2003 ರ ವರ್ಲ್ಡ್ ಕಪ್ ತಂಡದಲ್ಲಿದ್ದ ಈ ಆಟಗಾರ ಮಾತ್ರ ಇನ್ನೂ ನಿವೃತ್ತಿ ಘೋಷಿಸಿಲ್ಲ..!

1
127

2003 ರ ವರ್ಲ್ಡ್ ಕಪ್ ತಂಡದಲ್ಲಿದ್ದ ಈ ಆಟಗಾರ ಮಾತ್ರ ಇನ್ನೂ ನಿವೃತ್ತಿ ಘೋಷಿಸಿಲ್ಲ..!
ಟೀಮ್ ಇಂಡಿಯಾದ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಬುಧವಾರ ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದರು. ಅವರ ವಿದಾಯದೊಂದಿಗೆ 2003 ರ ವಿಶ್ವಕಪ್​ನಲ್ಲಿ ಪಾಲ್ಗೊಂಡ ಭಾರತದ ಬಹುತೇಕ ಆಟಗಾರರು ಇಂಟರ್ ನ್ಯಾಷನಲ್ ಕ್ರಿಕೆಟ್ ಗೆ ಗುಡ್​ ಬೈ ಹೇಳಿದಂತಾಗಿದೆ. ಸೌರವ್ ಗಂಗೂಲಿ ಮುನ್ನಡೆಸಿದ್ದ 2003ರ ವಿಶ್ವಕಪ್ ತಂಡದಲ್ಲಿ ಪಾರ್ಥಿವ್ ಪಟೇಲ್ ಸ್ಥಾನ ಪಡೆದಿದ್ದರು. ಆದರೆ ಎಲ್ಲಾ ಪಂದ್ಯಗಳಲ್ಲೂ ಕನ್ನಡಿಗ ರಾಹುಲ್ ದ್ರಾವಿಡ್ ವಿಕೆಟ್ ಕೀಪಿಂಗ್ ಮಾಡಿದ್ದರಿಂದ, ಪಾರ್ಥಿವ್​ ಪಟೇಲ್ ಗೆ ಆಡುವ ಅವಕಾಶ ದೊರೆತಿರಲಿಲ್ಲ. ಇದೀಗ ಅವರು ಕೂಡ ನಿವೃತ್ತಿ ಘೋಷಿಸಿದ್ದಾರೆ. ಆದರೆ 2003ರ ರನ್ನರ್ ಅಪ್ ತಂಡದ ಎಲ್ಲಾ ಆಟಗಾರರು ನಿವೃತ್ತಿ ಘೋಷಿಸಿದ್ದಾರೆ ಎಂದು ನೀವು ಅಂದುಕೊಂಡ್ರೆ ನಿಮ್ಮ ಊಹೆ ತಪ್ಪು. ಏಕೆಂದರೆ ಒಬ್ಬ ಆಟಗಾರ ಮಾತ್ರ ಇನ್ನು ಕೂಡ ನಿವೃತ್ತಿ ನೀಡಿಲ್ಲ.
ಹೌದು, 2003 ವಿಶ್ವಕಪ್​ ತಂಡದ ಆಟಗಾರನಾಗಿದ್ದ ಹರ್ಭಜನ್ ಸಿಂಗ್ ಇನ್ನು ಸಹ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ ಹೇಳಿಲ್ಲ. ಟೀಮ್ ಇಂಡಿಯಾದಿಂದ ಹೊರಬಿದ್ದರೂ ಭಜ್ಜಿ ಇನ್ನೂ ಸಹ ನಿವೃತ್ತಿಯನ್ನು ಘೋಷಿಸಿಲ್ಲ. ಭಾರತ ಪರ 2015 ರಲ್ಲಿ ಕೊನೆಯ ಬಾರಿ ಏಕದಿನ ಪಂದ್ಯ, ಹಾಗೂ 2016 ರಲ್ಲಿ ಟಿ20 ಪಂದ್ಯವನ್ನಾಡಿರುವ ಹರ್ಭಜನ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ತಮ್ಮ ಹೆಸರನ್ನು ಮುಂದುವರೆಸಿರುವುದು ವಿಶೇಷ.
ಟೀಮ್ ಇಂಡಿಯಾ ಪರ 236 ಏಕದಿನ ಪಂದ್ಯಗಳ ಮೂಲಕ 269 ವಿಕೆಟ್, 28 ಟಿ20 ಪಂದ್ಯಗಳಿಂದ 25 ವಿಕೆಟ್‌ ಕಬಳಿಸಿರುವ ಹರ್ಭಜನ್ ಸಿಂಗ್, 103 ಟೆಸ್ಟ್​ ಪಂದ್ಯಗಳಿಂದ 417 ವಿಕೆಟ್ ಕಬಳಿಸಿದ್ದಾರೆ. ಇದೀಗ ಪಾರ್ಥಿವ್ ಪಟೇಲ್ ನಿವೃತ್ತಿಯೊಂದಿಗೆ ಭಜ್ಜಿಯ ನಿವೃತ್ತಿ ಮತ್ತೊಮ್ಮೆ ಚರ್ಚೆಯಾಗಿದೆ. ಅಷ್ಟೇ ಅಲ್ಲದೆ ಐಪಿಎಲ್​ನಲ್ಲೂ ನಿವೃತ್ತಿ ನೀಡಿಲ್ಲ ಎಂಬುದು ವಿಶೇಷ. ಹೀಗಾಗಿ ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲೂ 40 ವರ್ಷದ ಹರ್ಭಜನ್ ಸಿಂಗ್ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

1 COMMENT

LEAVE A REPLY

Please enter your comment!
Please enter your name here