗೆ ಪಾಲು ಸಿಗಲಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿನ ದರ ಹೆಚ್ಚಳದ ಲಾಭ ರೈತರಿಗೆ ಸಿಗಲಿದೆ, ಈ ಹಿಂದೆ ಮೂರು ರೂ. ಈಗ ಎರಡು ರೂ.ಹೆಚ್ಚಳ ಮಾಡಿದ್ದು ಐದು ರೂ.ಗಳಲ್ಲಿ ರೈತರಿಗೆ ಪಾಲು ಸಿಗಲಿದೆ.
ಇದಕ್ಕೆ ವಿರೋಧ ಮಾಡುವ ಮೂಲಕ ಬಿಜೆಪಿಯವರ ರೈತ ವಿರೋಧಿ ಧೋರಣೆ ಅನಾವರಣಗೊಂಡಿದೆ. ಬಿಜೆಪಿ ಆಳ್ವಿಕೆಯ ರಾಜ್ಯದಲ್ಲಿ ಹಾಲಿನ ದರ ಎಷ್ಟಿದೆ ನಮ್ಮ ಬಳಿ ಎಷ್ಟಿದೆ ಎನ್ನುವುದನ್ನು ನೋಡಲಿ ಮೊದಲು ಹಾಗೆ ರೈತರನ್ನ ಉಳಿಸುವ ಚಿಂತನೆ ಮಾಡಲಿ ಎಂದು ಹೇಳಿದರು.
ಇನ್ನೂ ಎಲ್ಲರ ಒತ್ತಾಯದ ಮೇರೆಗೆ ರಾಹುಲ್ ಗಾಂಧಿ ಪ್ರತಿಪಕ್ಷ ನಾಯಕ ಸ್ಥಾನ ಒಪ್ಪಿಕೊಂಡಿದ್ದಾರೆ. ಪ್ರಜಾಪ್ರಭುತ್ವ ಉಳಿಸಲು, ಸಂವಿಧಾನ ಉಳಿಸಲು ರಾಹುಲ್ ಗಾಂಧಿ ಈ ಜವಾಬ್ದಾರಿಗೆ ಸಮ್ಮತಿಸಿದ್ದಾರೆ. ದೇಶಕ್ಕೆ ದೊಡ್ಡ ಅಡಿಪಾಯವನ್ನು ಹಾಕುತ್ತಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು.

Previous article
Next article
ಬೆಂಗಳೂರು: ದೇಶಾದ್ಯಂತ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ಪೆನ್ ಡ್ರೈವ್ ಕೇಸ್ ಭಾರಿ ಸದ್ದು ಮಾಡಿತ್ತು , ಮೂರು ಪ್ರಕರಣಗಳು ಪ್ರಜ್ವಲ್ ರೇವಣ್ಣ ಮೇಲೆ ಈಗಾಗಲೇ ದಾಖಲಾಗಿದ್ವು. ಇನ್ನೂ ಇದಕ್ಕೆ ಸಂಬಂಧಿಸಿದಂತೆ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಆರೋಪ ಪ್ರಕರಣ ದಾಖಲಾಗಿತ್ತು. ಹೊಳೆನರಸೀಪುರ ಟೌನ್ ಠಾಣೆ ಪ್ರಕರಣ ಸಂಬಂಧ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಇಂದು ವಿಚಾರಣೆ ನಡೆಸಿದ 82 ಸೆಷನ್ಸ್ ನ್ಯಾಯಾಲಯವು ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ. ಜ್ವಲ್ ವಿರುದ್ದ ಹೊಳೆನರಸೀಪುರ ,ಕೆ ಆರ್ ನಗರ , ಸಿಐಡಿ , ಸೈಬರ್ ಠಾಣೆ, ಎರಡು ಕೇಸ್ ಸೇರಿದಂತೆ ಒಟ್ಟು ನಾಲ್ಕು ಪ್ರಕರಣ ದಾಖಲಾಗಿದೆ.
- Advertisement -spot_img

More articles

- Advertisement -spot_img

Latest article