ದೇಶದಲ್ಲಿ 500 ಮತ್ತು 1000ರೂ ಮುಖಬೆಲೆಯ ಹಳೆಯ ನೋಟುಗಳನ್ನು ಬ್ಯಾನ್ ಮಾಡಿ ಹೊಸ 500 ಮತ್ತು 2000ರೂ ನೋಟುಗಳನ್ನು ಚಲಾವಣೆಗೆ ತಂದು ಕಾಳಧನಿಕರ ಪಾಲಿಗೆ ಯಮನಾದ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶದಾದ್ಯಂತ ಮೆಚ್ಚುಗೆ ವ್ಯಕ್ತ ಪಡುಸ್ತಾ ಇದಾರೆ.. ಇದರ ಬೆನ್ನಲ್ಲೇ ಕಳೆದೆರಡು ದಿನಗಳಿಂದ ಹೊಸ 2000 ನೋಟುಗಳನ್ನು ಕೊಂಡುಕೊಳ್ಳಲು ಬ್ಯಾಂಕ್ ಎದುರು ಜನ ಕ್ಯೂ ನಲ್ಲಿ ನಿಂತಿರೋದು ನಿಮಗೆ ತಿಳಿದಿರುವ ಸಂಗತಿ.. ಪಿಂಕ್ ಬಣ್ಣದ ಈ ಎರಡು ಸಾವಿರ ನೋಟುಗಳನ್ನು ಕೊಂಡ ಜನರು ಹಣವನ್ನು ನೋಡಿದ್ದೇ ವಿಭಿನ್ನ ಅಭಿಪ್ರಾಯಗಳನ್ನ ಹೊರಹಾಕ್ತಾ ಇರೋದು ಒಂದು ಕಡೆಯಾದ್ರೆ ಅಂತೂ ಇಂತೂ 2000 ರೂ ಹೊಸ ನೋಟು ಸಿಕ್ತಪ್ಪಾ ಅಂತ ಹೊಸ ನೋಟಿನ ಜೊತೆ ಸೆಲ್ಫಿ ತಗೊಂಡು ಖುಷಿ ಪಡ್ತಾ ಇದಾರೆ ಜನ.. ಆದ್ರೆ ಹೊಸ ನೋಟುಗಳು ಬಂದು ಇನ್ನು ಎರಡು ದಿನಗಳೇ ಕಳೆದಿಲ್ಲ ಆಗ್ಲೇ ಇದರ ಖೋಟಾ ನೋಟುಗಳು ಚಲಾವಣೆಯಲ್ಲಿದೆ ಎಂದು ಹಲವು ಖಾಸಗೀ ಮಾಧ್ಯಗಳಲ್ಲಿ ಭಿತ್ತರಿಸಲಾಗಿದೆ..! ಥೇಟ್ ಹೊಸ 2000ರೂ ನಂತೆ ನಕಲಿ ನೋಟುಗಳು ಹರಿದಾಡ್ತಾ ಇದೆ ಎನ್ನಲಾಗಿದೆ..
ಚಿಕ್ಕಮಗಳೂರು ಜಿಲ್ಲೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ಶುಕ್ರವಾರ ನಕಲಿ ನೋಟುಗಳ ಚಲಾವಣೆಯಾಗಿದೆ ಎಂದು ಹೇಳಲಾಗ್ತಾ ಇದೆ.. ಹೊಸ ನೋಟಿನ ನೆತ್ತಿಗೆ ಹೊಡೆದಂತೆ ಇರುವ ನಕಲಿ ನೋಟುಗಳನ್ನು ಕಲರ್ ಜೆರಾಕ್ಸ್ ಗಳ ಮೂಲಕ ತಯಾರು ಮಾಡಲಾಗಿದೆ ಎಂದು ಹೇಳಲಾಗ್ತಾ ಇದೆ. ಅಪರಿಚಿತ ವ್ಯಕ್ತಿಗಳು ನೀಡಿದ ನಕಲಿ 2000 ನೋಟುಗಳನ್ನು ಅಸಲಿ ಎಂದು ತಿಳಿದ ವ್ಯಾಪಾರಸ್ಥರು ಚೇಂಜ್ ನೀಡಿದ್ದಾರೆ. ಆನಂತರವೇ ಅವರಿಗೆ ಅದು ನಕಲಿ ನೋಟು ಎಂದು ತಿಳಿದು ಬಂದಿದೆ..!
ಅಸಲಿಗೆ ಈ ನೋಟ್ ತಯಾರು ಮಾಡಲು ಬಳಸಿಕೊಂಡ ಸಾಧನ ಕಲರ್ ಜೆರಾಕ್ಸ್ ಪ್ರಿಂಟರ್.. ಈ ಮೆಷಿನ್‍ಗಳ ಮೂಲಕ ಥೇಟ್ ಅಸಲಿ 2000 ನೋಟಿನಂತೆ ಹೋಲುವ ಖೋಟಾ ನೋಟುಗಳನ್ನು ಮುದ್ರಿಸಲಾಗ್ತಾ ಇದೆ..! ವಿಪರ್ಯಾಸ ಅಂದ್ರೆ ಕಪ್ಪು ಹಣ ತಡೆಗೆ ಮೋದಿ ಹೊಸ ನೋಟು ಚಲಾವಣೆ ತಂದ ಎರಡೇ ದಿನದಲ್ಲಿ ಖೋಟಾ ನೋಟು ಮುದ್ರಣಗೊಳ್ತಾ ಇರೋದು ಅಚ್ಚರಿಯ ಸಂಗತಿ..!
Like us on Facebook The New India Times
POPULAR STORIES :
2000 ನೋಟಿನಲ್ಲಿ ತಪ್ಪು ಕಂಡು ಹಿಡಿದವರ್ಯಾರು..?
ಹಳೆಯ ನೋಟು ಕೊಟ್ಟು ವಿದ್ಯುತ್ ಬಿಲ್ ಪಾವತಿಸಿ: ಡಿಕೆಶಿ
ನೋಟ್ ಬ್ಯಾನ್ ಆಯ್ತು ಸದ್ಯದಲ್ಲೇ ಬರಲಿದೆ ಇನ್ನೊಂದು ಶಾಕಿಂಗ್ ನ್ಯೂಸ್.!
ಕಸ ಗುಡಿಸುವ ಮಹಿಳೆಗೆ ಸಿಕ್ಕಿತ್ತು ಸಾವಿರ ಮುಖಬೆಲೆಯ ನೋಟುಗಳ ಬ್ಯಾಗ್..!
ನೋಟ್ ಬ್ಯಾನ್ ಆಯ್ತು ಸದ್ಯದಲ್ಲೇ ಬರಲಿದೆ ಇನ್ನೊಂದು ಶಾಕಿಂಗ್ ನ್ಯೂಸ್.!